ಸಾತ್ವಿಕ ಚೇತನ ದಂಪತಿಗಳಾದ ಪಾಂಡುರಂಗ ರಾವ್ ಕಂಪ್ಲಿ ಮತ್ತು ವಿರಜ ಕಂಪ್ಲಿ ರವರಿಗೆ ತಾಯಲೂರು ವಾದಿರಾಜ್ ನೇತೃತ್ವದ “ಶ್ರೀನಿವಾಸ ಉತ್ಸವ ಬಳಗ” ವತಿಯಿಂದ ಬೆಂಗಳೂರಿನ ಶ್ರೀ ಪವಮಾನಪುರ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನೆರೆದಿದ್ದ ಗಣ್ಯಮಾನ್ಯರ ಸಮ್ಮುಖದಲ್ಲಿ ‘ಶ್ರೀ ಹರಿದಾಸ ಸಿಂದೂರ ‘ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಟ್ರಸ್ಟ್ ನ ವಿಶ್ವಸ್ತ ರಾದ ಕೆ ಆರ್ ಗುರುರಾಜ ರಾವ್ ಮಾತನಾಡುತ್ತ, ಕಲ್ಯಾಣ ಕರ್ನಾಟಕದ ಹೆಬ್ಬಾಗಿಲೆಂದೇ ಗುರುತಿಸಲ್ಪಡುವ ಕಲ್ಬುರ್ಗಿಯಲ್ಲಿ ದಾಸಸಾಹಿತ್ಯದ ಮಕರಂದವನ್ನು ಎಲ್ಲೆಡೆ ಸಿಂಚನ ಮಾಡುತ್ತ, ಅವಿನಾಶಿ ಆರ್ಷ ಪರಂಪರೆಯ ಮೂರ್ತರೂಪವಾಗಿ ಹರಿದಾಸ ಸಾಹಿತ್ಯ ನಂದಾದೀಪದ ಸಮುಜ್ವಲನೆಗೆ ದೀಕ್ಷಾಬದ್ಧರಾಗಿ ದಾಸ ಸೌರಭ ಟ್ರಸ್ಟ್ (ರಿ) ಅನ್ನು ಸ್ಥಾಪಿಸಿ, ಈ ಟ್ರಸ್ಟಿನ ಕಾರ್ಯಕಾರಿ ಅಧ್ಯಕ್ಷರಾಗಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವ ಪಾಂಡುರoಗರಾವ್ ಕಂಪ್ಲಿ ಹಾಗೂ ಡಾ. ಶ್ರೀಮತಿ ವಿರಜಾ ಪಾಂಡುರoಗ ರಾವ್ ಕಂಪ್ಲಿ ದಂಪತಿಗಳ “ ಸುವರ್ಣ ದಾಂಪತ್ಯ” ದ ಶುಭಅವಸರದಲ್ಲಿ ಕೊಡಮಾಡುತ್ತಿರುವ ಪ್ರಶಸ್ತಿ ಗೌರವವಿದಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.