ಬೆಳಗಾವಿ – ಅಂಗವಿಕಲರಿಗೆ ಪ್ರೋತ್ಸಾಹ ನೀಡಿ ಸಧೃಡ ಮನುಷ್ಯರಂತೆ ಸಮಾಜದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲಿಕ್ಕೆ ಸರಕಾರ ಹಾಗೂ ಅಸೋಸಿಯೇಶನ್ ದವರ ಸಹಾಯ ಸಹಕಾರ ಅತೀ ಅವಶ್ಯಕವಾದದ್ದು ಎಂದು ನಿವೃತ್ತ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಹೇಳಿದರು.
ಅವರು ಬೆಳಗಾವಿ ಅಜಯ ಅಸುಂಡೆ ಸ್ಪೋರ್ಟ್ಸ್ ಆಕಾಡೆಮಿ ಕರ್ನಾಟಕ ಪ್ಯಾರಾ ಅಸೋಸಿಯೇಶನ್ ಆಫ್ ಪಿಜಿಕಲ್ ಚಾಲೆಂಜ್ ಡ ದಿವ್ಯಾಂಗ ಪ್ಯಾರಾ ಸ್ಫೋಟ್ಸ್ ಆಕಾಡೆಮಿ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ಪರ್ಧಾಳುಗಳು ಥ್ರೋಬಾಲ್ ಮತ್ತು ವಿವಿಧ ಆಟಗಳಲ್ಲಿ ಬಾಗವಹಿಸಿ ಗೆಲುವು ಸಾಧಿಸಿ ರಾಜ್ಯಮಟ್ಟದಲ್ಲಿ ಆಯ್ಕೆಯಾಗಿರೆಂದು ಹೇಳಿದರು.
ಮಡಿವಾಳಪ್ಪ ಬೀದರಗಡ್ಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಅಂಗವಿಕಲರಿಗೆ ಸರಕಾರದ ಅನುದಾನ, ಪ್ರೋತ್ಸಾಹ ಧನ ದೊರೆಯಬೇಕು. ಕರ್ನಾಟಕದಿಂದ ಸ್ಪರ್ಧಿಸುವ ಸ್ಪರ್ಧಾಳುಗಳು ಬಹಳಷ್ಟು ಸಂಖ್ಯೆಯಲ್ಲಿ ಗೆಲುವು ಸಾಧಿಸಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗಬೇಕೆಂದು ಹೇಳಿದರು.
ಕಾರ್ಯಕ್ರಮದ ರೂವಾರಿ ಹನುಮಂತ ಹಾವನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು . ಈ ಸಮಯದಲ್ಲಿ ಕರ್ಣಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ತ್ರಿಕಾಲ ಪಾಟೀಲ, ಸುರೇಶ ಯಾದವ, ಅಜಯ ಅಸುಂಡೇ, ಕೆ ಶ್ರೀನಿವಾಸ ಕುಮಾರ, ಆರ್ ಬಿ ಬನಶಂಕರಿ, ಬಸವರಾಜ ತಲವಾಯಿ, ರಾಜಶೇಖರ ತಳವಾರ, ಮುರಿಗೆಪ್ಪ ಮಾಲಗಾರ, ಆನೇಕಲ್ ಶ್ರೀ ನಿವಾಸ, ರೇಣುಕಾ ಶ್ರೀನಿವಾಸ, ಡಿ ಪಾರ್ಥಿಬನ್, ಸಿದ್ದು ಗದ್ದೇಕರ್ ಸೇರಿದಂತೆ ಅನೇಕರಿದ್ದರು ಕಾರ್ಯಕ್ರಮವನ್ನು ಮುರಿಗೆಪ್ಪ ಮಾಲಗಾರ ನಿರೂಪಿಸಿ. ಅಜಯ ಶೇಗುಣಸಿ ಸ್ವಾಗತಿಸಿ, ಲಕ್ಷ್ಮಣ ದೇಗಾನಟ್ಟಿ ವಂದಿಸಿದರು.