Homeಸುದ್ದಿಗಳುಹಳಕಟ್ಟಿ ಅವರು ವಚನ ಪ್ರಕಟಿಸಿ ಜಗತ್ತಿಗೆ ಜ್ಞಾನ ಬೆಳಗಿಸಿದ ಪಿತಾಮಹ

ಹಳಕಟ್ಟಿ ಅವರು ವಚನ ಪ್ರಕಟಿಸಿ ಜಗತ್ತಿಗೆ ಜ್ಞಾನ ಬೆಳಗಿಸಿದ ಪಿತಾಮಹ

ಬೆಳಗಾವಿ- ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶನಗರ ಬೆಳಗಾವಿಯಲ್ಲಿ ದಿನಾಂಕ 06 ರಂದು ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರ ಜಯಂತಿ ಆಚರಿಸಲಾಯಿತು.

ಪ್ರಾರಭದಲಿೢ ಮಹಾದೇವಿ ಅರಳಿ ವಚನ ಪ್ರಾಥ೯ನೆ ನಡೆಸಿಕೂಟ್ಟರು ಮತ್ತು ಡಾ ಫ.ಗು.ಹಳಕಟ್ಟಿ ಜಯಂತಿ ನಿಮಿತ್ತ ಬೆಳಗಾವಿ ಜಿಲ್ಲಾ ಮಟ್ಟದ ವಚನ ಕಂಠಪಾಠ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಅವರ ಜೀವನ ಸಂದೇಶ ಕುರಿತು ಅನುಭಾವವನ್ನು ಪೂಜ್ಯ ವಾಗ್ದೇವಿ ತಾಯಿಯವರು ಬಸವ ತತ್ವ ಅನುಭವ ಕೇಂದ್ರ ಬೆಳಗಾವಿ ಅವರು ನೀಡಿದರು.ಜಗಲಿ ಕಟ್ಟಿ ಕೊಟ್ಟರು.ವಚನ ಕಟ್ಟುಗಳು ಸಂಗ್ರಹಿಸಿ ಪ್ರಕಟಿಸಿದರು. ವಿದ್ಯಾಥಿ೯ ಇದ್ದಾಗಲೆ ಸಂಘಟನೆ ಮಾಡಿದರು.ಹಾಲಬಾವಿ ಅವರ ಮನೆಯಲ್ಲಿ ಹಳೆಯ ಗ್ರಂಥಗಳು ಸಿಕ್ಕವು ಅಲ್ಲದೆ ತಾಡೊಲೆಗಳು ಸಂಗ್ರಹಿಸಿ ಅವುಗಳನ್ನು ಪ್ರಕಟಿಸಿದರು.ಬೇರೆ ಬೇರೆ ಗ್ರಾಮದಿಂದ ತಾಡೋಲೆ ಸಂಗ್ರಹಿಸಿದರು.ಬೆಳಗಾವಿಯಲ್ಲಿ ವಕೀಲಕಿ ಪ್ರಾರಂಭಿಸಿದರು ನಂತರ ವಿಜಯಪೂರಕ್ಕೆ ಹೋದರು.ವ್ಯಾಜಗಳನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿ ಕಳಿಸುತ್ತಿದ್ದರು.ಅವರ ಫೀ ಅಂದರ ತಾಡೊಲೆಗಳು ಎಲ್ಲಿ ಇವೆ ಅವುಗಳನ್ನು ಕೇಳಿ ಪಡೆಯುತ್ತಿದ್ದರು.ಅನೇಕ ಸಹಕಾರ ಸಂಘಗಳು ಸ್ಥಾಪಿಸಿದರು ನೊಂದಣಿ ಮಾಡಿಸಿ ಕೊಡುತ್ತಿದ್ದರು. ಸಿದ್ದೇಶ್ವರ ಬ್ಯಾಂಕ ಸಹ ರಜಿಸ್ಟರ ಮಾಡಿಸಿಕೊಟ್ಟರು. ಶಾಲೆಗಳನ್ನು ಸಹ ಪ್ರಾರಂಭಿಸಿದರು.ಕನ್ನಡ ಭಾಷೆಯನ್ನು ಕನ್ನಡ ಅಂಕಿಗಳನ್ನ ಬಳಿಸಿ ಲೆಕ್ಕ ಪತ್ರ ಬರೆಯಲು ಪ್ರೋತ್ಸಾಹಿಸಿದರು. ಬಿ ಎಲ್ ಡಿ ಸಂಸ್ಥೆ ಸ್ಥಾಪಿಸಲು ಪ್ರೇರಣೆ ನೀಡಿದರು. ಅನೇಕ ಪುಸ್ತಕಗಳನ್ನು ಪ್ರಕಟಿಸಿದರು. ಪೂಜ್ಯ ಕುಮದಿನಿ ತಾಯಿಯವರು ವಚನಗಳನ್ನು ರಾಗಬದ್ಧವಾಗಿ ಹೇಳಿಕೊಟ್ಟರು ಎಂದು ಹಳಕಟ್ಟಿಯವರ ಬಗ್ಗೆ ಹೇಳಿದರು.

ಮುಖ್ಯ ಅತಿಥಿಗಳಾಗಿ ಶರಣ ಮಹಾಂತೇಶ ತೊರಣಗಟ್ಟಿ ಆಗಮಿಸಿದ್ದರು. ಶರಣೆ ಕಮಲಾ ಗಣಾಚಾರಿ ದಾಸೋಹ ಸೇವೆಗೈದರು.ಅಕ್ಕಮಹಾದೇವಿ ತೆಗ್ಗಿ,ಸುಜಾತಾ ಮತ್ತಿಕಟ್ಟಿ, ಜಯಶ್ರೀ ಚಾವಲಗಿ, ಸುವರ್ಣ ಗುಡಸ, ಜಾಹ್ನವಿ ಘೊಪ೯ಡೆ, ವಿದ್ಯಾ ಕಕಿ೯, ಸುರೇಶ ನರಗುಂದ, ಸದಾಶಿವ ದೇವರಮನಿ, ಬಸವರಾಜ ಕರಡಿಮಠ, ಶಿವಪುತ್ರಯ್ಯ ಪೂಜಾರ,ಶ೦ಕರ ರಾವಳ,ಬಾಬಣ್ಣ ತಿಗಡಿ ದ೦ಪತಿಗಳು, ಮಹದೇವ ಕೆ೦ಪಿಗೌಡರ, ಶೇಖರ ವಾಲಿ ಇಟಗಿ, ಮಹಾಂತೇಶ ಮೆಣಸಿನಕಾಯಿ,ಶಿವಾನಂದ ಲಾಳಸಂಗಿ,ಗುರುಸಿದ್ದಪ್ಪ ರೇವಣ್ಣವರ,ಗದಿಗೆಪ್ಪ ತಿಗಡಿ,ಶಂಕರ ಗುಡಸ,ಸಿ ಎಂ ಬೂದಿಹಾಳ,ಬಸವರಾಜ ಬಿಜ್ಜರಗಿ,ಶಿವಾನಂದ ತಲ್ಲೂರ,ಅ.ಬ.ಇಟಗಿ, ಶಿವಾನಂದ ನಾಯಕ,ಶರಣಶರಣೆಯರು ಉಪಸ್ಥಿತರಿದ್ದರು ಸಂಗಮೇಶ ಅರಳಿ ನಿರೂಪಿಸಿದರು ಸುರೇಶ ವಂದಿಸಿದರು

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group