spot_img
spot_img

ಹರ್ ಘರ್ ತಿರಂಗಾ”ಜಾಗೃತಿ ಜಾಥಾ”

Must Read

ಸವದತ್ತಿ: ಭಾರತದ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ “ಹರ್ ಘರ್ ತಿರಂಗಾ” ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದ್ದು ಸಾರ್ವಜನಿಕರು ತಮ್ಮ ಮನೆಗಳ ಮೇಲೆ ದಿನಾಂಕ:13-8-2022 ರಿಂದ15-8-2022 ರವರಿಗೆ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸರ್ಕಾರಿ ಪ್ರೌಢಶಾಲೆ ಕಗದಾಳದ ಮುಖ್ಯೋಪಾಧ್ಯಾಯರಾದ ಆರ್ ಸಿ ರಾಠೋಡ ಕರೆ ನೀಡಿದರು.

ಸವದತ್ತಿ ತಾಲೂಕಿನ ಕಗದಾಳ ಗ್ರಾಮದಲ್ಲಿ “ಹರ್ ಘರ್ ತಿರಂಗಾ” ಜಾಥಾ ಉದ್ದೇಶಿಸಿ ಅವರು ಮಾತನಾಡಿದರು. ಗ್ರಾಮ ಪಂಚಾಯತ ಕಗದಾಳ ಮತ್ತು ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ”ಹರ್ ಘರ್ ತಿರಂಗಾ”ಜಾಗೃತಿ ಜಾಥಾದ ಕಗದಾಳ ಗ್ರಾಮದಲ್ಲಿ ಜರುಗಿತು. ಅವರು “ದಿನಾಂಕ:13-8-2022 ರಂದು ಮುಂಜಾನೆ ಸೂರ್ಯೋದಯದ ನಂತರ ಧ್ವಜಾರೋಹಣ ಮಾಡಿ, ದಿನಾಂಕ:15-8-2022 ರಂದು ಸಾಯಂಕಾಲ ಸೂರ್ಯಾಸ್ತದ ವೇಳೆಗೆ ಧ್ವಜವನ್ನು ತೆಗೆಯಬೇಕೆಂದು” ಕರೆ ನೀಡಿ, ಈ ಸಂದರ್ಭದಲ್ಲಿ ಜಾಗೃತವಾಗಿ ನಿರ್ವಹಿಸಬೇಕೆಂದು ಹೇಳಿದರು.

ನಮಗೆ ಬಂದ ಈ ಸುದೈವವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ ಎಫ್ ನದಾಫ್, ಕಾರ್ಯದರ್ಶಿ ಎಂ ಎಫ್ ಹುಲಿಗೆಪ್ಪನವರ, ಶಿಕ್ಷಕರಾದ ಜೆ ಕೆ ಪಾಟೀಲ್,ಬಿ ಎಚ್ ನದಾಫ,ಆರ್ ಪಿ ತಳವಾರ,ಎಸ್ ವ್ಹಿ ಶೆಟ್ಟರ,ಸಿ ಡಿ ಬಡಿಗೇರ,ಶಿವಾನಂದ ಮಡಿವಾಳರ, ಬಸವರಾಜ ಜೊತೆನ್ನವರ ಸಂತೋಷ ನಿಂಗರಡ್ಡಿ,ಸುರೇಶ್ ಹಡಪದ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

- Advertisement -
- Advertisement -

Latest News

ಕೆನಡಾ ಮೇಯರ್ ಗೆ  ಭಾರತದ ಸಂವಿಧಾನದ ಪ್ರತಿ

ಸದ್ಯ ಕೆನಡಾ ಪ್ರವಾಸದಲ್ಲಿರುವ ಹಿರಿಯ ಸಾಹಿತಿ , ಸಂಶೋಧಕ ಬೆಂಗಳೂರಿನ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪರವರು ಇತ್ತೀಚೆಗೆ ಕೆನಡಾದ ಎಡ್ಮಾಟನ್ ನಗರದ ಮೇಯರ್ ಕಚೇರಿಯ ಸಭಾಂಗಣದಲ್ಲಿ ಅಲ್ಲಿನ ಪ್ರಥಮ ಪ್ರಜೆ ಚೆರಿಯಲ್...
- Advertisement -

More Articles Like This

- Advertisement -
close
error: Content is protected !!