spot_img
spot_img

ದೈಹಿಕ ಶಿಕ್ಷಣಾಧಿಕಾರಿಗಳಾದ ವೈ.ಎಂ.ಶಿಂಧೆಯವರ ಪದೋನ್ನತಿ ನಿಮಿತ್ತ ಹೃದಯಸ್ಪರ್ಶಿ ಬೀಳ್ಕೊಡುಗೆ

Must Read

“ಮಾನವನಿಗೆ ಅತಿ ಹೆಚ್ಚು ಪ್ರಿಯವಾದುದೆಂದರೆ ಆತನ ಶರೀರ. ಈ ಶರೀರದೊಳಗೆ ಆತ್ಮ, ಮನಸ್ಸು, ಬುದ್ಧಿ, ಭಾವನೆಗಳು ಸೇರಿಕೊಂಡಿವೆ. ಇಂಥ ಶರೀರದ ಶಾರೀರಿಕ ಸ್ವಾಸ್ಥ್ಯ ವನ್ನು ಕಾಪಾಡಲು ದೈಹಿಕ ಶಿಕ್ಷಣ ವ್ಯವಸ್ಥೆ ಸಹಕಾರಿ. ಶರೀರ ಶಿಕ್ಷಣವು ಶಾರೀರಿಕ ಶಿಕ್ಷಣದ ಮೃದುವಾದ ಅಂಗ. ಅಂತಹ ದೈಹಿಕ ಶಿಕ್ಷಣವನ್ನು ತಮ್ಮ ವೃತ್ತಿ ಬದುಕನ್ನಾಗಿಸಿ ಉತ್ತಮ ಸೇವೆಗೈದು ಪದೋನ್ನತಿ ಹೊಂದಿ ಗುಲ್ಬರ್ಗ ಜಿಲ್ಲೆಗೆ ಸೇವೆ ಸಲ್ಲಿಸಲು ಹೊರಟಿರುವ ವೈ.ಎಂ.ಶಿಂಧೆಯವರ ಸೇವೆ ಇನ್ನೂ ಉತ್ತಮವಾಗಿ ಸಾಗಲಿ. ಅವರು ಬಹುತೇಕ ಸೇವೆಯನ್ನು ಸಲ್ಲಿಸಿದ್ದು ಬೆಳಗಾವಿ ಜಿಲ್ಲೆಯಲ್ಲಿ. ಅವರ ಸೇವೆ ಅಜರಾಮರ ಎಂದು ಜಿಲ್ಲಾ ಉಪನಿರ್ದೇಶಕ ಬಸವರಾಜ ನಾಲತವಾಡ ತಿಳಿಸಿದರು.

ಅವರು ಸವದತ್ತಿ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ದೈಹಿಕ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿದ ವೈ.ಎಂ.ಶಿಂಧೆಯವರ ಬೀಳ್ಕೊಡುವ ಸಮಾರಂಭದ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

“ಜೀವನ ಪ್ರಗತಿಗೆ ಬೌದ್ಧಿಕ ಶಿಕ್ಷಣ ಹೇಗೆ ಅವಶ್ಯಕವೋ ಹಾಗೆಯೇ ಶರೀರದ ಆರೋಗ್ಯಕ್ಕೆ ದೈಹಿಕ ಶಿಕ್ಷಣ ಅವಶ್ಯಕವಾಗಿದೆ. ತಮ್ಮ ಸೇವೆಯುದ್ದಕ್ಕೂ ಉತ್ತಮ ಸೇವೆಗೈದ ವೈ.ಎಂ.ಶಿಂಧೆಯವರು ತಾಲೂಕಿನ ಎಲ್ಲ ಶಿಕ್ಷಕರ ಕಣ್ಮಣಿಗಳಾಗಿ ಸೇವೆಗೈದರು. ಅವರ  ಮುಂದಿನ ಜೀವನವು ಕೂಡ ಉತ್ತಮವಾಗಿ ಸಾಗಲಿ ಪದೋನ್ನತಿ ಸ್ಥಳದಲ್ಲೂ ಕೂಡ ಅವರು ಉತ್ತಮವಾಗಿ ಸೇವೆ ಸಲ್ಲಿಸುವ ಮೂಲಕ ಶಿಕ್ಷಣ ಇಲಾಖೆಯಲ್ಲಿ ತಮ್ಮ ಉತ್ತಮ ಜವಾಬ್ದಾರಿ ನಿಭಾಯಿಸಲಿ.

ದೇವರು ಅವರಿಗೆ ಆಯುರಾರೋಗ್ಯ ನೀಡುವಂತಾಗಲಿ”ಎಂದು ಸವದತ್ತಿ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ  ತಿಳಿಸಿದರು.

ವೈ.ಎಂ.ಶಿಂಧೆಯವರ ಹೃದಯಸ್ಪರ್ಶಿ ಬೀಳ್ಕೊಡುವ ಸಮಾರಂಭದಲ್ಲಿ ಶಿಕ್ಷಣಾಧಿಕಾರಿಗಳಾದ ಗುರುನಾಥ ಹೂಗಾರ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕ ಘಟಕದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ. ಪ್ರಧಾನ ಕಾರ್ಯದರ್ಶಿಗಳಾದ ಎಫ್.ಜಿ.ನವಲಗುಂದ ಪದಾಧಿಕಾರಿಗಳಾದ ಎಂ.ಎಸ್.ಹೊಂಗಲ, ಎಸ್.ಎನ್.ಪಾಶ್ಚಾಪೂರ, ಶ್ರೀಮತಿ ಪಿ.ಎ.ಹಲಕಿ, ಶಿಕ್ಷಣ ಸಂಯೋಜಕರಾದ ಎಂ.ಡಿ.ಹುದ್ದಾರ, ಗುರುನಾಥ ಕರಾಳೆ, ಕ್ಷೇತ್ರ
ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರಾಜು ಭಜಂತ್ರಿ, ವ್ಹಿ.ಸಿ.ಹಿರೇಮಠ, ರತ್ನಾ ಸೇತಸನದಿ, ಬಿ.ಐ.ಇ.ಆರ್.ಟಿಗಳಾದ ಸಿ.ವ್ಹಿ.ಬಾರ್ಕಿ, ವೈ.ಬಿ.ಕಡಕೋಳ, ಕಂಪ್ಯೂಟರ್ ಪ್ರೋಗ್ರಾಮರ್‌ಗಳಾದ ವಿನೋದ ಹೊಂಗಲ, ಮಲ್ಲಿಕಾರ್ಜುನ ಹೂಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿಗಳಾದ ಪ್ರಶಾಂತ ಮೋಟೇಕರ, ಎಲ್.ಎಸ್.ಹಿರೇಮಠ, ಎಫ್.ಎಸ್.ಮಾವುತ, ವಿದ್ಯಾ ಗಾಣಗಿ, ಎನ್.ಎಸ್.ವಗೆನ್ನವರ, ಬಿ.ಎಚ್.ಮಾಳಗಿ, ಎಂ.ಎಂ.ಮುಜಾವರ, ರಾಜು ಹನಸಿ, ಸಿ.ಆರ್.ಪಿಗಳಾದ ಕುಶಾಲ ಮುದ್ದಾಪುರ, ಎನ್.ಬಿ.ಪೆಂಟೇದ, ರಾಮಚಂದ್ರಪ್ಪ, ತಿಮ್ಮಯ್ಯ, ಬಾಳೇಶ ಸಿದ್ದಬಸನ್ನವರ, ಶ್ರೀಮತಿ ಎಂ.ಎಂ.ಮುರನಾಳ, ಗುರುದೇವಿ ಮಲಕನ್ನವರ, ಮರಕುಂಬಿ.ಡಿ.ಟಿ, ಎಂ.ಎಂ.ಮಲಕನ್ನವರ, ಎಫ್.ಎಸ್.ಗಡೇಕಾರ, ವಸಂತ ಬಡಿಗೇರ, ಎಸ್.ಎಂ.ಕುಂಬಾರ ಸೇರಿದಂತೆ ದೈಹಿಕ ಶಿಕ್ಷಕರ ಸಂಘದ ಪ್ರತಿನಿಧಿಗಳು ಹಾಗೂ ತಾಲೂಕಿನ ವಿವಿಧ ಭಾಗಗಳ ಶಾಲೆಗಳಿಂದ ಆಗಮಿಸಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರುಗಳಾದ ಭವಾನಿ ಖೊಂದುನಾಯ್ಕ, ಅಪ್ಪು ಕಾತರಕಿ, ಜೆ.ಬಿ.ತಳವಾರ, ಕೆ.ಕೆ.ಲಮಾಣಿ, ಎಸ್.ಜಿ.ತುಡುವೇಕರ, ಕೆ.ಜಿ.ಲಮಾಣಿ, ರಾಠೋಡ,ಎಲ್.ಎಚ್.ಪಾಟೀಲ, ತಿಪ್ಪಣ್ಣ ಜಟ್ಟೆನ್ನವರ, ಎಂ.ಜಿ.ದೊಡಮನಿ, ಎಸ್.ಎಸ.ಬಾಗೋಜಿ, ಲಿಂಗರಾಜ ಪಾಟೀಲ, ಪಿ.ಎಚ್.ಪಾಟೀಲ, ಮಹಾಂತೇಶ ಹಲಕರ್ಣಿ, ಎಂ.ಬಿ.ಕೊಪ್ಪದ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲೆ ಬೆಡಸೂರಿನ ದೈಹಿಕ ಶಿಕ್ಷಕ ಎಂ.ಬಿ.ಕೊಪ್ಪದ ಅವರಿಗೆ ಪ್ರಭಾರ ಕಾರ್ಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ ವಹಿಸಿಕೊಟ್ಟರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಕ್ಷೇತ್ರ ಸಮನ್ವಯಾಧಿಕಾರಿಗಳ ವತಿಯಿಂದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸವದತ್ತಿ ತಾಲೂಕು ಘಟಕದ ವತಿಯಿಂದ,  ದೈಹಿಕ ಶಿಕ್ಷಕರ ಸಂಘಟನೆಗಳ ವತಿಯಿಂದ ಅನುದಾನ ರಹಿತ ಶಾಲಾ ಶಿಕ್ಷಕರ ಸಂಘಟನೆಗಳ ವತಿಯಿಂದ, ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘಟನೆಯ ವತಿಯಿಂದ ಸರಕಾರಿ ಪ್ರೌಢಶಾಲೆ ಕರೀಕಟ್ಟಿ, ಸುತಗಟ್ಟಿ, ಸಂಗ್ರಶಕೊಪ್ಪ ಪ್ರೌಢಶಾಲೆಗಳವರು ವೇದಿಕೆಯಲ್ಲಿ ವೈ.ಎಂ.ಶಿಂಧೆಯವರನ್ನು ಸನ್ಮಾನಿಸಿ ಗೌರವಿಸಿದರು.

ಈ ಎಲ್ಲ ಸನ್ಮಾನಕ್ಕೆ ಪಾತ್ರರಾದ ವೈ.ಎಂ.ಶಿಂಧೆಯವರು ಮಾತನಾಡಿ “ ನನ್ನ ಬದುಕಿನಲ್ಲಿ ಸವದತ್ತಿಯ ಆರಾಧ್ಯ ದೇವತೆ ರೇಣುಕಾ ಮಾತೆಯ ಆಶೀರ್ವಾದದಿಂದ ದೈಹಿಕ ಶಿಕ್ಷಕನಾಗಿ ವೃತ್ತಿ ಪ್ರಾರಂಭಿಸಿ ದೈಹಿಕ ಶಿಕ್ಷಣಾಧಿಕಾರಿ ಹುದ್ದೆಯವರೆಗೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸಲು ತಾಲೂಕಿನ ಎಲ್ಲ ನನ್ನ ದೈಹಿಕ ಶಿಕ್ಷಕರು ಹಾಗು ಸಂಘಟನೆಗಳ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳು ನನಗೆ ತೋರಿಸಿದ ಸಹಕಾರ ಮರೆಯಲಾಗದು.

ತಮ್ಮೆಲ್ಲರ ಪ್ರೋತ್ಸಾಹ ಪ್ರೀತಿಗೆ ನಾನು ಸದಾ  ಚಿರಋಣಿ. ಸವದತ್ತಿ ತಾಲೂಕನ್ನು ನನ್ನ ಜೀವನದಲ್ಲಿ ಯಾವತ್ತೂ ಮರೆಯುವುದಿಲ್ಲ” ಎಂದು ತಮ್ಮ ಸೇವಾ ದಿನಗಳನ್ನು ನೆನಪಿಸಿ ಹೃದಯತುಂಬಿ ಮಾತನಾಡಿದರು.ಶಿಕ್ಷಣ ಸಂಯೋಜಕರಾದ ಎಂ. ಡಿ. ಹುದ್ದಾರ ಕಾರ್ಯ ಕ್ರಮ ನಿರೂಪಿಸಿದರು.

ವೈ.ಎಂ.ಶಿಂಧೆಯವರ ಸಂಕ್ಷಿಪ್ತ ಪರಿಚಯ:

ಯಶವಂತ ಎಂ ಶಿಂಧೆ ಮೂಲತಃ ವಿಜಯಪುರ ಜಿಲ್ಲೆಯ ವನವಾಡದವರು. ಬಡತನದ ಕಡು ಕಷ್ಟದಲ್ಲಿ ಶಿಕ್ಷಣ ಪಡೆದ ಇವರು ನೌಕರಿ ಪ್ರಾರಂಭಿಸಿದ್ದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸರಕಾರಿ ಪ್ರೌಢಶಾಲೆ ಬೈರಿಗಾನಹಳ್ಳಿಯಲ್ಲಿ. ಅಲ್ಲಿನ ಪರಿಸರ ಗ್ರಾಮದವರ ಸಹಕಾರ ಮಕ್ಕಳಲ್ಲಿ ದೈಹಿಕ ಶಿಕ್ಷಣಕ್ಕೆ ಇವರು ತೋರಿದ ಕಾಳಜಿ ಹಲವು ವರ್ಷಗಳಲ್ಲಿಯೇ ಆ ಗ್ರಾಮದ ಅಚ್ಚುಮೆಚ್ಚಿನ ಶಿಕ್ಷಕರಾಗುವಲ್ಲಿ ಪಾತ್ರರಾದರು. ತಮ್ಮ ಊರ ಕಡೆಗೆ ಹತ್ತಿರ ಹೋಗಿ ಸೇವೆಗೈಯಬೇಕು ಎಂದು ಇಚ್ಚಿಸಿದ ಇವರಿಗೆ ನಂತರ ವರ್ಗಾವಣೆಗೊಂಡದ್ದು ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲೂಕಿನ ಸರಕಾರಿ ಪ್ರೌಢಶಾಲೆ ಇಜೇರಿ. ಇಲ್ಲಿಯೂ ಕೂಡ ಛಲಬಿಡದ ತ್ರಿವಿಕ್ರಮನಂತೆ ತಮ್ಮ ಪ್ರಾಮಾಣಿಕ ಸೇವೆಯಿಂದ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳಾಗಿ ಮನೆಮಾತಾದರು.

ತದನಂತರ ಇವರು ಕಾಲಿಟ್ಟಿದ್ದು ಸವದತ್ತಿ ತಾಲೂಕಿನ ಸರಕಾರಿ ಪ್ರೌಢಶಾಲೆ ಕರೀಕಟ್ಟಿಗೆ. ಅಲ್ಲಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ದೈಹಿಕ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿದರು. ತದ ನಂತರ ಬೈಲಹೊಂಗಲ ತಾಲೂಕಿನ ಕೆಂಗಾನೂರ ಸರಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡು ಅಲ್ಲಿ ಸೇವೆ ಸಲ್ಲಿಸುವ ಸಂದರ್ಭ ಮತ್ತೆ ಸವದತ್ತಿ ತಾಲೂಕು ಇವರನ್ನು ಕೈಬೀಸಿ ಕರೆಯುತ್ತಿತ್ತು. ಅದರ ಪರಿಣಾಮ ಅಧ್ಯಾತ್ಮ ಮತ್ತು ಐತಿಹಾಸಿಕ ನೆಲೆ ಹೂಲಿಯ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದರು.ಮತ್ತೆ ದೈಹಿಕ ಶಿಕ್ಷಣಾಧಿಕಾರಿಗಳ ಅಧೀಕೃತ ಬಡ್ತಿಯೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿದರು.

ಈ ಅವಧಿಯಲ್ಲಿ ಬೆಳಗಾವಿ ಉಪನಿರ್ದೇಶಕರ ಕಾರ್ಯಾಲಯಕ್ಕೆ ನಿಯೋಜನೆಗೊಂಡು ಬೆಳಗಾವಿಯಲ್ಲಿಯೂ ಕೂಡ ಸೇವೆ ಸಲ್ಲಿಸಿದರು. ಈಗ ಪದೋನ್ನತಿ ಹೊಂದುವ ಮೂಲಕ ಗುಲ್ಬರ್ಗ ಜಿಲ್ಲೆಗೆ ತೆರಳುತ್ತಿರುವ ವೈ.ಎಂ.ಶಿಂಧೆಯವರು ಸವದತ್ತಿ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಎಲ್ಲ ದೈಹಿಕ ಶಿಕ್ಷಕರ ಜೊತೆಗೂಡಿ ಅತ್ಯಂತ ಅಚ್ಚುಕಟ್ಟುತನದಿಂದ ಸಂಘಟಿಸುವ ಮೂಲಕ ಜಿಲ್ಲೆಯಲ್ಲಿಯೇ ಉತ್ತಮ ಸಂಘಟನಾ ಚತುರರು ಎಂದು ಮನೆಮಾತಾಗಿರುವರು.

ಯಾವುದೇ ರೀತಿಯ ಕ್ರೀಡಾಕೂಟ ಸವದತ್ತಿ ತಾಲೂಕಿನಲ್ಲಿ ಜರುಗಲಿ ಅದರ ಸಂಘಟನೆಯ ಉಸ್ತುವಾರಿ ವೈ.ಎಂ.ಶಿಂಧೆಯವರಿಗೆ ವಹಿಸಿದರೆ ಸಾಕು ಬಹಳಷ್ಟು ಅಚ್ಚುಕಟ್ಟುತನದಿಂದ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವುದರಿಂದ ಹಿಡಿದು ಪರೀಕ್ಷೆ ಮುಗಿದ ನಂತರ ವ್ಯವಸ್ಥಿತವಾಗಿ ಜಿಲ್ಲಾ ಕೇಂದ್ರಕ್ಕೆ ಮರಳಿಸುವವರೆಗೂ ಬಹಳಷ್ಟು ಅಚ್ಚುಕಟ್ಟುತನದಿಂದ ಎಲ್ಲ ಶಿಕ್ಷಕರ ಸಂಘಟನೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ರೀತಿಯನ್ನು ಮರೆಯಲಾಗದು.

ಇಂತಹ ಗುರುಗಳು ಈಗ ಪದೋನ್ನತಿ ಹೊಂದಿ ಗುಲ್ಬರ್ಗ ಜಿಲ್ಲೆಗೆ ಹೊರಟಿದ್ದು ನಿಜಕ್ಕೂ ಸಂತಸದ ಸಂಗತಿ. ಸುದೀರ್ಘ ೩೮ ವರ್ಷಗಳ ಇವರ ವೃತ್ತಿ ಬದುಕಿನಲ್ಲಿ ಸದಾ ಹಸನ್ಮುಖಿಯಾಗಿ ಕಾರ್ಯನಿರ್ವಹಿಸುವ ಮೂಲಕ ಜವಾಬ್ದಾರಿ ಸ್ಥಾನವನ್ನು ನಿಭಾಯಿಸಿರುವರು.

ತಮ್ಮ ಕರ್ತವ್ಯಕ್ಕೆ ಬೆನ್ನೆಲುಬು ತಮ್ಮ ಪತ್ನಿಯೂ ಕೂಡ ಎಂದು ಹೇಳುವ ಇವರು ತಮ್ಮ ಪತ್ನಿ ಜನಾಬಾಯಿವರು ಇವರ ವೃತ್ತಿ ಬದುಕಿನ ಬೆನ್ನೆಲಬು ಎಂದು ಅಭಿಮಾನದಿಂದ ಹೇಳುವರು. ಇವರಿಗೆ ಐದು ಜನ ಮಕ್ಕಳು ಮೂವರು ಹೆಣ್ಣು ಮಕ್ಕಳು ಓರ್ವಳು ವೈದ್ಯೆ. ಇನ್ನಿಬ್ಬರು ಬಿ.ಎಸ್.ಸಿ ಪದವೀಧರರು. ಗಂಡು ಮಕ್ಕಳು ಇಬ್ಬರು ಅವರೂ ಕೂಡ ಬಿ.ಇ. ಪದವೀಧರರು.ಇಂತಹ ಕುಟುಂಬದ ಓರ್ವ ದೈಹಿಕ ಶಿಕ್ಷಣಾಧಿಕಾರಿಯವರ ಸೇವೆ ಕೂಡ ಇದೇ ತಿಂಗಳ ೩೧ ಕ್ಕೆ ಕೊನೆಗೊಳ್ಳುತ್ತಿದ್ದು. ಗುಲ್ಬರ್ಗ ಜಿಲ್ಲೆಯಲ್ಲಿ ಇವರ ಸೇವೆ ಉತ್ತಮವಾಗಿ ಸಾಗಲೆಂದು ಆಶಿಸುವೆ.


ವೈ.ಬಿ.ಕಡಕೋಳ
ಬಿ.ಐ.ಇ.ಆರ್.ಟಿ
ಕ್ಷೇತ್ರ ಸಂಪನ್ಮೂಲ ಕೇಂದ್ರ ಸವದತ್ತಿ

- Advertisement -
- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!