spot_img
spot_img

ವೆಂಕಟಾಪುರದಲ್ಲಿ ಸರ್ವಧರ್ಮ ಸಂದೇಶ ಸಾರಿದ ಹೇಮರೆಡ್ಡಿ ಮಲ್ಲಮ್ಮ ಕುಂಭಮೇಳ

Must Read

ಮೇ.27ರಂದು ಹೇಮರೆಡ್ಡಿ ಮಲ್ಲಮ್ಮ ದೇವಾಲಯ ಉದ್ಘಾಟನೆ ಮತ್ತು ಕಳಸಾರೋಹಣ

ಮೂಡಲಗಿ: ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಸಾದ್ವಿ ಶ್ರೀ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಸಮಾರಂಭ ನಿಮಿತ್ತವಾಗಿ ರವಿವಾರ ಜರುಗಿದ ಶ್ರೀ ಹೇಮರಡ್ಡಿ ಮಲ್ಲಮ್ಮ ಮೂರ್ತಿ ಮತ್ತು ದೇವಾಲಯದ ಕಳಸ ಮೆರವಣಿಗೆಯಲ್ಲಿ ಸರ್ವಧರ್ಮ ಸಂದೇಶ ಸಾರುವ ಶ್ರೀ ಹೇಮರಡ್ಡಿ ಮಲ್ಲಮ್ಮ ಬೃಹತ್ ಕುಂಭಮೇಳ ಜರುಗಿತು.

ರವಿವಾರ ಮುಂಜಾನೆ ಶ್ರೀ ಹೇಮರಡ್ಡಿ ಮಲ್ಲಮ್ಮ ಮೂರ್ತಿ ಮತ್ತು ಕಳಸದ  ಮೆರವಣಿಗೆ ನಿಮಿತ್ತ ತಾಲೂಕಿನ ಯಾದವಾಡ ಗ್ರಾಮದಿಂದ ವೆಂಕಟಾಪೂರ ಗ್ರಾಮದವರಿಗೆ ಯುವಕರ ಬೃಹತ್ ಬೈಕ್ ರ್ಯಾಲಿ ನಡೆಯಿತು. ನಂತರ ಗ್ರಾಮದಲ್ಲಿ ಶ್ರೀ ಹೇಮರಡ್ಡಿ ಮಲ್ಲಮ್ಮ ಮೂರ್ತಿ ಮತ್ತು ಕಳಸದ  ಮೆರವಣಿಗೆ ಗೆ ನಾವಲಗಿಯ ಹಿರೇಮಠದ ಶ್ರೀವೇದಮೂರ್ತಿ ಶ್ರೀಶೈಲ್ ಮಹಾಸ್ವಾಮೀಜಿ ಪೂಜೆಸಲ್ಲಿಸಿ ಚಾಲನೆ ನೀಡಿದರು.

ಮೆರವಣಿಗೆಯು ಗ್ರಾಮದ ಸರ್ವಧರ್ಮದ ಮಹಿಳೆಯರ ಕುಂಭಮೇಳ,  ಕರಡಿ ಮಜಲು, ಝಾಂಜಪಥಕ ಮತ್ತು  ವಿವಿಧ ವಾದ್ಯಮೇಳ ದೊಂದಿಗೆ ಗ್ರಾಮದ ವಿವಿಧ ರಸ್ತೆ ಮತ್ತು ಓಣಿಗಳ ಮುಖಾಂತರ ದೇವಾಲಯದವರೆಗೆ ಸಡಗರ ಸಂಭ್ರಮದಿಂದ ನಡೆಯಿತು. ನಂತರ ಅನ್ನಪ್ರಸಾದ ಜರುಗಿತು.

ಮೇ.27 ರವರಿಗೆ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಅನ್ನ ಪ್ರಸಾದದೊಂದಿಗೆ  ಸಂಜೆ 6 ಗಂಟೆಗೆ ವಿವಿಧ ಶ್ರೀಗಳ ಸಾನ್ನಿಧ್ಯದಲ್ಲಿ ಹೇಮರೆಡ್ಡಿ ಮಲ್ಲಮ್ಮ ಮತ್ತು ವೇಮನರ ಚರಿತ್ರೆ ಕುರಿತು ಪ್ರವಚನ ಜರುಗಲಿದೆ. ಮೇ.27ರಂದು ದೇವಾಲಯದ ಉದ್ಘಾಟನಾ ಸಮಾರಂಭ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಮತ್ತು ಗಣ್ಯ ಮಾನ್ಯರ ಉಪಸ್ಥಿತಿ ಜರುಗಲಿದೆ.

ಶ್ರೀ ಹೇಮರಡ್ಡಿ ಮಲ್ಲಮ್ಮ ಮೂರ್ತಿ ಮತ್ತು ದೇವಾಲಯದ ಕಳಸ ಮೆರವಣಿಗೆಯಲ್ಲಿ ಗ್ರಾಮದ ಶ್ರೀ ಹೇಮರೆಡ್ಡಿ ಮಲ್ಲಮ್ಮ ಸಮಿತಿ ಅಧ್ಯಕ್ಷ ಚಂದ್ರಶೇಖರ ಕೋಳಿಗುಡ್ಡ, ಉಪಾಧ್ಯಕ್ಷ ಸುಧಾಕರ ನಾಯಿಕ ಹಾಗೂ ಸಮಿತಿಯ ಸದಸ್ಯರು ಹಾಗೂ ಗ್ರಾಮದ ಸರ್ಮಧರ್ಮದ ಮುಖಂಡರು, ಗ್ರಾಮಸ್ಥರು ಭಾಗಿಯಾಗಿದರು.

- Advertisement -
- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!