spot_img
spot_img

ಹೋಬಳಿಗಳಲ್ಲಿ ಕನ್ನಡ ಭವನ ನಿರ್ಮಾಣದ ಕನಸು ಹೊತ್ತಿರುವೆ – ಮಲ್ಲಿಕಾರ್ಜುನ ಯಂಡಿಗೇರಿ

Must Read

ಸಿಂದಗಿ: ವಿಜಯಪುರ ನಗರದಲ್ಲಿ ಈಗಾಗಲೇ ಖರೀದಿಸಿದ ನೀವೇಶನದಲ್ಲಿ ಅಂದಾಜು 5 ಕೋಟಿ ಹಣದಲ್ಲಿ ಕನ್ನಡಭವನವನ್ನು ನಿರ್ಮಾಣ ಅದರ ಜೊತೆಗೆ ಜಿಲ್ಲೆಯ ಅನೇಕ ತಾಲೂಕಾ ಹೋಬಳಿ ಗ್ರಾಮಗಳಲ್ಲಿ ಕನ್ನಡ ಭವನವನ್ನು ನಿರ್ಮಿಸುವ ಬಹುದೊಡ್ಡ ಕನಸನ್ನು ಹೊತ್ತು ಈ ಬಾರಿ ಜಿಲ್ಲಾ ಕಸಾಪ ಚುನಾವಣೆಯ ಕಣದಲ್ಲಿ ನಿಂತಿದ್ದೇನೆ ತಾವುಗಳು ಈ ಬಾರಿ ನನಗೆ ಮತ ನೀಡಿ ಆಶೀರ್ವಾದ ಮಾಡಬೇಕು ಎಂದು ಜಿಲ್ಲಾ ಕಸಾಪ ಚುನಾವಣೆಯ ಅಭ್ಯರ್ಥಿ ಮಲ್ಲಿಕಾರ್ಜುನ ಯಂಡಿಗೇರಿ ಮನವಿ ಮಾಡಿದರು.

ಪಟ್ಟಣ ಮಾಂಗಲ್ಯ ಭವನದಲ್ಲಿ ಸೋಮವಾರ ನಡೆದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾನು ಎಂದೂ ನನ್ನ ಅಧಿಕಾರದ ಅವಧಿಯಲ್ಲಿ ನ್ಯಾಯ ಬಿಟ್ಟು ನಡೆದವನಲ್ಲ. ಸರ್ವಜನಾಂಗವನ್ನು ಸಮಾನವಾಗಿ ಕಂಡವನು. ನನ್ನ ಮೂರು ಬಾರಿ ಅಧಿಕಾರದ ಸಮಯದಲ್ಲಿ ಜಿಲ್ಲೆ ಸೇರಿದಂತೆ ಅನೇಕ ತಾಲೂಕಾ ಕೇಂದ್ರಗಳಲ್ಲಿ ಅನೇಕ ಸಾಹಿತ್ಯ ಸಮ್ಮೇಳನ, ಕನ್ನಡದ ಕಾರ್ಯಕ್ರಮಗಳು, ಮಹಿಳಾ ಸಾಹಿತ್ಯ ಗೋಷ್ಠಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಿರ್ವಹಣೆ ಮಾಡಿ ಕನ್ನಡದ ಜಾಗೃತಿಗೆ ಮುಂದಾಗಿದ್ದೇನೆ ಈ ಬಾರಿ ತಾವು ಮತ ನೀಡಬೇಕು ಎಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ಡಾ.ಚನ್ನಪ್ಪ ಕಟ್ಟಿ, ಡಾ. ಎಂ.ಎಂ.ಪಡಶೆಟ್ಟಿ, ಎಸ್.ಎಲ್.ಪಾಟೀಲ, ಬಿ.ಎಮ್.ಬಿರಾದಾರ, ಚನ್ನಪ್ಪ ಕತ್ತಿ, ಪಿ.ಎಮ್.ಮಡಿವಾಳರ, ಶರಣು ಲಂಗೋಟಿ, ಯು.ಆಯ್.ಶೇಖ, ಅಶೋಕ ತೆಲ್ಲೂರ, ರವಿ ಬಿರಾದಾರ, ಎಸ್.ಬಿ.ಚೌಧರಿ, ಸಿದ್ದಲಿಂಗ ಕಿಣಗಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಅನೇಕ ಚಟುವಟಿಕೆಗಳನ್ನು ಈ ನಾಡಿಗೆ ಪರಿಚಯಿಸುವಲ್ಲಿ ಯಂಡಿಗೇರ ಅವರ ಪಾತ್ರ ಹಿರಿಯದಾಗಿದೆ. ಯಂಡಿಗೇರಿ ಒಬ್ಬ ಸಂಘಟಕಾರರು ಅವರು ಸಾಹಿತಿ ಅಲ್ಲವೆಂದರೂ ನೂರಾರು ಸಾಹಿತ್ಯಾಸಕ್ತರನ್ನು ಬೆಳಸಿದಂಥವರು. ಜಿಲ್ಲೆಯಲ್ಲಿ ಭವ್ಯಕನ್ನಡ ಭವನವನ್ನು ನಿರ್ಮಾಣ ಮಾಡಲು ಅವರಿಗೆ ಮತ್ತೊಮ್ಮೆ ಅವಕಾಶ ನೀಡಲು ನಾವು ಸದಾ ಸಿದ್ದರಾಗಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಆನಂದ ಶಾಬಾದಿ, ರವಿ ಶಿಲ್ಲೇದಾರ, ಚಂದ್ರಶೇಖರ ದೇವರೆಡ್ಡಿ, ಚಂದ್ರಶೇಖರ ನಾಗರಬೆಟ್ಟ, ಜಗದೀಶ ಪಟ್ಟಣಶೆಟ್ಟಿ, ಪಂಡಿತ ಯಂಪೂರೆ, ಪ್ರದೀಪ ಕತ್ತಿ, ಮಹಾಂತೇಶ ನಾಗೋಜಿ, ಶಾರಾದಾ ಮಂಗಳೂರ, ಸಬೀಯಾ ಮರ್ತೂರ, ಅನ್ನಪೂರ್ಣ ಹೊಟಗಾರ, ಡಾ.ಪ್ರಕಾಶ ರಾಗರಂಜನಿ, ಬಸವರಾಜ ಅಗಸರ, ಅಶೋಕ ಬಿರಾದಾರ, ಬಸವರಾಜ ಗುರುಶೆಟ್ಟಿ ಎಂ.ಎನ್ ಪಾಟೀಲ, ಸೇರಿದಂತೆ ಅನೇಕರು ಇದ್ದರು.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!