ಸಿಂದಗಿ– ರಾಷ್ಟ್ರೀಯ ಕಾಂಗ್ರೆಸ್‍ನ ನೂತನ ಸಾರಥಿಯಾಗಿ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರು 7 ಸಾವಿರಕ್ಕೂ ಅಧಿಕ ಮತಗಳಿಂದ ಅಭೂತ ಪೂರ್ವ ಜಯಗಳಿಸಿದ್ದು ಅವರ ಗೆಲುವು ನಮಗೆಲ್ಲ ಖುಷಿ ತಂದಿದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಒಬ್ಬ ಸಮರ್ಥ ಹೋರಾಟಗಾರ ಹಾಗೂ ರಾಜಕಾರಣಿ ಅವರ ಪ್ರತಿಭೆ, ಚಾಣಕ್ಯತನ ಹಾಗೂ ಅನುಭವವನ್ನು ಮೈಗೂಡಿಸಿಕೊಂಡ ಅವರು ಕಾಂಗ್ರೆಸ್ ಪಕ್ಷವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನೆಡೆಸುವ ಶಕ್ತಿ ಹೊಂದಿದ್ದಾರೆ. ಇಂದಿನ ಯುವ ರಾಜಕಾರಣಿಗಳಿಗೆ ಖರ್ಗೆ ಅವರು ಆದರ್ಶರಾಗಿದ್ದಾರೆ.
ಅವರು ಕನ್ನಡಿಗ ಎನ್ನುವುದೆ ಬಹು ದೊಡ್ಡ ಹೆಮ್ಮೆಯ ಸಂಗತಿ. ಅವರ ನಾಯಕತ್ವ ಹಾಗೂ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷ ಮುಂಬರುವ ಕರ್ನಾಟಕದ ವಿಧಾನ ಸಭೆ ಚುಣಾವಣೆಯಲ್ಲಿ ಮತ್ತು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರ ವಹಿಸಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.