ಬೀದರ – ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೋಹಿನೂರ,ಲಾಡವಂತಿ ,ಬಟಗೇರ ಹಾಗೂ ಇನ್ನು ಕೆಲವು ಗ್ರಾಮಗಳಲ್ಲಿ ಸೋಮವಾರ ಬಿದ್ದ ಭಾರಿ ಮಳೆಗೆ ರೈತರು ಕಂಗಾಲಾಗಿದ್ದಾರೆ.
ಕೆಲವು ದಿನಗಳಿಂದ ಬೀಳುತ್ತಿರುವ ಭಾರೀ ಮಳೆಗೆ ಕೆರೆಗಳಂತಾದ ಗದ್ದೆಗಳು. ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದ ರೈತರ ಹೊಲಗದ್ದೆಗಳಿಗೆ ತಿರುಗಾಡಿದ ಶಾಸಕರು ಬಸವಕಲ್ಯಾಣ ಮತಕ್ಷೇತ್ರ ದಲ್ಲಿ ಬರುವ ಹುಲಸೂರ ಹಾಗು ಬಸವಕಲ್ಯಾಣ ತಾಲ್ಲುಕುಗಳನ್ನು ಅತಿವೃಷ್ಟಿ ತಾಲ್ಲುಕುಗಳೆಂದು ಘೋಷಣೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಬಸವಕಲ್ಯಾಣ ಮತಕ್ಷೇತ್ರದ ಲಾಡವಂತಿ ,ಕೋಹಿನೂರ ಅಟ್ಟೂರು,ಅಟ್ಟೂರ ತಾಂಡಾದಲ್ಲಿ ನಿನ್ನೆ ಬಿದ್ದ ಮಳೆಯಿಂದಾಗಿ ಪಹಾಡ ಗ್ರಾಮಗಳ ಮಧ್ಯೆ ಬ್ರಿಡ್ಜ್ ಬಿದ್ದು ಗ್ರಾಮಸ್ಥರಿಗೆ ಓಡಾಡಲು ತೊಂದರೆ ಯಾಗುತ್ತಿರುವುದನ್ನು ಅರಿತು ಶಾಸಕ ಸಲಗರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮೂಲಕ ಮಾತನಾಡಿ ಆದಷ್ಟು ಬೇಗ ಬ್ರಿಡ್ಜ್ ಕೆಲಸ ಪ್ರಾರಂಭಿಸಲು ಸೂಚಿಸಿದರು.
ಈ ಗ್ರಾಮಗಳ ರೈತರ ಹೊಲಗಳಿಗೆ ಭೇಟಿ ನೀಡಿ ಹೊಲಗಳಲ್ಲಿ ನೀರು ತುಂಬಿರುವುದನ್ನು ವೀಕ್ಷಿಸಿ ಸ್ಥಳದಲ್ಲಿಯೇ ಜಿಲ್ಲಾ ಕೃಷಿ ಜಂಟಿ ನಿರ್ದೇಶಕರಿಗೆ ವಿಡಿಯೋ ಕರೆ ಮೂಲಕ ಮಾತನಾಡಿ ಹೊಲಗಳಲ್ಲಿ ನೀರು ತುಂಬಿರುವುದನ್ನು ತೋರಿಸಿ ಆದಷ್ಟು ಬೇಗ ಖುದ್ದಾಗಿ ತಾವೇ ಹೊಲಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿ ಸರಕಾರಕ್ಕೆ ಹಾಗೂ ಮೇಲಾಧಿಕಾರಿಗಳಿಗೆ ವರದಿ ಮಾಡಲು ತಿಳಿಸಿದ್ದಾರೆ.ಜೊತೆಗೆ ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳಾದ ಮನೋಜ ರಾಜನ್ ಅವರಿಗೆ ಕರೆ ಮುಖಾಂತರ ಮಾತನಾಡಿ, ನನ್ನ ಮತಕ್ಷೇತ್ರದಲ್ಲಿ ಅತಿ ಹೆಚ್ಚು ಮಳೆಯಾಗಿ ಬೆಳೆ ಹಾನಿಯಾಗಿರುವುದನ್ನು ತಿಳಿಸಿ ನನ್ನ ಮತಕ್ಷೇತ್ರದಲ್ಲಿ ಬರುವ ಎರಡೂ ತಾಲೂಕುಗಳಾದ ಹುಲಸೂರ ಹಾಗು ಬಸವಕಲ್ಯಾಣ ಅತಿವೃಷ್ಟಿ ತಾಲೂಕುಗಳೆಂದು ಘೋಷಿಸಬೇಕೆಂದು ಮನವಿ ಮಾಡಿದರು.
ವರದಿ: ನಂದಕುಮಾರ ಕರಂಜೆ, ಬೀದರ