spot_img
spot_img

ಯೋಗದಿಂದ ಆರೋಗ್ಯ ವೃದ್ಧಿ – ನಯನಾ ಭಸ್ಮೆ

Must Read

ಸವದತ್ತಿ: ತಾಲೂಕಿನ ಹಿರೇಕುಂಬಿ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿವಿಶ್ವ ಯೋಗ ದಿನದ ನಿಮಿತ್ತ ಬಿಜೆಪಿ ಮಹಿಳಾ ಮೋರ್ಚಾ ಸವದತ್ತಿ ವತಿಯಿಂದ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಶ್ರೀಮತಿ ಡಾ ನಯನಾ ಭಸ್ಮೆ ಅಧ್ಯಕ್ಷರು, ಮಹಿಳಾ ಮೋರ್ಚಾ ಸವದತ್ತಿ, “ಯೋಗ ಮತ್ತು ಆರೋಗ್ಯದ ಬಗ್ಗೆ ತಿಳಿಸುತ್ತಾ ಯೋಗವು ವಿಶ್ವಕ್ಕೆ ಭಾರತ ದೇಶದ ಒಂದು ಬಹುದೊಡ್ಡ ಕೊಡುಗೆಯಾಗಿದೆ ಹಾಗೂ ಮಹಿಳೆಯರು ಯೋಗವನ್ನು ದಿನನಿತ್ಯ ಮಾಡಿ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

ನರಸಿಂಹ ಕುಲಕರ್ಣಿ, ಸಹ ಪ್ರಾಂತ ಸೇವಾ ಪ್ರಮುಖರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇವರು ಯೋಗ ಪ್ರಶಿಕ್ಷಣ ವರ್ಗ ತೆಗೆದು ಕೊಂಡರು. ಹಾಗೂ ಯೋಗದ ಮಹತ್ವದ ಬಗ್ಗೆ ಮಾತನಾಡುತ್ತಾ “ದೇಹ ಮತ್ತು ಮನಸ್ಸುಗಳ, ಆತ್ಮ ಮತ್ತು ಪರಮಾತ್ಮರ ಕೂಡುವಿಕೆಯೆ-ಸೇರುವಿಕೆಯೆ ಯೋಗ. ಯೋಗವು ದೈಹಿಕ-ಮಾನಸಿಕ-ಆಧ್ಯಾತ್ಮಿಕ ಅಭ್ಯಾಸ.ಯೋಗಕ್ಕೆ ಯಾವುದೇ ಧರ್ಮ-ಜಾತಿ-ವರ್ಣ–ಇತ್ಯಾದಿಗಳ ಬೇಧವಿಲ್ಲ.ಆಸಕ್ತಿ ಇರುವ ಯಾರೂ ಬೇಕಾದರೂ ಅಭ್ಯಸಿಸಬಹುದು.ಇದಕ್ಕೆ ಸರಿಯಾದ ಮಾರ್ಗದರ್ಶನ ಅಗತ್ಯ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಿಳೆಯರೂ ಕೂಡ ಯೋಗ ಮಾಡಿದರು. ಬಿಜೆಪಿ ಮಹಿಳಾ ಮೋರ್ಚಾವತಿಯಿಂದ ಶ್ರೀಮತಿ ರತ್ನವ್ವಾ ತೆಗೂರ, ಶ್ರೀಮತಿ ರತ್ನಾ ನರಗುಂದ, ಶ್ರೀಮತಿ ಸುಜಾತ ಮಠಪತಿ, ಶ್ರೀಮತಿ ರೇಣುಕಾ ಪೂಜಾರಿ, ಶ್ರೀಮತಿ ಸುವರ್ನಾ ಕಾಂತಿ, ಶ್ರೀಮತಿ ನಾಗವೇಣಿ ಕುಲಕರ್ಣಿ ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮಣ್ಣು ಉಳಿಸಿ ಹೋರಾಟಕ್ಕೆ ಬೆಂಬಲ ನೀಡೋಣ – ಅಶೋಕ ಅಲ್ಲಾಪೂರ

ಸಿಂದಗಿ - ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್...
- Advertisement -

More Articles Like This

- Advertisement -
close
error: Content is protected !!