ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಹಗಲು ರಾತ್ರಿ ಭಾರೀ ಮಳೆ ಬಿದ್ದ ಹಿನ್ನೆಲೆಯಲ್ಲಿ ಗಾದಗಿ ಗ್ರಾಮದ ಸೇತುವೆ ಮುಳುಗಡೆಯಾಗಿದ್ದು ವಾಹನ ಸವಾರರು ಪರದಾಡಿದರು
ಬೀದರ ದಿಂದ ಚೀಮಕೋಡ ಚಿಲ್ಲರ್ಗಿ ಸೇರಿದಂತೆ ಹಲವು ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆಯ ಗಾದಗಿ ಸೇತುವೆ ಮಳೆಯಿಂದಾಗಿ ಸಂಪೂರ್ಣ ಜಲಾವೃತವಾಗಿದೆ.
ನಿನ್ನೆ ಸಾಯಂಕಾಲ ಗಾದಗಿ ಶಿವಾರಿನಲ್ಲಿ ಅತಿ ಹೆಚ್ಚು ಮಳೆಯಾದ ಬಗ್ಗೆ ವರದಿಯಾಗಿದ್ದು ಸೇತುವೆ ಜಲಾವೃತ ಗೊಂಡ ಹಿನ್ನೆಲೆ ಕೆಲವು ಕಾಲ ರಸ್ತೆ ಸಂಚಾರ ಸ್ಥಗಿತಗೊಂಡು ವಾಹನ ಸವಾರರು ಪರದಾಡಿದರು. ಆದರೂ ಕೆಲವು ಬೈಕ್ ಸವಾರರು ಹುಂಬು ಧೈರ್ಯದಿಂದ ಸೇತುವೆಯ ಮೇಲೆ ಪ್ರಯಾಣಿಸುತ್ತಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿತ್ತು.
ವರದಿ: ನಂದಕುಮಾರ ಕರಂಜೆ, ಬೀದರ