spot_img
spot_img

ವಿಶ್ವ ಅಪ್ಪಂದಿರ ದಿನ- Happy Fathers Day

Must Read

- Advertisement -

ನಮ್ಮ ಜೀವನದಲ್ಲಿ ತಂದೆ ಅಥವಾ ತಂದೆ ವಯಸ್ಸಿನ ವ್ಯಕ್ತಿಗಳನ್ನು ಗೌರವಿಸಲು ತಂದೆಯ ದಿನವನ್ನು ಆಚರಿಸಲಾಗುತ್ತದೆ. ತನ್ನ ಮಕ್ಕಳಿಗಾಗಿ ತಂದೆ ತೋರಿದ ಪ್ರೀತಿ, ಗೌರವ, ಬೋಧನೆಗಳು ಮತ್ತು ತ್ಯಾಗಗಳನ್ನೂ ನೆನಪಿಸುವ ದಿನವಿದು. ಅವರು ತಮ್ಮ ಕುಟುಂಬದ ಶಕ್ತಿಯ ಆಧಾರ ಸ್ತಂಭವಾಗಿ ಕಾರ್ಯನಿರ್ವಹಿಸುತ್ತಾರೆ. *ಮಕ್ಕಳು ಹಾಗೂ ಅಪ್ಪನ ನಡುವಿನ ಪ್ರೀತಿಯ ಸಂಕೇತವಾಗಿ ಪ್ರತೀ ವರ್ಷ ಜೂನ್ ತಿಂಗಳ ಮೂರನೇ ಭಾನುವಾರದಂದು ವಿಶ್ವ ಅಪ್ಪಂದಿರ ದಿನವನ್ನಾಗಿ ಆಚರಿಸಲಾಗುತ್ತದೆ.

ಅಪ್ಪನಿಗೊಂದು ಸಲಾಂ:

ಅಪ್ಪನೆಂದರೆ ತ್ಯಾಗ, ಅಪ್ಪನೆಂದರೆ ಬದುಕು; ಅಮ್ಮ ಎನ್ನುವ ದೇವತೆ ಹೊತ್ತು – ಹೆತ್ತು ಹಾಲನ್ನಿತ್ತು ಬೆಳೆಸಿದರೆ, ಅಪ್ಪ ಅನ್ನೋ ಜೀವ ಮಗುವಿಗೆ ಬಲ ತುಂಬುತ್ತದೆ, ರಕ್ಷಣೆ ಒದಗಿಸುತ್ತದೆ. ಮೌನವಾಗಿಯೇ ನಮ್ಮೆಲ್ಲ ಜವಾಬ್ದಾರಿಯನ್ನು ಹೊರುವ ಅಪ್ಪ ಮಳೆ, ಚಳಿ, ಗಾಳಿ, ಬಿಸಿಲು ಎನ್ನದೇ ನಮಗಾಗಿ ಬೆವರು ಸುರಿಸುತ್ತಾನೆ, ನಿದ್ದೆಗೆಡುತ್ತಾನೆ. ನಿಮಗಾಗಿ ಬದುಕು ತೆತ್ತೆ ಎನ್ನದ ಅಪ್ಪ ಸದಾ ನಮಗಾಗಿಯೇ ಹೆಣಗಾಡುತ್ತಾನೆ. ಬದುಕು ರೂಪಿಸಿದ, ಜೀವನ ಪಾಠ ಕಲಿಸಿದ, ಕಿರು ಬೆರಳ ಹಿಡಿದು ಮುನ್ನಡೆಸಿದ ಅಪ್ಪನ ಪ್ರೀತಿ, ತ್ಯಾಗ, ಮಮಕಾರವನ್ನು ಸ್ಮರಿಸುವ ಉದ್ದೇಶದಿಂದ ಅಕ್ಕರೆಯ ಅಪ್ಪನಿಗೊಂದು ಕೃತಜ್ಞತೆ ಹೇಳುವ ದಿನವಿದು.

ಸಮಾಜದಲ್ಲಿ ಅಸ್ತಿತ್ವವನ್ನು ಒದಗಿಸಿಕೊಟ್ಟವರು ಅಪ್ಪ. ಅಪ್ಪ ಅಮ್ಮನಂತೆ ಸಲುಗೆಯಿಂದ ಇರುವುದು ತುಂಬಾ ಕಡಿಮೆ. ಹೀಗಾಗಿ ಅಪ್ಪನಿಗೆ ಸಲ್ಲಬೇಕಾದ ಪ್ರೀತಿಯ ಪಾಲು ಕೂಡ ಅಮ್ಮನತ್ತವೇ ಹರಿದು ಬಿಡುತ್ತದೆ. ಮಕ್ಕಳ ಭವಿಷ್ಯಕ್ಕಾಗಿ ಶಿಸ್ತಿನ ಸಿಪಾಯಿಯ ಪಾತ್ರ ನಿರ್ವಹಿಸುವ ಅಪ್ಪ ಜೀವನದುದ್ದಕ್ಕೂ ಕೊಂಚ ಗಡುಸಾಗಿಯೇ ಕಾಣಿಸುತ್ತಾರೆ. ಆದರೆ ಅವರಲ್ಲೂ ಆಕಾಶದಲ್ಲಿ ಪ್ರೀತಿ, ವಾತ್ಸಲ್ಯ ಇರುತ್ತದೆ. ಅಪ್ಪನ ಪ್ರೀತಿ ಅಮ್ಮನ ಪ್ರೀತಿಯಷ್ಟೇ ವಿಶಾಲವಾದದ್ದು.

- Advertisement -

ಅದನ್ನು ಗೌರವಿಸಲು ಪ್ರತಿ ವರ್ಷ ಜೂನ್ ತಿಂಗಳ ಮೂರನೇ ಭಾನುವಾರದಂದು ತಂದೆಯ ದಿನವನ್ನು ಆಚರಿಸಲಾಗುತ್ತದೆ. 1910 ರಲ್ಲಿ ಪ್ರಾರಂಭವಾದಾಗಿನಿಂದ, ತಂದೆ ದಿನವನ್ನು ಪ್ರಪಂಚದಾದ್ಯಂತ ಮತ್ತು ವಿವಿಧ ಸಂಪ್ರದಾಯಗಳು ಮತ್ತು ಪ್ರದೇಶಗಳಲ್ಲಿ ಹಲವಾರು ರೀತಿಯಲ್ಲಿ ಆಚರಿಸಲಾಗುತ್ತದೆ.

ಫಾದರ್ಸ್ ಡೇ ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆ. ಹಲವೆಡೆ ಈ ದಿನವನ್ನು ಜೂನ್ 3ನೇ ಭಾನುವಾರದಂದು ಆಚರಿಸಲಾಗುತ್ತದೆ. ಸ್ಪೇನ್ ಮತ್ತು ಪೋರ್ಚುಗಲ್ ನಂತಹ ದೇಶಗಳು ಮಾರ್ಚ್ 19 ರಂದು ಸೇಂಟ್ ಜೋಸೆಫ್ ದಿನದಂದು ತಂದೆಯ ದಿನಾಚರಣೆಯನ್ನು ಆಚರಿಸುತ್ತಾರೆ. ತೈವಾನ್ ನಲ್ಲಿ ಆಗಸ್ಟ್ 8 ರಂದು ಹಾಗೂ ಥೈಲಾಂಡ್ ನಲ್ಲಿ ಡಿಸೆಂಬರ್ 5 ರಂದು ಆಚರಿಸಲಾಗುತ್ತದೆ.

ಹಿನ್ನೆಲೆ:

ಯುನೈಟೆಡ್ ಸ್ಟೇಟ್ ನಲ್ಲಿ ಭೀಕರವಾದ ಅಪಘಾತವೊಂದು ನಡೆಯಿತು. 1908 ಜುಲೈ 5 ರಂದು ಪಶ್ಚಿಮ ವರ್ಜೀನಿಯಾದಲ್ಲಿ ನಡೆದ ಅಪಘಾತದಲ್ಲಿ ನೂರಾರು ಪುರುಷರು ಸಾವಿಗೀಡಾದರು. ಅಮೆರಿಕದ ಅಂತರ್ಯುದ್ಧದ ಅನುಭವಿ ವಿಲಿಯಂ ಜಾಕ್ಸನ್ ಸ್ಮಾರ್ಟ್ ಅವರ ಪುತ್ರಿ ಸೊನೊರಾ ಸ್ಮಾರ್ಟ್ ಡಾಡ್ ಅಪಘಾತದಲ್ಲಿ ಮರಣ ಹೊಂದಿದವರ ನೆನಪಿಗಾಗಿ ಭಾನುವಾರ ಗೌರವ ಸೂಚಿಸಿದರು. ಇವರು ವಾಷಿಂಗ್ಟನ್ ನ ಸ್ಪೋಕೇನ್ ನವರು. ಇವರು ತಂದೆಯ ದಿನದ ಪರಿಕಲ್ಪನೆಯನ್ನು ಸ್ಥಾಪಿಸುವ ಯೋಜನೆಯನ್ನು ಯೋಜಿಸಿದರು. ಸೋನೊರಾಳ ತಾಯಿ ತನ್ನ ಆರನೇ ಮಗುವಿಗೆ ಜನ್ಮ ನೀಡುವಾಗ 16 ನೇ ವಯಸ್ಸಿನಲ್ಲಿ ನಿಧನರಾದರು. ತನ್ನ ತಂದೆಯೊಂದಿಗೆ, ಸೋನೋರಾ ತನ್ನ ಕಿರಿಯ ಸಹೋದರರನ್ನು ಬೆಳೆಸಿದಳು.

- Advertisement -

ಹೊಸದಾಗಿ ಗುರುತಿಸಲ್ಪಟ್ಟ ತಾಯಂದಿರ ದಿನದ ಬಗ್ಗೆ ಚರ್ಚ್ ಕೇಳುತ್ತಿರುವಾಗ ತಂದೆಗಳಿಗೆ ಮನ್ನಣೆಯ ಅಗತ್ಯವಿದೆ ಎಂದು ಸೊನೊರಾ ಭಾವಿಸಿದರು. ತನ್ನ ತಂದೆಯ ಮೇಲಿನ ಅತ್ಯಂತ ಪ್ರೀತಿ ಮತ್ತು ಗೌರವದಿಂದ, ಅವಳು ಸ್ಪೋಕೇನ್ ಮಂತ್ರಿ ಮೈತ್ರಿಕೂಟವನ್ನು ಸಂಪರ್ಕಿಸಿದಳು ಮತ್ತು ತನ್ನ ತಂದೆಯ ಜನ್ಮದಿನವಾದ ಜೂನ್ 5 ನ್ನು ತಂದೆಯ ದಿನವೆಂದು ಗುರುತಿಸುವಂತೆ ಕೇಳಿಕೊಂಡಳು. ಆದಾಗ್ಯೂ, ಅವರು ಈ ಸಂದರ್ಭವನ್ನು ತಿಂಗಳ ಮೂರನೇ ಭಾನುವಾರದಂದು ಇರಿಸಿಕೊಳ್ಳಲು ನಿರ್ಧರಿಸಿದರು.

ಬಳಿಕ ಹಲವು ವರ್ಷಗಳ ನಂತರ ತಂದೆಯ ದಿನವು ಜನಪ್ರಿಯವಾಯಿತ ಮತ್ತು ರಾಷ್ಟ್ರದಾದ್ಯಂತ ಆಚರಿಸಲಾಯಿತು. ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್ 1966 ರಲ್ಲಿ ಅಧ್ಯಕ್ಷೀಯ ಘೋಷಣೆಗೆ ಸಹಿ ಹಾಕಿದರು. ಜೂನ್ ಮೂರನೇ ಭಾನುವಾರವನ್ನು ತಂದೆಯ ದಿನವೆಂದು ಆಚರಣೆಗೆ ಅಧಿಕೃತವಾಗಿ ಘೋಷಿಸಿದರು.

ನಮ್ಮ ಜೀವನದಲ್ಲಿ ತಂದೆಯ ಪಾತ್ರವನ್ನು ಗೌರವಿಸುವ ಮತ್ತು ಆಚರಿಸುವ ಸಂಪ್ರದಾಯವನ್ನು ಮುಂದುವರೆಸುತ್ತಿರುವುದರಿಂದ ತಂದೆಯ ದಿನವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಈ ವಿಶೇಷ ದಿನವು ತಮ್ಮ ಕುಟುಂಬಗಳಿಗಾಗಿ ತಂದೆ ಮಾಡುವ ಪ್ರೀತಿ, ಮಾರ್ಗದರ್ಶನ ಮತ್ತು ತ್ಯಾಗಕ್ಕಾಗಿ ಹೃತ್ಪೂರ್ವಕ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲು ಅವಕಾಶವನ್ನು ಒದಗಿಸುತ್ತದೆ.

ಪ್ರಪಂಚದ ಅನೇಕ ಭಾಗಗಳಲ್ಲಿ ಅಪ್ಪಂದಿರ ದಿನವನ್ನು ರಜಾದಿನವೆಂದು ಪರಿಗಣಿಸಲಾಗಿದ್ದರೂ, ಭಾರತದಲ್ಲಿ ಅದು ಇಲ್ಲ. ದೇಶದ ಮೆಟ್ರೋಪಾಲಿಟನ್ ನಗರಗಳು ಹೆಚ್ಚಾಗಿ ಪಾರ್ಟಿಗಳನ್ನು ಆಯೋಜಿಸುವ ಮೂಲಕ ದಿನವನ್ನು ಆಚರಿಸುತ್ತವೆ. ತಮ್ಮ ತಂದೆಗೆ ವಿಶೇಷ ಚಿಕಿತ್ಸೆ ಅಥವಾ ಉಡುಗೊರೆಗಳನ್ನು ನೀಡುತ್ತವೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸಲು ವಿಶೇಷ ಪ್ರಾರ್ಥನೆಗಳನ್ನು ಸಹ ಆಯೋಜಿಸಲಾಗುತ್ತದೆ.

ನನ್ನ ಪೂಜ್ಯ ತಂದೆಯವರಿಗೆ ಹಾಗೂ ತಂದೆಯ ಸಮನಾದ ಎಲ್ಲಾ ಹಿರಿಯರಿಗೂ ಅಪ್ಪಂದಿರ ದಿನದ ಹಾರ್ದಿಕ ಶುಭಾಶಯಗಳು.


ಹೇಮಂತ ಚಿನ್ನು

ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಕಲ್ಲು ಮಠದ ಶ್ರೀ ಪ್ರಭು ಸ್ವಾಮಿಗಳ ಲಿಂಗ ದೇವರ ಲೀಲಾ ವಿಳಾಸ ಚಾರಿತ್ರ

ಅಂತಾರಾಷ್ಟ್ರೀಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಬಳಗದ ಸಂಯುಕ್ತ ಆಶ್ರಯದಲ್ಲಿ ಕಲ್ಲು ಮಠದ ಶ್ರೀ...
- Advertisement -

More Articles Like This

- Advertisement -
close
error: Content is protected !!
Join WhatsApp Group