spot_img
spot_img

ಹಳಕಟ್ಟಿಯವರು ವ್ಯಕ್ತಿಯಲ್ಲ ಸತ್ಯಾನ್ವೇಷಣೆಯ ನೈಜ ಶಕ್ತಿ – ಶ್ರೀಕಾಂತ ಶಾನವಾಡ

Must Read

ಲಿಂಗಾಯತ ಸಂಘಟನೆ ವತಿಯಿಂದ ಫ. ಗು.ಹಳಕಟ್ಟಿಯವರ ಜನ್ಮದಿನೋತ್ಸವ

ದಿ.3 ರಂದು ಬೆಳಗಾವಿ ನಗರದ ಫ. ಗು.ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ಮತ್ತು ಶರಣರ ವತಿಯಿಂದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನೋತ್ಸವವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಮತ್ತು ಉಪನ್ಯಾಸಕ ಶ್ರೀಕಾಂತ ಶಾನವಾಡರವರು ಮಾತನಾಡಿ ಹಳಕಟ್ಟಿಯವರು ಜಗತ್ತಿಗೆ ಸತ್ಯಹೇಳುವ ಧೈರ್ಯ ವನ್ನು ತೊಟ್ಟುಕೊಂಡು ಸತ್ಯಾನ್ವೇಷಣೆ ಮಾಡುವುದರ ಮೂಲಕ ಅನೇಕ ಶೋಷಣೆ, ತೊಂದರೆಗಳನ್ನು ಸಹಿಸಿಕೊಂಡು ಹೋರಾಟದಿಂದ ತಾಳೆಗರಿಗಳಲ್ಲಿ ಭದ್ರವಾಗಿ ಮರೆತುಹೋಗಿದ್ದ ವಚನಸಾಹಿತ್ಯವನ್ನು ಮೊಟ್ಟಮೊದಲ ಬಾರಿಗೆ ಬೆಳಕಿಗೆ ತಂದು ಎಲ್ಲರ ಬಾಳು ಬೆಳಗುವಂತೆ ಮಾಡಿದರು. ಅವರ ಸಾಧನೆ ಅಪರಿಮಿತವಾದದ್ದು ಶರಣರು ನೋಡಿ,ನೀಡಿ, ಮಾಡಿ, ಆಡಿ ಹೋದದ್ದನ್ನು ನಮ್ಮೆಲ್ಲರಿಗೆ ನೀಡಿದ್ದರ ಫಲವಾಗಿ ನಾವೆಲ್ಲ ಸುಂದರ ಬದುಕು ಬದುಕುತ್ತಿದ್ದೇವೆ. ಕನ್ನಡದ ವಚನ ಸಾಹಿತ್ಯವನ್ನು ಇಂಗ್ಲೀಷಿಗೆ ತರ್ಜುಮೆ ಗೊಳಿಸಿದ ಮೊದಲಿಗರು ಹಳಕಟ್ಟಿಯವರು. ವೈಚಾರಿಕ ಪ್ರಜ್ಞೆ, ಸಂಶೋಧನೆ, ಶರಣ ಸಾಹಿತ್ಯದ ಬಗೆಗೆ ಒಲವು, ವಚನ ಸಾಹಿತ್ಯದ ಅನ್ವೇಷಣೆ, ಜೊತೆಗೆ ಕನ್ನಡ ಸಾಹಿತ್ಯಕ್ಕಾಗಿ ಕನ್ನಡ ಚಳವಳಿಗಳನ್ನು ಮಾಡಿ ಅವುಗಳನ್ನೇ ತಮ್ಮ ಜೀವನದ ಜೀವಾಳವಾಗಿ ರೂಢಿಸಿಕೊಂಡ ಹಳಕಟ್ಟಿಯವರು ನಿಜಕ್ಕೂ ಸತ್ಯಾನ್ವೇಷಣೆಯ ಶಕ್ತಿಯಾಗಿ ನಮ್ಮೆಲ್ಲರಿಗೆ ಇಂದು ದಾರಿದೀಪವಾಗಿದ್ದಾರೆ. ತನ್ನನ್ನು ತಾನು ಯಾರೆಂದು ತೋರಿಸದೆ ತೋರಿಕೆಯ ಬದುಕನ್ನು ಸಾಗಿಸದೇ ಕೇವಲ ಕಾಯಕವನ್ನೇ ಮಾಡಿದ ಮಹಾಯೋಗಿ. ಇಂಥವರ ಬದುಕು ನಿಜಕ್ಕೂ ಅನುಕರಣೀಯ ಎಂದು ಹಳಕಟ್ಟಿಯವರ ಜೀವನ ವೃತ್ತಾಂತವನ್ನು ಮನಮುಟ್ಟುವಂತೆ ಬಿಚ್ಚಿಟ್ಟರು.

ಇದೇ ಸಂದರ್ಭದಲ್ಲಿ ವಿವಾಹದ 64 ವಸಂತಗಳನ್ನು ಕಳೆದ ಶರಣರಾದ ಕಲಗೌಡ ಪಾಟೀಲ ದಂಪತಿಗಳಿಗೆ ಸನ್ಮಾನ ಸಮಾರಂಭ ನೆರವೇರಿತು.

ಇದೇ ಸಂದರ್ಭದಲ್ಲಿ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅದ್ದೂರಿ ಬಸವ ಜಯಂತಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ವಾರ್ಷಿಕ ಅಹವಾಲು ಪತ್ರಿಕೆಯನ್ನು ಬಿಡುಗಡೆ ಮಾಡಿ ಎಲ್ಲರಿಗೂ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಲಿಂಗಾಯತ ಸಂಘಟನೆಯ ಅಧ್ಯಕ್ಷರಾದ ಈರಣ್ಣ ದೇಯನ್ನವರ, ಸಂಗಮೇಶ ಅರಳಿ,ಸುರೇಶ ನರಗುಂದ, ಅಶೋಕ ಇಟಗಿ, ಸತೀಶ ಪಾಟೀಲ, ಸದಾಶಿವ ದೇವರಮನಿ ರಮೇಶ ಕಳಸಣ್ಣವರ, ಮೃತ್ಯುಂಜಯ ಸ್ವಾಮಿ ಹಿರೇಮಠ, , ಮಹಾಂತೇಶ ಮೆಣಸಿನಕಾಯಿ, ಶಿವಾನಂದ ತಲ್ಲೂರ ಸೇರಿದಂತೆ ಸಂಘಟನೆಯ ಸದಸ್ಯರು ಶರಣ-ಶರಣೆಯರು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಎಲ್ಲ ಶರಣ ಆಚರಣೆಯಿಂದ ವಚನ ಪ್ರಾರ್ಥನೆ ಮಾಡಲಾಯಿತು. ಸಂಗಮೇಶ ಅರಳಿ ಸ್ವಾಗತಿಸಿದರು. ಶರಣರಾದ ಮಹಾಂತೇಶ ತೋರನಗಟ್ಟಿ ನಿರ್ವಹಿಸಿ ವಂದಿಸಿದರು.

- Advertisement -
- Advertisement -

Latest News

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಸಿಂದಗಿ: ಪಟ್ಟಣದ ಭೀಮಾಶಂಕರ ಮಠದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಮಾಡಲಾಯಿತು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಕೊಗಟನೂರ ಪೂಜ್ಯಶ್ರೀ...
- Advertisement -

More Articles Like This

- Advertisement -
close
error: Content is protected !!