spot_img
spot_img

ಹರ ಘರ ತಿರಂಗಾ: ಅರಭಾಂವಿ ಬಿಜೆಪಿ ಮಂಡಲದಿಂದ ಸಂಗನಕೇರಿಯಿಂದ ಯಾದವಾಡವರೆಗೆ ನಾಲ್ಕು ಸಾವಿರ ಕಾರ್ಯಕರ್ತರ ಬೃಹತ್ ಬೈಕ್‍ರ್ಯಾಲಿ

Must Read

ಮೂಡಲಗಿ – ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಎರಡನೇ ಹಂತದ ಅರಭಾವಿ ಬಿಜೆಪಿ ಮಂಡಲ ಶನಿವಾರ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯು ಮೂಡಲಗಿ ತಾಲ್ಲೂಕಿನ ಯಾದವಾಡ ಪಟ್ಟಣದ ಬಸವೇಶ್ವರ ದೇವಸ್ಥಾನದ ಹತ್ತಿರ ಸಮಾರೋಪಗೊಂಡಿತು.

ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಅವರು ಸಂಗನಕೇರಿ ಭಗೀರಥ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಿ ಭಾರತಾಂಬೆಗೆ ಪೂಜೆ ಸಲ್ಲಿಸುವ ಮೂಲಕ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.

ಸಂಗನಕೇರಿಯಿಂದ ಆರಂಭಗೊಂಡ ಬಿಜೆಪಿ ಕಾರ್ಯಕರ್ತರ ಬೃಹತ್‌ ಬೈಕ್ ರ್ಯಾಲಿಯು ಹುಣಶ್ಯಾಳ ಪಿ. ಜಿ ಕ್ರಾಸ್ , ವಡೇರಟ್ಟಿ, ಪುಲಗಡ್ಡಿ, ಮುಸಗುಪ್ಪಿ, ತಿಗಡಿ, ಸುಣಧೋಳಿ ಕ್ರಾಸ್, ಲಕ್ಷ್ಮೇಶ್ವರ ಕ್ರಾಸ್, ಕುಲಗೋಡ, ವೆಂಕಟಾಪುರ, ತಿಮ್ಮಾಪುರ ಮಾರ್ಗವಾಗಿ ಯಾದವಾಡ ಪಟ್ಟಣಕ್ಕೆ ಸುಮಾರು 4 ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಭೈಕ್ ರ್ಯಾಲಿಯಲ್ಲಿ ಭಾಗಿಯಾಗಿದ್ದರು.

ಕೆಎಮ್‍ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಅರಭಾಂವಿ ಮತಕ್ಷೇತ್ರದ ಕಾರ್ಯಕರ್ತರು, ಬಾಲಚಂದ್ರ ಜಾರಕಿಹೊಳಿ ಅವರ ಅಭಿಮಾನಿಗಳು ಈ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಭಾರತ ಮಾತಾ ಕೀ ಜೈ,ವಂದೇ ಮಾತರಂ, ಮುಂತಾದ ಜಯಘೋಷಗಳೊಂದಿಗೆ ಬೈಕ್ ರ್ಯಾಲಿಯಲ್ಲಿ ಕಾರ್ಯಕರ್ತರು ಅತಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಹರ ಘರ ತಿರಂಗಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಯಾದವಾಡ ಪಟ್ಟಣಕ್ಕೆ ಬೈಕ್ ರ್ಯಾಲಿ ಆಗಮಿಸುತ್ತಿದ್ದಂತೆಯೇ ದೇಶಪ್ರೇಮವನ್ನು ಬಿಂಬಿಸುವ ವೇದ ಘೋಷಗಳು ಕಾರ್ಯಕರ್ತರಿಂದ ಕೂಗಿ ಬಂದವು. ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ರಾಷ್ಟ್ರಧ್ವಜಗಳು ಹಾರಾಡುತ್ತಿದ್ದವು. ಇಡೀ ಪಟ್ಟಣ ದೇಶಪ್ರೇಮದಲ್ಲಿ ಮುಳುಗಿತ್ತು.

ಸಂಗನಕೇರಿಯಿಂದ ಆರಂಭಗೊಂಡ ಬೈಕ್ ರ್ಯಾಲಿ ಯಾದವಾಡದವರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಆಯಾ ಗ್ರಾಮಗಳ ಪ್ರಮುಖರು, ಮಹಿಳೆಯರು ಸ್ವಾಗತಿಸಿ ಹರ ಘರ ತಿರಂಗಾ ರ್ಯಾಲಿಗೆ ಶುಭ ಕೋರಿದರು.

ಯಾದವಾಡ ಬಸವೇಶ್ವರ ವೃತದಲ್ಲಿ ಬಸವೇಶ್ವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವಸಲ್ಲಿಸಿದರು. ಯಾದವಾಡದಲ್ಲಿ ನೂರು ಮೀಟರ್ ತ್ರಿವರ್ಣ ಧ್ವಜದೊಂದಿಗೆ ಬೈಕ್ ಯಾರ್ಲಿ ನಡೆಸಿ ಘಟಗಿ ಬಸವೇಶ್ವರ ದೇವಸ್ಥಾನ ಹತ್ತಿರ ರಾಷ್ಟ್ರ ಗೀತೆ ಪ್ರಸ್ತುತ ಪಡಿಸುವ ಮೂಲಕ ರಾರ್ಲಿಯನ್ನು ಸಮಾಪ್ತಿಗೊಳಿಸಿದರು.

ಸರ್ವೋತ್ತಮ ಜಾರಕಿಹೊಳಿ, ಪ್ರಭಾ ಶುಗರ್ಸ್ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ಜಿ.ಪಂ. ಮಾಜಿ ಸದಸ್ಯರಾದ ರಂಗಪ್ಪ ಈಟ್ಟಣ್ಣವರ, ಗೋವಿಂದ ಕೊಪ್ಪದ, ಪರಮೇಶ್ವರ ಹೊಸಮನಿ, ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಮುಖಂಡ ಪರ್ವತಗೌಡ ಪಾಟೀಲ, ಬಿಜೆಪಿ ಓಬಿಸಿ ಮೋರ್ಚಾ ಉಪಾಧ್ಯಕ್ಷ ಭೀಮಶಿ ಮಾಳೆದವರ, ಬಸವರಾಜ ಮಾಳೇದವರ, ರಮೇಶ ಸಂಪಗಾಂವಿ, ಶಂಕರ ಬೆಳಗಲಿ,ರಾಜುಗೌಡ ಪಾಟೀಲ, ಬಸವರಾಜ ಭೂತಾಳಿ,ಯಲ್ಲಪ್ಪಗೌಡ ನ್ಯಾಮಗೌಡರ,‌ ಬಸವರಾಜ ಕೇರಿ, ಲಕ್ಷ್ಮಣ ಪಾಟೀಲ ಯರಗಟ್ಟಿ, ಇಲಾಯಿ ಅತ್ತಾರ, ವೆಂಕಟೇಶ ದಾಸರ, ಬಸವರಾಜ ಹಿಡ್ಕಲ್,ನಿಂಗನಗೌಡ ಪಾಟೀಲ, ಸುರೇಶ ಸಾವಳಗಿ, ಬಿಜೆಪಿ ಜಿಲ್ಲಾ ಹಾಗೂ ಮಂಡಳದ ವಿವಿಧ ಮೋರ್ಚಾಗಳ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ದಿನದ ಬೈಕ್ ರ್ಯಾಲಿಯಲ್ಲಿ ಸಾವಿರಾರು ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಪಾಲ್ಗೊಂಡು ತಮ್ಮ ದೇಶಾಭಿಮಾನ ವ್ಯಕ್ತ ಪಡಿಸಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಮರ್ಥ ಮುಂದಾಳತ್ವದ ಬಿಜೆಪಿ ಕಾರ್ಯಕರ್ತರು ಇದರಲ್ಲಿ ಭಾಗಿಯಾಗುವ ಮೂಲಕ ರಾಜ್ಯದಲ್ಲಿಯೇ ಅತೀ ದೊಡ್ಡದಾದ (ಮಾರ್ಗಮಧ್ಯದಲ್ಲಿ ಸುಮಾರು ೪ ಕಿಮೀ ಅಂತರ) ಬೈಕ್ ರ್ಯಾಲಿ ಎಂಬ ಕೀರ್ತಿಗೆ ಅರಭಾವಿ ಮಂಡಲದ ಕಾರ್ಯಕರ್ತರು ಪಾತ್ರರಾಗಿದ್ದಾರೆ ಎಂದು ಪಕ್ಷದ ವಲಯದಲ್ಲಿ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.

- Advertisement -
- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!