spot_img
spot_img

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಟ್ರಸ್ಟ್‌ ನೆರವು

Must Read

spot_img
  ಬೆಂಗಳೂರು:  ನಗರದ ಶ್ರೀಮತಿ ಎಂ.ಕೆ. ಜಯಮ್ಮ ಮತ್ತು ಶ್ರೀ ಬಿ.ಎಸ್.ಆರ್. ಶಾಸ್ತ್ರಿ ಟ್ರಸ್ಟ್ ನ 14ನೇ ವಾರ್ಷಿಕೋತ್ಸವ ಕಾರ್ಯಕ್ರಮ ಜನವರಿ 19ರ ಭಾನುವಾರದಂದು ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಅರ್ಥಪೂರ್ಣವಾಗಿ ನಡೆಯಿತು.
    ಗದಗ ಮತ್ತು ವಿಜಯಪುರದ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ  ಸ್ವಾಮಿ ನಿರ್ಭಯಾನಂದ ಸರಸ್ವತಿ ಮತ್ತು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ  ಸ್ವಾಮಿ ವೀರೇಶಾನಂದ ಸರಸ್ವತಿ ಅವರ ಸಮ್ಮುಖದಲ್ಲಿ ನಡೆದ ಈ ಸಮಾರಂಭದಲ್ಲಿ ವಿವಿಧ      ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ನಡೆದವು.
     ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಕಂಪ್ಯೂಟರ್ ವಿಜ್ಞಾನ ಮತ್ತು ಆಟೊಮೇಷನ್‌ನ ನಿವೃತ್ತ ಪ್ರಾಧ್ಯಾಪಕ ಡಾ. ವೈ. ನರಹರಿ, ಖ್ಯಾತ ಕ್ಯಾನ್ಸರ್‌ತಜ್ಞರು, ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿಗಳಾದ  ಡಾ. ಬಿ.ಎಸ್‌. ಶ್ರೀನಾಥ್‌, ಖ್ಯಾತ ಶಿಕ್ಷಣ ತಜ್ಞರಾದ ಡಾ. ಎಚ್‌.ಎಸ್‌. ನಾಗರಾಜ್‌ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದರು.
   ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ  ಮಾಡಿ, ಸಮಾಜಕ್ಕೆ ಗಮನಾರ್ಹ ಕೊಡುಗೆ ನೀಡಿದ, ಹೆಸರಾಂತ ಕೊಳಲು ವಾದಕ ವಿದ್ವಾನ್ ಎಚ್.ಎಸ್. ವೇಣುಗೋಪಾಲ್, ಖ್ಯಾತ ಹೃದ್ರೋಗ ತಜ್ಞ ಮತ್ತು ಜಯದೇವ ಹೃದಯರಕ್ತನಾಳ  ಸಂಸ್ಥೆಯ ಪ್ರಾಧ್ಯಾಪಕ ಡಾ. ಎಲ್. ಶ್ರೀಧರ್, ಖ್ಯಾತ ನೇತ್ರಶಾಸ್ತ್ರಜ್ಞ ಡಾ. ಬಿ.ಎಸ್. ಮುರಳೀಧರ ಕೃಷ್ಣ, ಬೆಂಗಳೂರು ವಿಠಲ ಕಣ್ಣಿನ ಆರೈಕೆ ಆಸ್ಪತ್ರೆಯ  ಹಿರಿಯ ಕಣ್ಣಿನ ಪೊರೆ ಶಸ್ತ್ರಚಿಕಿತ್ಸಕ ಡಾ. ಬಿ.ಎಸ್. ಸಿಂಧು ಅವರನ್ನು ಸನ್ಮಾನಿಸಲಾಯಿತು.ಅಸಾಧಾರಣ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಚೆನ್ನೈ ಗಣಿತ ಸೊಸೈಟಿಯ ವಿದ್ಯಾರ್ಥಿ ಚಿನ್ಮಯ್ ಪ್ರವೀಣ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
    ಸಮಾಜ ಸೇವೆಯಲ್ಲಿ ತೊಡಗಿರುವ ವಿವಿಧ ಟ್ರಸ್ಟ್‌ಮತ್ತು ಸಂಸ್ಥೆಗಳಿಗೆ  ಶ್ರೀಮತಿ ಎಂ.ಕೆ. ಜಯಮ್ಮ ಮತ್ತು ಶ್ರೀ ಬಿ.ಎಸ್.ಆರ್. ಶಾಸ್ತ್ರಿ ಟ್ರಸ್ಟ್ ನ ವತಿಯಿಂದ ಈ ಸಂದರ್ಭದಲ್ಲಿ ದೇಣಿಗೆ ನೀಡಲಾಯಿತು. ಪ್ರತಿಭಾವಂತ ವಿಧ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು, ಮಧುಮೇಹ ರೋಗಿಗಳಿಗೆ, ಬಾಲಾಪರಾಧಿಗಳು ಮತ್ತು ಹಿರಿಯರಿಗೆ ಚಿಕಿತ್ಸೆ ನೀಡಲು ಆರ್ಥಿಕ  ಸಹಕಾರ ನೀಡಲಾಯಿತು.
   ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಟ್ರಸ್ಟಿಗಳಾದ  ಬಿ.ಆರ್.‌ರವಿ ಮತ್ತು ಬಿ.ಆರ್‌. ನಾಗರಾಜ್‌ಅವರ  ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಈ ಕಾರ್ಯಕ್ರಮವನ್ನು ಹೆಸರಾಂತ ನಿರೂಪಕರಾದ  ಶಂಕರ್ ಪ್ರಕಾಶ್  ನಿರೂಪಿಸಿದರು.
- Advertisement -

LEAVE A REPLY

Please enter your comment!
Please enter your name here

- Advertisement -

Latest News

ನಾಗೂರಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು. ಕ್ಲಸ್ಟರಿನ ಹನ್ನೆರಡು ಶಾಲೆಗಳಿಂದ ಆಗಮಿಸಿದ 100ಕ್ಕೂ...
- Advertisement -

More Articles Like This

- Advertisement -
close
error: Content is protected !!
Join WhatsApp Group