spot_img
spot_img

ಲಿಂಗಾಯತ ಸಂಘಟನೆ ವತಿಯಿಂದ ಆರೋಗ್ಯ ಕುರಿತು ಅರಿವು ಕಾರ್ಯಕ್ರಮ

Must Read

spot_img
- Advertisement -

ಸದೃಢ ಶರೀರಕ್ಕೆ ನಿಯಂತ್ರಿತ ಆಹಾರ ಪದ್ಧತಿಯೇ ಮದ್ದು- ಡಾ. ಜೇಂಡೆ.

ನಮ್ಮ ದೇಹದ ಸದೃಢತೆಗೆ ನಾವು ಯೋಜನಾ ಬದ್ಧವಾದ ಆಹಾರ ಪದ್ಧತಿಯನ್ನು ಅನುಸರಿಸುವುದರ ಮೂಲಕ ಮತ್ತು ಶುದ್ಧ ಮನಸ್ಸಿನಿಂದ ನಮ್ಮ ಜೀವನ ಪದ್ಧತಿಯನ್ನು ನಿಯಮಾನುಸಾರ ಕಂಡುಕೊಂಡದ್ದೆ ಆದರೆ ನಮ್ಮ ಶರೀರವನ್ನು ಸದೃಢವಾಗಿ ಕಾಯ್ದುಕೊಂಡು ಹೋಗಬಹುದು ಎಂದು ಆಯುಷ್ ಇಲಾಖೆಯ ಉಪ ವೈದ್ಯಾಧಿಕಾರಿ ಡಾ. ಬಸವರಾಜ ಜೇಂಡೆ ಹೇಳಿದರು.

ರವಿವಾರ.ದಿ.27.ರಂದು ಬೆಳಗಾವಿಯ ಮಹಾಂತೇಶ ನಗರದ ಫ. ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾದ ‘ಆರೋಗ್ಯದ ಕುರಿತು ಅರಿವು ‘ಮೂಡಿಸುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

- Advertisement -

ನಾವೇ ಖುದ್ದಾಗಿ ಸಣ್ಣ ಪುಟ್ಟ ವಿಷಯಗಳಿಗೆ ವೈದ್ಯರ ಬಳಿಗೆ ಹೋಗಬಾರದು. ವಿಶೇಷವಾಗಿ ನಮ್ಮ ಜೀವನವನ್ನು ಮತ್ತೊಬ್ಬರ ಜೊತೆಗೆ ತುಲನೆ ಮಾಡಿಕೊಂಡೆ ನಾವು ಮಾನಸಿಕ ಒತ್ತಡ, ಬಿಪಿ,ಶುಗರ್ ವಿವಿಧ ರೀತಿಯ ಖಾಯಿಲೆಗಳಿಗೆ ಒಳಗಾಗುತ್ತೇವೆ. ನಮ್ಮ ಪದ್ಧತಿಯ ಆಹಾರವನ್ನು ವರ್ಜಿಸಿ ನಾವು ಪಾಶ್ಚಿಮಾತ್ಯ ಪದ್ಧತಿಗೆ ಮಾರು ಹೋಗಿದ್ದೇವೆ ಅದನ್ನು ಬಿಟ್ಟು ಮೂಲ ಪದ್ದತಿಗೆ ಬರೋಣ. ಹಾಗೆಯೇ ಎಣ್ಣೆಯನ್ನು ಪದೇ ಪದೇ ಕಾಯಿಸಿ ತಿನ್ನುವುದರಿಂದ, ಮೈದಾ ಮತ್ತು ಸಕ್ಕರೆ ಇನ್ನಿತರ ಪದಾರ್ಥಗಳನ್ನು ಹೆಚ್ಚಿಗೆ ಬಳಸುವುದರಿಂದ ಅವು ವಿಷದಂತಾಗಿ ನಮ್ಮ ಆರೋಗ್ಯ ಹದಗೆಡುತ್ತಿದೆ. ಮಕ್ಕಳು ಕೋಕೆನ್ ಮಿಶ್ರಿತ ಚಾಕ್ಲೇಟ್ ಗಳನ್ನು ಹೆಚ್ಚಿಗೆ ಬಳಸುವುದರಿಂದ ವಿಶೇಷವಾಗಿ ಹೆಣ್ಣು ಮಕ್ಕಳಲ್ಲಿ ಹಾರ್ಮೋ ನುಗಳ ಏರುಪೇರು ಆಗಿ ವಯಸ್ಸಿಗೆ ಮುಂಚೆ ಋತುಮತಿಯಾಗುತ್ತಿದ್ದಾರೆ. ಅದಕ್ಕೆ ಆಯುರ್ವೇದದ ವಿಶೇಷ ಪದ್ಧತಿಗಳನ್ನು ನೈಸರ್ಗಿಕವಾಗಿ ಸಿಗುವ ಹಣ್ಣು ಹಂಪಲು ಕಾಯಿಪಲ್ಲೆಗಳನ್ನು ಹೆಚ್ಚಿಗೆ ಬಳಸಿ ನಮ್ಮ ಆರೋಗ್ಯದ ಆಯುಷ್ಯ ಮತ್ತಷ್ಟು ಹೆಚ್ಚು ಮಾಡುವತ್ತ ಶ್ರಮಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಅಧ್ಯಕ್ಷ ಈರಣ್ಣ ದೇಯನ್ನವರ ಮಾತನಾಡಿ, ಸಾಲುಮರದ ತಿಮ್ಮಕ್ಕಳಂತೆ ನಾವು ಶತಾಯುಷಿಗಳಾಗಿ ಬದುಕಲು ಪ್ರಕೃತಿಯನ್ನು ಪ್ರೀತಿಸುವತ್ತ ಹೆಜ್ಜೆ ಹಾಕುವುದರ ಜೊತೆಗೆ ನೈಸರ್ಗಿಕ ಆಹಾರ ಪದ್ಧತಿಯನ್ನು ಅಪ್ಪಿಕೊಳ್ಳೋಣ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರು ಮತ್ತು ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳಾಗಿ ಅನೇಕ ಹಿರಿಯ ನಾಗರಿಕರು ಮತ್ತು ನಿವೃತ್ತ ನೌಕರರಿಗೆ ಸರ್ಕಾರದ ವತಿಯಿಂದ ಸಿಗುವ ವಿಶೇಷ ಸೌಲಭ್ಯಗಳನ್ನು ಒದಗಿಸಿ ಕೊಡಲು ಶ್ರಮಿಸಿದ ಪ್ರಯುಕ್ತ ಮ್ಯಾಕ್ಸ್ ಲೈಫ್ ಕಂಪನಿಯ ವತಿಯಿಂದ ‘ಸೇವಾರತ್ನ ಪ್ರಶಸ್ತಿ’ ಪಡೆದ ಆನಂದ ಕರ್ಕಿಯವರನ್ನು ಸನ್ಮಾನಿಸಲಾಯಿತು.

- Advertisement -

ಕಾರ್ಯಕ್ರಮದಲ್ಲಿ ಶಶಿಭೂಷಣ ಪಾಟೀಲ್, ವಿಕೆ ಪಾಟೀಲ್, ಎಸ್ ಎಸ್ ಪೂಜಾರ, ಶಿವಾನಂದ ತಲ್ಲೂರ, ,ಅಡಿವೆಪ್ಪ ಇಟಗಿ, ಬಿ.ಬಿ. ಮಠಪತಿ, ಸುವರ್ಣ ತಿಗಡಿ, ದ್ರಾಕ್ಷಾಯಣಿ ಪೂಜಾರ, ವಿದ್ಯಾ ಮುಂಗರವಾಡಿ, ಕಮಲಾ ಗಣಾಚಾರಿ ಸೇರಿದಂತೆ ಸಂಘಟನೆಯ ಸದಸ್ಯರು ಮತ್ತು ನಾಗರಿಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಮಹಾದೇವಿ ಅರಳಿ ಪ್ರಾರ್ಥಿಸಿದರು. ಎಂ ವೈ ಮೆಣಸಿನಕಾಯಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಸುರೇಶ ನರಗುಂದ ನಿರೂಪಿಸಿ ವಂದಿಸಿದರು.

- Advertisement -
- Advertisement -

Latest News

ಕಿವುಡ ಮಕ್ಕಳ ಸಂಸ್ಥೆಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ಸರ್ಕಾರವು ವಿಕಲಚೇತನ ಸೇವಾ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಸ್ತುತ 2023ನೇ ಸಾಲಿನ ಉತ್ತಮ ಸಂಸ್ಥೆಯ ವಿಭಾಗದಡಿ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್,...
- Advertisement -

More Articles Like This

- Advertisement -
close
error: Content is protected !!
Join WhatsApp Group