spot_img
spot_img

ಶಿಕ್ಷಣ ಸಾರಥಿ ಪ್ರಶಸ್ತಿಗೆ ಹನುಮಂತಪ್ಪ ಕುರಿ ಭಾಜನ

Must Read

spot_img

ಕೊಪ್ಪಳ: ಬಹದ್ದೂರಬಂಡಿ ಕ್ಲಸ್ಟರನ ಸಿ.ಆರ್.ಪಿ.ಹನುಮಂತಪ್ಪ ಕುರಿ ಅವರು ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು ವತಿಯಿಂದ ನೀಡಲಾಗುವ ಶಿಕ್ಷಣ ಸಾರಥಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹನುಮಂತಪ್ಪ ಕುರಿ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷವಾಗಿ ಶಾಲೆ ಬಿಟ್ಟ ಮಕ್ಕಳನ್ನು ಪುನ: ಶಾಲೆಗೆ ಸೇರಿಸುವ,ಕರೋನಾ ಜಾಗೃತಿ,ಮತದಾನ ಜಾಗೃತಿ ಕುರಿತಂತೆ ಸ್ವಂತ ಸಾಹಿತ್ಯವನ್ನು ರಚನೆ ಮಾಡುವುದರ ಜೊತೆಗೆ ತಾನೇ ಹಾಡುವುದರ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುವುದನ್ನು ಗಮನಿಸಿ ಈ ಪ್ರಶಸ್ತಿ ನೀಡಲಾಗಿದೆ.

ಶಿಕ್ಷಣ ಸಾರಥಿ ಪ್ರಶಸ್ತಿಯನ್ನು ಜು.೨೪ ರ ಭಾನುವಾರ ತುಮಕೂರು ನಗರದಲ್ಲಿ ಇರುವ ಉದ್ದಾನೇಶ್ವರ ಕಲ್ಯಾಣ ಮಂಟಪದಲ್ಲಿ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ ಅವರು ಪ್ರದಾನ ಮಾಡಲಿದ್ದಾರೆ ಎಂದು ಶಿಕ್ಷಕರ ಪ್ರತಿಭಾ ಪರಿಷತ್ತಿನ ಅಧ್ಯಕ್ಷರಾದ ಟಿ.ಮಹೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಕ್ಷಣ ಸಾರಥಿ ಪ್ರಶಸ್ತಿಗೆ ಆಯ್ಕೆ, ಹರ್ಷ:

ಬಹದ್ದೂರಬಂಡಿ ಸಿ.ಆರ್.ಪಿ.ಹನುಮಂತಪ್ಪ ಕುರಿ ಅವರು ಶಿಕ್ಷಣ ಸಾರಥಿ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ನಾಗರಾಜ ಜುಮ್ಮಣ್ಣನ್ನವರ,ಜಿಲ್ಲಾ ಕಾರ್ಯಾಧ್ಯಕ್ಷರಾದ ಶಿವಪ್ಪ ಜೋಗಿ, ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ,ರಾಜ್ಯ ಖಜಾಂಚಿ ಮಂಜುನಾಥ ಹಿಂಡಿಹುಳ್ಳಿ,ರಾಜ್ಯ ತಾಂತ್ರಿಕ ಗೌರವ ಸಲಹೆಗಾರರಾದ ಕಾಶಿನಾಥ ಸಿರಿಗೇರಿ,ಜಿಲ್ಲಾಧ್ಯಕ್ಷರಾದ ಅಂದಪ್ಪ ಬೋಳರಡ್ಡಿ,ಎಸ್.ಸಿ. ಹಾಗೂ ಎಸ್.ಟಿ. ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಅಣ್ಣಪ್ಪ ಹಳ್ಳಿ,ಕಾರ್ಯದರ್ಶಿ ಹುಲುಗಪ್ಪ ಭಜಂತ್ರಿ,ಬಿ.ಆರ್.ಪಿ.ಗಳಾ ಚಂದ್ರು ಹೆಳವರ,ಶರಣಪ್ಪ ರಡ್ಡೆರ, ಸಿ.ಆರ್.ಪಿ.ಸುರೇಶ ಕಂಬಳಿ,ಶಿಕ್ಷಕರಾದ ಗುರುಸ್ವಾಮಿ ಮುಂತಾದವರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

- Advertisement -
- Advertisement -

Latest News

ಸೈನಿಕರಂತೆ ಸದಾ ಸೇವೆ ಸಲ್ಲಿಸುವ ಪೊಲೀಸರ ಕಾರ್ಯ ಸ್ತುತ್ಯರ್ಹ- ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸರು ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯರ್ಹವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು. ರವಿವಾರದಂದು ತಾಲೂಕಿನ ಕುಲಗೋಡ...
- Advertisement -

More Articles Like This

- Advertisement -
close
error: Content is protected !!