ಬಡ ಕುಟುಂಬಗಳಿಗೆ ಆಸರೆಯಾದ ಹೆಲ್ಪಿಂಗ್ ಹ್ಯಾಂಡ್ ಯುವಕರ ತಂಡ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವವರಿಗೆ ಉಚಿತ ಆಹಾರ ಕಿಟ್ ವಿತರಣೆ

ಬೈಲಹೊಂಗಲ: ಕೋವಿಡ್-19 ಎರಡನೇ ಅಲೆಯನ್ನು ತಡೆಗಟ್ಟಲು ಸರಕಾರ ಘೋಷಿಸಿರುವ ಲಾಕ್‍ಡೌನ್‍ನಿಂದ ಬಡ ಕುಟುಂಬಗಳು ಸಂಕಷ್ಟದಲ್ಲಿರುವುದನ್ನು ಮನಗಂಡು ಹೆಲ್ಪಿಂಗ್ ಹ್ಯಾಂಡ್ ಯುವಕರ ತಂಡ ಆಹಾರದ ಕಿಟ್ ವಿತರಿಸಿ ಮಾನವೀಯತೆ ಮೆರೆದರು.

ಪಟ್ಟಣದ ಹರಳಯ್ಯಾ ಕಾಲೋನಿಯಲ್ಲಿರುವ ಬಡ ಕುಟುಂಬಗಳಿಗೆ ಉಚಿತ ಆಹಾರದ ಕಿಟ್ ವಿತರಿಸಲಾಯಿತು.

- Advertisement -

ಪುರಸಭೆ ಸ್ಥಾಯಿ ಸಮೀತಿ ಅಧ್ಯಕ್ಷ ಅರ್ಜುನ ಕಲಕುಟಕರ ಮಾತನಾಡಿ, ಕೊರೋನಾ ರೋಗವು ಬಡವರ ಮೇಲೆ ಕರಿ ನೆರಳು ಬಿದ್ದಿದ್ದು, ಒಂದೊಪ್ಪತ್ತು ಊಟವಿಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಅರಿತು ಯುವಕರ ತಂಡ ಬಡ ಕುಟುಂಬಗಳ ಸಹಾಯಾರ್ಥವಾಗಿ ಒಂದು ತಿಂಗಳವಾಗುವಷ್ಟು ಉಚಿತ ಆಹಾರದ ಕಿಟ್ ವಿತರಿಸಲಾಗುತ್ತಿದೆ. ಈಗಾಗಲೇ 300 ಕೀಟ್ ಗಳನ್ನು ವಿತರಿಸಲಾಗುತ್ತಿದೆ. ಇನ್ನೂ ಹೆಚ್ಚಿನ ಕಿಟ್‍ಗಳನ್ನು ವಿತರಿಸುವ ಯೋಜನೆ ಹಮ್ಮಿಕೊಂಡಿದ್ದಾಗಿ ತಿಳಿಸಿದರು.

ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಮಾತನಾಡಿ, ಸರಕಾರ ಘೊಷಿಸಿರುವ ಲಾಕ್‍ಡೌನ್‍ನಿಂದ ಬಡ ಜನರು, ಅಟೋ ಚಾಲಕರು ವ್ಯಾಪಾರ-ಉದ್ಯೋಗ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಸರಕಾರ ಘೋಷಿಸುವ ಪರಿಹಾರ ನಿಜವಾದ ಬಡವರಿಗೆ ತಲುಪುತ್ತಿಲ್ಲ. ಇಂತಹ ಬಡ ಜನರ ನೆರವಿಗೆ ನಿಂತಿರುವ ಹೆಲ್ಪಿಂಗ್ ಹ್ಯಾಂಡ್ ಯುವಕರ ತಂಡದ ಕಾರ್ಯ ಶ್ಲಾಘನೀಯ. ಪ್ರತಿದಿನ ಕೂಲಿ ಕೆಲಸ ಮಾಡಿ ಜೀವನ ನಡೆಸುವವರ ಗೋಳು ಕೇಳುವವರು ಯಾರು ಇಲ್ಲ. ಸರಕಾರ ಇಂತಹ ನಿಜವಾದ ಬಡವರಿಗೆ ಸಹಾಯ-ಸಹಕಾರ ಮಾಡಬೇಕೆಂದರು.

ಈಗಾಗಲೇ ಯುವಕರ ತಂಡದ ಆಶ್ರಯದಲ್ಲಿ ನೂರಾರು ಕಿಟ್‍ಗಳನ್ನು ವಿತರಿಸಲಾಗಿದ್ದು, ಗ್ರಾಮೀಣ ಭಾಗಗಳಲ್ಲಿಯೂ ಆಹಾರದ ಕಿಟ್‍ಗಳನ್ನು ವಿತರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ವೈದ್ಯಕೀಯ ವಿದ್ಯಾರ್ಥಿ ಸೂರಜ ಮತ್ತಿಕೊಪ್ಪ, ಯುವ ಮುಖಂಡ ವಿನಯ ಬೋಳಣ್ಣವರ, ಔಷಧ ಅಂಗಡಿ ಮಾಲಿಕ ಗೌತಮ ಇಂಚಲ, ಉದ್ದಿಮೆದಾರ ವಿನಯ ಪರೀಟ್, ಗುತ್ತಿಗೆದಾರ ಸೋಯೇಬ ಸಂಗೊಳ್ಳಿ, ಶರಣ ಹೂಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ಪ್ರತಿದಿನ ಕೂಲಿ ಕೆಲಸ ಮಾಡಿ ಜೀವನ ನಡೆಸಬೇಕು. ಇಂತಹದರಲ್ಲಿ ಯಾವುದೇ ವ್ಯಾಪಾರ-ವಹಿವಾಟವಿಲ್ಲದೆ ಒಂದೊಪ್ಪತ್ತು ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸರಕಾರದಿಂದ ನಮ್ಮಂತ ಬಡವರಿಗೆ ಯಾವುದೇ ರೀತಿ ಸಹಾಯ-ಸಹಕಾರ ಕೂಡಾ ದೊರೆತಿಲ್ಲ. ಇಂತಹದರಲ್ಲಿ ನಮ್ಮ ಪಾಲಿನ ದೇವರುಗಳಾಗಿ ನಿಂತು ಆಹಾರದ ಕಿಟ್‍ಗಳನ್ನು ವಿತರಿಸಿದ್ದು ಒಳ್ಳೆಯ ಕಾರ್ಯವಾಗಿದೆ. ದೇವರು ಅವರೆಲ್ಲರಿಗೂ ಆಯುಷ್ಯ, ಆರೋಗ್ಯ ಕರುಣಿಸಲಿ.

-ವ್ಯಾಪಾರ-ವಹಿವಾಟು ಕಳೆದುಕೊಂಡಿರುವ ಮಹಿಳೆ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!