ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು ಸ್ನೇಹಿತನನ್ನಾಗಿಸಿಕೊಂಡರೆ ಉತ್ತಮ.ಶ್ರೀಮಂತ ಶ್ರೀಮಂತ ನ ಸ್ನೇಹ ಮಾಡೋದು ಉತ್ತಮ.
ಆದರೆ ಹೆಚ್ಚು ಸ್ನೇಹಿತರಾಗೋದು ವಿರುದ್ದ ಗುಣಸ್ವಭಾವದವರಾಗಿದ್ದರೆ ಇಲ್ಲಿ ಸ್ವಚ್ಚತೆ ಇರೋದಿಲ್ಲ.ಸ್ವಾರ್ಥ ಅಹಂಕಾರ ವಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮನೆಯವರಿಗಿಂತ ಸ್ನೇಹಿತರಲ್ಲಿ ತಮ್ಮ ಸಮಸ್ಯೆ, ಭಾವನೆಗಳನ್ನು ಹಂಚಿಕೊಳ್ಳಲು ಯುವ ಪೀಳಿಗೆ ಮುಂದಾಗಿರುತ್ತದೆ. ಕಾರಣ ಹೊರಗಿನ ಸಮಸ್ಯೆಯನ್ನು ಹೊರಗಿನ ಮನಸ್ಸು ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ. ಒಂದು ಮಕ್ಕಳಿದ್ದವರಿಗೇ ಇದರ ಸಮಸ್ಯೆ ಹೆಚ್ಚು.
ಪೋಷಕರಾದವರು ಮಕ್ಕಳಿಗೆ ಎಲ್ಲಾ ರೀತಿಯ ಬೌತಿಕ ಸಿರಿ ಸಂಪತ್ತು ಕೊಟ್ಟು ಬೆಳೆಸಿ ವಿದ್ಯೆ ನೀಡಿದ್ದರೂ ಅವರೊಳಗಿನ ಸಮಸ್ಯೆಗೆ ಪರಿಹಾರ ಕೊಡಲಾಗದ ಸಂಕಷ್ಟ ಎದುರಿಸಲು ಕಾರಣ ಆಂತರಿಕ ಶಕ್ತಿಯ ಕೊರತೆ. ಸ್ನೇಹವೆಂಬುದು ಪವಿತ್ರವಾದ ಸಂಬಂಧ. ಇಲ್ಲಿ ಯಾವುದೇ ಅಪೇಕ್ಷೆಗಳಿರುವುದಿಲ್ಲ.
ಎನ್ನುವ ಕಾರಣಕ್ಕಾಗಿಯೇ ಸ್ನೇಹಿತರ ದಿನಾಚರಣೆಯ ಉದ್ದೇಶವಾದರೆ ಉತ್ತಮ. ಇಂದು ಎಷ್ಟೋ ಸ್ನೇಹಿತರು ತಮ್ಮ ಸ್ನೇಹವನ್ನು ಸದ್ಬಳಕೆ ಮಾಡಿಕೊಂಡು ಸಂತೋಷವಾಗಿದ್ದಾರೆ. ಸಂಬಂಧ ಗಳು ಗಟ್ಟಿಯಾಗಿರಬೇಕಾದರೆ ಸ್ನೇಹದಲ್ಲಿ ಪ್ರೀತಿ, ವಿಶ್ವಾಸ, ಸತ್ಯ ಧರ್ಮ, ನ್ಯಾಯ, ನೀತಿ, ಸಂಸ್ಕೃತಿಯಿರಬೇಕಷ್ಟೆ.
ಇದೇ ಇಲ್ಲದಿದ್ದರೆ ಎಷ್ಟೇ ಸ್ನೇಹಿತರಾಗಿದ್ದರೂ ಕೊನೆಯಲ್ಲಿ ತಿರುಗಿ ನಿಲ್ಲುವ ಸಾಧ್ಯತೆಗಳಿರುತ್ತದೆ. ರಾಜಕೀಯದಲ್ಲಿ ನಾವೀಗ ಇದನ್ನು ಕಾಣುತ್ತಿದ್ದೇವೆ. ಮಕ್ಕಳಿಗೆ ರಾಜಕೀಯ ಸ್ನೇಹ ಮಾಡಿಸದೆ ರಾಜಯೋಗಿಗಳ ಸ್ನೇಹ ಮಾಡಿಸಿದರೆ ಉತ್ತಮ ಜೀವನ. ಸಮಾಜದಿಂದ ನನಗೇನು ಲಾಭ ಎನ್ನುವ ಬದಲಾಗಿ ನನ್ನಿಂದ ಸಮಾಜಕ್ಕೇನು ಲಾಭ ಎನ್ನುವ ಸ್ನೇಹಿತರ ಸಹವಾಸದಿಂದ ಸಮಾಜದ ಏಳಿಗೆ ಸಾಧ್ಯವಿದೆ.
ಇನ್ನೊಬ್ಬರಿಂದ ಪಡೆದು ತನ್ನದೆಂದು ಹಂಚಿ ಹೆಸರು,ಹಣ,ಅಧಿಕಾರ ಪಡೆಯುವಲ್ಲಿಯೇ ಮಗ್ನರಾದರೆ ಇದನ್ನು ಸ್ನೇಹ ಎನ್ನಲಾಗದು. ಒಬ್ಬರಿಗೊಬ್ಬರು ಕೈ ಜೋಡಿಸಿಕೊಂಡು ಕಷ್ಟ ಸುಖವನ್ನು ಹಂಚಿಕೊಳ್ಳಲುಸ್ನೇಹಿತರು ಮುಂದಾದರೆ ಸಮಾನತೆಗೂ ಅರ್ಥ ವಿರುತ್ತದೆ. ಎಲ್ಲಾ ಕಾಲದ ಮಹಿಮೆ. ಯಾರಲ್ಲಿ ಹೆಚ್ಚು ಹೆಸರು, ಹಣ, ಅಧಿಕಾರವಿರುವುದೋ ಅಲ್ಲಿ ಜೇನುನೊಣಗಳಂತೆ ಜನರು ಮುತ್ತಿಕೊಳ್ಳುತ್ತಾರೆ.
ಯಾವಾಗ ಮೂಲಕ್ಕೆ ದಕ್ಕೆ ಆಗುವುದೋ ಎಲ್ಲಾ ಚದುರಿ ಹೋಗುತ್ತಾರೆ. ಚದುರಿಹೋದ ಜೇನುನೊಣಗಳು ಸ್ವತಂತ್ರ ಜೀವನ ನಡೆಸಲಾಗದೆ ಇದ್ದರೆ ಇತರರನ್ನು ಕಚ್ಚಿ ನೋವು ಕೊಡುವುದು ಸಹಜ. ಹೀಗಾಗಿ ಸ್ನೇಹ ಮಾಡುವಾಗ ಅದರ ಮೂಲ ಉದ್ದೇಶ ತಿಳಿದರೆ ಉತ್ತಮವೆನ್ನಬಹುದಷ್ಟೆ.
ಶ್ರೀ ಕೃಷ್ಣ ಸುಧಾಮರ ಸ್ನೇಹಕ್ಕೆ ಬೆಲೆಕಟ್ಟಲಾಗದು.
ಶ್ರೀ ಕೃಷ್ಣ ರಾಧೆಯರ ಸಂಬಂಧಕ್ಕೂ ಬೆಲೆಕಟ್ಟಲಾಗದು.
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು