spot_img
spot_img

ಪ್ರೌಢಶಾಲಾ ಸಹ ಶಿಕ್ಷಕರ ಸಂಘ ತಾಲೂಕು ಘಟಕಕ್ಕೆ ಅವಿರೋಧ ಆಯ್ಕೆ

Must Read

spot_img

ಸವದತ್ತಿ: ತಾಲೂಕಿನ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ತಾಲೂಕು ಘಟಕಕ್ಕೆ 2022 – 27 ನೇ ಸಾಲಿನ ಐದು ವರ್ಷಗಳ ಅವಧಿಗೆ ಪದಾಧಿಕಾರಿಗಳ ಆಯ್ಕೆಯು ಅವಿರೋಧವಾಗಿ ಜರುಗಿತು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್. ಸಿ. ಕರೀಕಟ್ಟಿ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಸವದತ್ತಿಯ ಅಧ್ಯಕ್ಷರಾದ ಎಚ್. ಆರ್. ಪೆಟ್ಲೂರ್ ನಿಕಟಪೂರ್ವ ಅಧ್ಯಕ್ಷರಾದ ಎಸ್. ವಿ. ಬೆಳವಡಿ ಹಾಗೂ ಕಾರ್ಯದರ್ಶಿಗಳಾದ ಎಫ್. ಜಿ. ನವಲಗುಂದ ಹಾಜರಿದ್ದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಆನಂದ್ ಮೂಗಬಸವ ನೌಕರರ ಸಂಘದ ಪ್ರೌಢಶಾಲೆ ವಿಭಾಗದ ಸದಸ್ಯರಾದ ವಿಠ್ಠಲ್ ದೇವರೆಡ್ಡಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ-ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಬಿ. ಬಿ. ನಾಗಲಗಟ್ಟಿ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಪಿ. ಕರಲಿಂಗಪ್ಪನವರ್ ಶಿಕ್ಷಣ ಸಂಯೋಜಕರಾದ ಎಂ. ಡಿ. ಹುದ್ದಾರ್ , ಗುರುನಾಥ್ ಕರಾಳೆ,ಜೊತೆಗೆ ಸ್ನೇಹ ಜೀವಿ ಶಿಕ್ಷಕರಾದ ಉಮೇಶ್ ಅಗಸಿಮನಿ, ಗುರುಲಿಂಗಯ್ಯ ಅವತಾರಿ,ಅರ್ಟಗಲ್ಲ ಸಿ.ಆರ್.ಪಿ ಗದಿಗೆಪ್ಪ ಚಪ್ಪಲಕಟ್ಟಿ,ತಾಲೂಕಾ ಸ್ಕೌಟ್ ಕಾರ್ಯದರ್ಶಿ ನಿಂಗಪ್ಪ ಕಬ್ಬೂರ್ ಹಾಗೂ ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಈ ಕೆಳಗಿನಂತೆ ಪದಾಧಿಕಾರಿಗಳ ಆಯ್ಕೆ ಜರುಗಿತು:

  • ಸವದತ್ತಿ ತಾಲೂಕಾ ಅಧ್ಯಕ್ಷರಾಗಿ ಸುಧೀರ ವಾಗೇರಿ (ಸರಕಾರಿ ಪ್ರೌಢಶಾಲೆ ಚಿಕ್ಕುಂಬಿ)
  • ಪ್ರಧಾನ ಕಾರ್ಯದರ್ಶಿಯಾಗಿ ದಾನಯ್ಯ ಹಿರೇಮಠ (ಸರ್ಕಾರಿ ಪ್ರೌಢಶಾಲೆ ಯಕ್ಕುಂಡಿ)
  • ರಾಜ್ಯ ಪರಿಷತ್ ಸದಸ್ಯರಾಗಿ ಕುಮಾರ ದಾಸರ (ಬಸವೇಶ್ವರ ಪ್ರೌಢಶಾಲೆ ಯರಗಟ್ಟಿ)
  • ಖಜಾಂಚಿಗಳಾಗಿ ರುದ್ರಪ್ಪ ನೀಲುಗಲ್ಲ (ಸರ್ಕಾರಿ ಪ್ರೌಢಶಾಲೆ, ಅರ್ಟಗಲ್)
  • ಉಪಾಧ್ಯಕ್ಷರಾಗಿ ಮಂಜುನಾಥ ಕಾಜಗಾರ (ಸರಕಾರಿ ಪ್ರೌಢಶಾಲೆ ಸುತಗಟ್ಟಿ)
  • ಸಹ ಕಾರ್ಯದರ್ಶಿಯಾಗಿ ಆನಂದ್ ಬಾನಿ (ಎಂ ಎಸ್ ಎಸ್ ಪ್ರೌಢಶಾಲೆ ಅಸುಂಡಿ)
- Advertisement -
- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!