ಬೀದರ: ಗಡಿ ಜಿಲ್ಲೆ ಬೀದರ್ ಹುಲಸುರ ತಾಲ್ಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ನಡೆದ ಹಿಂದೂ ಮತ್ತು ಮುಸ್ಲಿಮ್ ಸಮುದಾಯದ ಜನರು ಒಟ್ಟಿಗೆ ಸೇರಿ ಮಳೆಗಾಗಿ ಜಾತ್ರೆ ಮಾಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಹಾಲಹಳ್ಳಿ ಗ್ರಾಮದಲ್ಲಿ ಸರ್ವರೆಲ್ಲರು ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ಹಾಗೆ ಸತ್ಯವಂತ ದೇವರು ಎಂದು ನಂಬಿಕೊಂಡು ಬಂದ ದೇವರು ಗೈಬಿ ಸಾಹೇಬ್ ದರ್ಗಾದಲ್ಲಿ ಖಾಂಡ ನಿಮಿತ್ತ ಜರುಗಿದ ಜಾತ್ರೆಯಲ್ಲಿ ರೈತರೆಲ್ಲರು ಕೂಡಿ ಮಳೆ ಬರಲಿ ಎಂದು ಪ್ರಾರ್ಥಿಸಿದರು.
ಪ್ರತಿ ವರ್ಷ ನಡೆಯುವ ಈ ಜಾತ್ರೆಯಲ್ಲಿ ಸುತ್ತಮುತ್ತಲಿರುವ ಗ್ರಾಮಗಳಾದ ಜವಳಗಾ , ಕಾದ್ರಾಬಾದ ವಾಡಿ, ಮೋರಂಬಿ,ರಾಚಪ್ಪ ಗೌಡ ಗಾಂವ್, ತೋಗಲೂರ್, ಹುಲಸೂರಿನ ಜನ ಸೇರಿ ಹುಗ್ಗಿ, ಅನ್ನ ಸಾರಿನ ಸವಿಯನ್ನು ಸವಿದರು ೩೦೦೦ ಕಿಂತ ಹೆಚ್ಚು ಜನ ಪಾಲ್ಗೊಂಡಿದ್ದು ದೇವರ ದರ್ಶನ ಪಡೆದು ಪುನೀತರಾದರು.
ಸಾಯಂಕಾಲ ಮೆರವಣಿಗೆ ಮಾಡುತ್ತಾ ಕುಣಿಯುತ್ತಾ ಬಂದ ಜನ ಸರಿ ಸುಮಾರು ೯ ಗಂಟೆಯವರೆಗೆ ನೃತ್ಯ ಮಾಡಿದರು. ಸಣ್ಣವರು ದೊಡ್ಡೋರು ಎಲ್ಲರೂ ಕೂಡಿ ಮಾಡಿದ ನೃತ್ಯ ಈ ಗ್ರಾಮ ಭಾವೈಕ್ಯತೆಗೆ ಸಾಕ್ಷಿ ಆಯಿತು ಎಂದು ಹೇಳಬಹುದು.
ವರದಿ: ನಂದಕುಮಾರ ಕರಂಜೆ, ಬೀದರ