spot_img
spot_img

ಕಾಂಗ್ರೆಸ್ ಕುತಂತ್ರದಿಂದ ಹಿಂದೂ ಮುಸ್ಲಿಮ್ ಗಲಭೆ – ಚಕ್ರವರ್ತಿ ಸೂಲಿಬೆಲೆ

Must Read

ಬೀದರ – ನಿಜವಾದ ದೇಶಭಕ್ತ ಸಾವರ್ಕರ್ ವಿರುದ್ಧ ಕಾಂಗ್ರೆಸ್ ನವರು ಅಪಪ್ರಚಾರ ಮಾಡಿದಷ್ಟೂ ಇನ್ನೂ ಹೆಚ್ಚಾಗಿ ನಮ್ಮಂಥ ಕಾರ್ಯಕರ್ತರು ಸಾವರ್ಕರ ಬಗ್ಗೆ ಇನ್ನೂ ಹೇಳುತ್ತಲೇ ಇರುತ್ತೇವೆ ಎಂದು  ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಸಾವರ್ಕರ್ ವಿಷಯದಲ್ಲಿ ಶಿವಮೊಗ್ಗ ದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ವಿಚಾರದ ಬಗ್ಗೆ ಕಾಂಗ್ರೆಸ್ ಪಕ್ಷದ ವಿರುದ್ಧ ಬೀದರನಲ್ಲಿ ವಾಗ್ದಾಳಿ ನಡೆಸಿದ ಚಕ್ರವರ್ತಿ ಸೂಲಿಬೆಲೆ, ಸಾವರ್ಕರ್ ಮೇಲೆ ಕಾಂಗ್ರೆಸ್ ನವರು ಈ ಮನೋಭಾವನೆ ಇಟ್ಟುಕೊಂಡಿದ್ದು ದುರದೃಷ್ಟಕರ ಸಂಗತಿ. ದೇಶದ ಸ್ವಾತಂತ್ರ್ಯಕ್ಕೋಸ್ಲರ  ತನ್ನ ಬಲಿದಾನವನ್ನೇ  ನೀಡಿದ್ದು ಸಾವರ್ಕರ್ ಎಂದರು.

ಇಡೀ ದೇಶದಾದ್ಯಂತ ಸ್ವಾತಂತ್ರ್ಯದ 75ನೇ ವರ್ಷದ  ಸಂಭ್ರಮ ಇದ್ದರೆ ಇವರು ದೇಶಕ್ಕೆ ಒಂದು ಕಪ್ಪು ಚುಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಹಿಂದಿನಿಂದಲೂ ಕಾಂಗ್ರೆಸ್ ಪಕ್ಷ ಕುತಂತ್ರದಿಂದ ಇಂಥ ಘಟನೆ ನಡೆಯುತ್ತಲಿವೆ. ಶಿವಮೊಗ್ಗ ಹಿಂಸಾಚಾರಕ್ಕೆ ಕಾಂಗ್ರೆಸ್ ಪಕ್ಷ ನೇರವಾಗಿ ಹೊಣೆ ಎಂದರಲ್ಲದೆ, ಕಾಂಗ್ರೆಸ್ ಪಕ್ಷದ ಮೊದಲಿನಿಂದ ಬಿತ್ತುತ್ತ ಬಂದಿದ್ದ ವಿಷ ಬೀಜದ ಕಾರಣ ಇವಾಗ ಹಿಂದೂ ಮುಸ್ಲಿಂ ಜಗಳ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾವರ್ಕರ್ ದೇಶಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದು ನನಗೆ ಗೊತ್ತು. ಸಾವರ್ಕರ್ ಒಬ್ಬರು ಹಿಂದೂ ಧರ್ಮದ ಚಿಂತಕರಾಗಿದ್ದೇ ಕಾಂಗ್ರೆಸ್ ನವರಿಗೆ ಸಹಿಸಲು ಆಗುತ್ತಿಲ್ಲ ಎಂದು ಸೂಲಿಬೆಲೆ ಹೇಳಿದರು.

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!