ಪ್ರಗತಿ ಕಾಣುತ್ತಿರುವ ಸವದತ್ತಿ ತಾಲೂಕಿನ ಗುರುಭವನ ಕಟ್ಟಡ ಕಾಮಗಾರಿ

Must Read

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....

ಕೇಂದ್ರ ಸಚಿವ ಭಗವಂತ ಖೂಬಾ ಗುಪ್ತ ಸಭೆ: ಸಭೆಯ ಕೇಂದ್ರ ಬಿಂದು ನಾಯಕ ಯಾರು?

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ದಿನೇ ದಿಏ ರಂಗೇರುತ್ತಿದೆ ಅಲ್ಲದೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಕೇಂದ್ರ ಸಚಿವ...

ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರದಿಂದ ಹಣ – ಕಡಾಡಿ ಮಾಹಿತಿ

ಮೂಡಲಗಿ: ಬೆಳಗಾವಿ ಸ್ಮಾಟ್ ಸಿಟಿ ಮಿಷನ್ ಯೋಜನೆಗೆ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸರ್ಕಾರ 392 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 294...

ಸವದತ್ತಿ: ತಾಲೂಕಿನ ಪುರಸಭೆ ಹತ್ತಿರ ಇರುವ ನಿವೇಶನ ದಲ್ಲಿ ತಾಲೂಕಿನ ಸಮಸ್ತ ಶಿಕ್ಷಕರ ಕನಸಿನ ಕೂಸು ಎಂದೇ ಬಿಂಬಿತವಾಗಿರುವ “ಗುರು ಭವನ” ಕಟ್ಟಡ ನಿರ್ಮಾಣ ಕಾಮಗಾರಿಯು ಕೋರ್ಟ್ ವ್ಯಾಜ್ಯ ದಿಂದ ಇತ್ಯರ್ಥ ಗೊಂಡು ಪುನಶ್ಚೇತನ ಪಡೆದು ಭರದಿಂದ ಸಾಗಿರುವುದನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾದ ಎಚ್. ಆರ್. ಪೆಟ್ಲೂರ್ ಹಾಗೂ ನಿಕಟಪೂರ್ವ ಅಧ್ಯಕ್ಷ ಸುರೇಶ ಬೆಳವಡಿ, ತಾಲೂಕಿನ ನೌಕರರ ಸಂಘದ ಅಧ್ಯಕ್ಷ ಆನಂದಕುಮಾರ ಮೂಗಬಸವ ಸ್ವತಃ ತಾವೂ ಕಾರ್ಯ ದಲ್ಲಿ ಕೈ ಜೋಡಿಸುವ ಮೂಲಕ ಕಾಮಗಾರಿ ಪರಿಶೀಲಿಸಿದರು.

ಕಟ್ಟಡ ಕಾರ್ಮಿಕರಿಗೆ ಈ ಸಂದರ್ಭದಲ್ಲಿ ಗುಣಮಟ್ಟ ಕಾಯ್ದುಕೊಂಡು ಕಾಮಗಾರಿ ಕೈಗೊಳ್ಳಲು ಸಲಹೆ ನೀಡಿದರು. ಮುಂಬರುವ ಸಪ್ಟೆಂಬರ್ 5 ರ ಶಿಕ್ಷಕರ ದಿನಾಚರಣೆ ಗುರು ಭವನ ಉದ್ಘಾಟನಾ ಸಮಾರಂಭ ದೊಂದಿಗೆ ಆಚರಿಸುವ ನಿಟ್ಟಿನಲ್ಲಿ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗಿದ್ದು ಅಂದುಕೊಂಡಂತೆ ನಡೆದರೆ ಇಲ್ಲಿ ಯೇ ಶಿಕ್ಷಕರ ದಿನಾಚರಣೆ ಜರುಗಿಸಲಾಗುವುದು ಎಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ವಿಕಲಚೇತನ ಸಂಪನ್ಮೂಲ ಶಿಕ್ಷಕ ಸಿ. ವ್ಹಿ.ಬಾರ್ಕಿ ಉಪಸ್ಥಿತರಿದ್ದರು. ರಾಜ್ಯದಲ್ಲಿ ಇದೊಂದು ಮಾದರಿ ಗುರುಭವನವಾಗಬೇಕು ಶಿಕ್ಷಕರ ವಿವಿಧ ಕಾರ್ಯ ಕ್ರಮ ಗಳನ್ನು ಈ ಗುರು ಭವನದಲ್ಲಿ ನಡೆಸಲು ಅನುಕೂಲಕರ ವಾತಾವರಣ ನಿರ್ಮಾಣ ವಾಗಬೇಕು ಕೊರತೆಯಾದ ಅನುದಾನವನ್ನು ವಿಧಾನಸಭಾ ಕ್ಷೇತ್ರ ಅನುದಾನ. ವಿಧಾನ ಪರಿಷತ್ ಸದಸ್ಯ ರ ಅನುದಾನ, ಲೋಕಸಭಾ ಸದಸ್ಯರ ಅನುದಾನ ಹೀಗೆ ವಿವಿಧ ಜನಪ್ರತಿನಿಧಿಗಳ ಅನುದಾನ ದ ಮೂಲಕ ಕ್ರೋಢೀಕರಣ ಮಾಡಿ ಕಾಮಗಾರಿ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದು ನಿಕಟಪೂರ್ವ ಅಧ್ಯಕ್ಷ ಸುರೇಶ ಬೆಳವಡಿ ತಿಳಿಸಿದರು.

ಸಾಧ್ಯವಾದಷ್ಟು ಎಲ್ಲಾ ರೀತಿಯ ಸಹಕಾರ ಸಹಾಯ ದೊಂದಿಗೆ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದು ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಆನಂದ ಮೂಗಬಸವ ತಿಳಿಸಿದರು.

- Advertisement -
- Advertisement -

Latest News

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....
- Advertisement -

More Articles Like This

- Advertisement -
close
error: Content is protected !!