ಬೆಳಗಾವಿ: ಪ್ರಸ್ತುತ ಮಾನವ ಜನಾಂಗಕ್ಕೆ ಹೇಮರೆಡ್ಡಿ ಮಲ್ಲಮ್ಮ ವಚನಗಳು ದಾರಿ ದೀಪವಾಗಿವೆ ಎಂದು ಮಾಜಿ ಶಾಸಕ ಜಿ.ಟಿ.ಪಾಟೀಲ ಹೇಳಿದರು.
ಗುರುವಾರದಂದು ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ನಡೆಯುತ್ತಿರುವ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ ನಾಲ್ಕನೇ ದಿನದ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಜಾಗತೀಕರಣ ಯುಗದಲ್ಲಿ ನಾವೆಲ್ಲಾ ಆಧ್ಯಾತ್ಮಿಕತೆಯ ಕಡೆಗೆ ನಾವೆಲ್ಲಾ ಮುಖ ಮಾಡಬೇಕಾಗಿದೆ. ಮಠ ಮಾನ್ಯಗಳು ಶಿಕ್ಷಣ ಕೇತ್ರದಲ್ಲಿ ಕ್ರಾಂತಿ ಮಾಡದಿದ್ದರೆ ಇಂದಿಗೂ ನಮಗೆಲ್ಲಾ ಶಿಕ್ಷಣ ಸಿಗುತ್ತಿರಲಿಲ್ಲ.21ನೇ ಶತಮಾನದ ನಾವೆಲ್ಲಾ ಯಾಂತ್ರಿಕರಣದಲ್ಲಿ ಮುಳಗಿದ್ದೇವೆ. ನಮ್ಮ ಜೀವನ ಟಿವಿ, ಮೊಬೈಲ್ ನಲ್ಲಿ ಸಿಲುಕಿಕೊಂಡಿದ್ದೇವೆ. ತಂತ್ರಜ್ಞಾನ ಅವಶ್ಯಕತೆ ತಕ್ಕಂತೆ ಬಳಸಿಕೊಳ್ಳಬೇಕು. ಮಕ್ಕಳನ್ನು ತಂತ್ರಜ್ಞಾನದಿಂದ ಮಕ್ಕಳ ದೂರವಿಡಿ. ಇಲ್ಲದಿದ್ದರೆ ಪಾಲಕರು ಸಮಸ್ಯೆ ಎದುರಿಸುತ್ತೇವೆ. ಆಧ್ಯಾತ್ಮಿಕ ಕ್ಷೇತ್ರದ ಕಡೆಗೆ ಗಮನ ಹರಿಸಿ.
ಎಲ್ಲ ಕ್ಷೇತ್ರಗಳ ವಿಫಲವಾಗಿದ್ದು, ತಪ್ಪು ದಾರಿಯಲ್ಲಿ ನಾವೆಲ್ಲಾ ಸಾಗಿಸುತ್ತಿದ್ದೇವೆ. ಮಠಾಧೀಶರು ಸರಿ ದಾರಿಗೆ ತರುವ ಕೆಲಸ ಮಾಡಬೇಕು. ಆದರೆ, ಅನಿವಾರ್ಯ ಕಾರಣಗಳಿಂದ ಮಠಗಳು ಅಸಹಾಯಕತೆಯಲ್ಲಿ ಸಿಲುಕಿಕೊಂಡಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಎಲ್ಲ ಕ್ಷೇತ್ರಗಳಲ್ಲಿ ಜಾತೀಯತೆ ಹೆಚ್ಚಾಗಿರುತ್ತಿರುವುದು ದೇಶಕ್ಕೆ, ರಾಜ್ಯಕ್ಕೆ ಅಪಾಯ ಉಂಟು ಮಾಡಿದೆ. ನಮ್ಮ ದೇಶವನ್ನು ಬಿಟ್ರಿಷರು ಸೇರಿದಂತೆ ಆಡಳಿತ ನಡೆಸಿದ್ದಾರೆ. ಆದರೆ ಇಷ್ಟು ಪ್ರಮಾಣದಲ್ಲಿ ಜಾತಿ ವ್ಯವಸ್ಥೆ ಇರಲಿಲ್ಲ. ನಾವೆಲ್ಲಾ ಮಠಾಧೀಶರಿಗೆ ತಲೆ ಬಾಗಬೇಕಾಗಿದೆ ಎಂದರು.
ಸಮಾಜದಲ್ಲಿ ಆರ್ಥಿಕವಾಗಿ ಬಲಿಷ್ಠವಾಗಿರುವವರಿಗೆ ಗೌರವ ಹೆಚ್ಚಾಗುತ್ತಿದೆ.ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ. ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದರು.
ಮರಿಗುದ್ದಿಯ ಡಾ.ನಿರುಪಾಧೀಶ್ವರ ಸ್ವಾಮೀಜಿ, ಕಕಮರಿಯ ಸದ್ಗುರು ಅಭಿನವ ಗುರುಲಿಂಗಜಂಗಮ ಮಹಾರಾಜರು ಮತ್ತಿತರರು ಇದ್ದರು.