ಹನಿಗವನಗಳು

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

(ಮಾನವ್ಯದ ಕವಿ ಡಾ// ಸಿದ್ದಲಿಂಗಯ್ಯನವರನ್ನು ಕುರಿತು)

ಅಡ್ಡಾಡಿ ಅಡ್ಡಾಡಿ- ಬೆಡ್ಡಿಗಾಗಿ
ಸೋತು ಸಣ್ಣವಾಯಿತು ದೇಹ
ತಲೆ ನೋವು ಜ್ವರ ಹೆಚ್ಚಾಗಿ – ಉಸಿರುಗಟ್ಟತೊಡಗಿತು
ಈ ನೆಲದ ಸಮತೆಗಾಗಿ
ಕಚ್ಚಿದ ಮೊಗ್ಗುಗಳ ಹೊಸ ಪರಿಮಳಕಾಗಿ – ಹೋರಾಡಿದವಗೆ
ಪ್ರಾಣವಾಯು ಎರವಾಗಿ ಮಾರಿಗೌತಣವಾಯ್ತು…..!!


ಕಾಡ ಹಳ್ಳಿಯಲ್ಲಿ
ಕತ್ತಲು ಕವಿದ ಕೇರಿಗಳಲ್ಲಿ
ಬಿಸಿಲಿಗೆ ಬರಿ ಮೈಒಡ್ಡಿದ
ತಾಯ ಎದೆಹಾಲ ಹಸುಳೆಗೂಸು
ಆಕಾಶದ ನಕ್ಷತ್ರಗಳನೆಣಿಸುತ್ತ
ಕಣ್ಣು ತುಂಬಿಕೊಳ್ಳುತ್ತಲೇ
ಬೆಳೆದು ಬೆಟ್ಟವಾದ
ಕೊನೆಗೆ ಕೇರಿಗೆ ಪ್ರಜ್ವಲಿಸುವ ನಕ್ಷತ್ರವೇ ಆದ……!!


- Advertisement -

ಸಮತೆಯ ಅರಿವು
ತಿಳಿವಳಿಕೆ ಇದ್ದರೆ ಸಾಲದು
ಅದು ಅಸ್ತ್ರವಲ್ಲದ ಶಸ್ತ್ರವಾದೀತು
ಬದಲಾಗಿ ಬೇಕು
ಘನಸರ್ಕಾರದ
ಫರ್ಮಾನುಗಳು ದಾರಿ ತೋರ್ಯಾವು
ಹನಿ ನೀರು ಬಿಟ್ಟಾವು……..!!
ಕೇರಿಗಳಿಗೆ ಊರಿನ ಡೊಂಕು ದಾರಿಗಳಿಗೆ………!!


ನಾಲಿಗೆ ಇದ್ದೂ ನರ ಕಳಕೊಂಡವರ
ರಟ್ಟೆ ಇದ್ದೂ ಶಕ್ತಿ ಅಡಗಿಕೊಂಡವರ
ಶುದ್ದ ಮನಸಿದ್ದೂ
ಅಸ್ಪೃಶ್ಯತೆ ಗೆರೆಯಲ್ಲಿ ಮಡಗಿಕೊಂಡವರ
ಎದೆ ಧಮನಿಯೊಳಗೊಂದಾದಶಕ್ತಿ…..!!


ಇಂದು ನೀನೆಲ್ಲಿಗೆ ಹೋದೆ
ಬಂಧು ಬಾಂಧವರಿಲ್ಲದೆ
ಅವರ ಕಣ್ಣೀರ ಅಭಿಷೇಕವಿಲ್ಲದೆ
ಹೂವು ಕಾಯಿಗಳಿಲ್ಲದೇ
ಒಂಟಿಯಾಗಿ
ಶಾಸ್ತ್ರಕ್ಕಾಯಿತು ತ್ರಿವರ್ಣ ಬಟ್ಟೆ…!!
ಇಲ್ಲಿ ನಿನ್ನವರ
ಪ್ರೀತಿ ಹೆಪ್ಪುಗಟ್ಟಿದೆ
ಕರುಳು ಕಿವಿಚುತಿವೆ ದಶದಶಕಗಳ ಮಾತುಗಳು ಬಾಕಿ ಉಳಿದಿವೆ

ನಮೋ…..ಓಂಶಾಂತಿ


ಯಮುನಾ .ಕಂಬಾರ
ರಾಮದುರ್ಗ

- Advertisement -
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!