spot_img
spot_img

ತ್ಯಾಗ, ಕ್ಷಮೆಯ ಸಾಕಾರ ಮೂರ್ತಿ ಹೇಮರಡ್ಡಿ ಮಲ್ಲಮ್ಮ

Must Read

ಮೂಡಲಗಿ: ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದಯೆ, ಕರುಣೆ, ಪರೋಪಕಾರ, ದಾನ-ಧರ್ಮ, ತ್ಯಾಗ ಕ್ಷಮೆಯ ಸಾಕಾರ ಮೂರ್ತಿಯಾಗಿದ್ದರು ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪಆಯುಕ್ತ ಜಿ.ಬಿಗೌಡಪ್ಪಗೋಳ ಹೇಳಿದರು.

ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಶ್ರೀ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಉದ್ಘಾಟನೆ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಸಮಾರಂಭದ ಪ್ರಯುಕ್ತ ಹಮ್ಮಿಕೊಂಡ ಮೊದಲ ದಿನದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇತ್ತೀಚಿನ ವರ್ಷಗಳಲ್ಲಿ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ ಪ್ರಗತಿ ಹೊಂದುತ್ತಿದ್ದರೂ ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ಎಚ್ಚರಿಕೆ ಗಂಟೆ ಎಂದು ತಿಳಿಸಿದರು.

ಗ್ರಾಮಗಳಲ್ಲಿ ಶರಣರ ಆಗಮನದಿಂದ ಸಂತ-ಮಹಂತರ ನುಡಿಗಳನ್ನು ಆಲಿಸುವುದರಿಂದ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದರು.

ಕಕಮರಿಯ ಸದ್ಗುರು ಅಭಿನವ ಗುರುಲಿಂಗಜಂಗಮ ಮಹಾರಾಜರು ಮಹಾಯೋಗಿ ವೇಮನರ ಕುರಿತು ಮತ್ತು ನಾವಲಗಿ ಹಿರೇಮಠದ ಶ್ರೀ ವೇದಮೂರ್ತಿ ಶ್ರೀಶೈಲ ಮಹಾಸ್ವಾಮಿಗಳು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಲಂಬಿಕೆಯ ಸಿದ್ದು ಸಾಧನೆಗಳ ಕುರಿತು ಹಾಗೂ ಶಿರಂಜುಜ್ಞಾನ ಯೋಗಾಶ್ರಮದ ಶ್ರೀ ಬಸವಸಮರ್ಥ ಶ್ರೀಗಳು ಪ್ರವಚನ ನೀಡಿದರು ಶ್ರೀ ಶಂಕರೆಪ್ಪ ಮಹಾರಾಜರು ಮೌಲಿಕ ಹಿತೋಪದೇಶ ನೀಡಿದರು.

ಈ ಸಮಯದಲ್ಲಿ ವೆಂಕಟಾಪೂರ ಗ್ರಾಮಸ್ಥರು, ಹೇಮರಡ್ಡಿ ಮಲ್ಲಮ್ಮ ಸಮಿತಿ ಸದಸ್ಯರು, ವಿವಿಧ ಗ್ರಾಮಗಳ ಭಕ್ತಾಧಿಗಳು ಉಪಸ್ಥಿತರಿದರು.

- Advertisement -
- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!