ಮೂಡಲಗಿ: ಹಿಂದೂ ಸಮಾಜದ ಶ್ರದ್ದೆ, ಭಕ್ತಿ, ನಂಬಿಕೆಗಳ ಮೇಲೆ ರಾಜಕೀಯ ದಾಳಿಗಳು ಆದಾಗ ಅದನ್ನು ಎದುರಿಸಿ ತಕ್ಕ ಉತ್ತರ ನೀಡುವ ಎದೆಗಾರಿಕೆಯನ್ನು ಹಿಂದೂ ಸಮಾಜದ ಯುವಕರು ಬೆಳೆಸಿಕೊಳ್ಳಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಕರೆ ನೀಡಿದರು.
ರವಿವಾರ ಆ-28 ರಂದು ಅರಭಾವಿ ಮತಕ್ಷೇತ್ರದ ಬೀರನಗಡ್ಡಿ ಗ್ರಾಮದ ಸಿದ್ದಾರೂಢರ ಮೂರ್ತಿ ಪ್ರತಿಷ್ಠಾಪನೆ ಹಾಗೂ 2020-21ನೇ ಸಾಲಿನ ರಾಜ್ಯಸಭಾ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಸಾಂಸ್ಕೃತಿಕ ಭವನವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಗ್ರಾಮೀಣ ಪ್ರದೇಶದಲ್ಲಿ ಇಂತಹ ಎಲ್ಲಾ ಶ್ರದ್ದಾ ಭಕ್ತಿ ಕೇಂದ್ರಗಳನ್ನು ಜನ ಇವತ್ತಿಗೂ ಉಳಿಸಿಕೊಂಡು ಹೊರಟಿದ್ದಾರೆ ಆದರೆ ಕೆಲವರು ಅದರ ಮೇಲೆ ಅಪನಂಬಿಕೆ ಹುಟ್ಟಿಸುವಂಥ ಮತ್ತು ಇದು ಮೂಢನಂಬಿಕೆ ಅಂತ ಹೇಳುವಂತಹ ಪ್ರಯತ್ನಗಳು ಸಮಾಜದೊಳಗೆ ಇಲ್ಲಿಯ ಮುಖಂಡರೊಬ್ಬರಿಂದ ನಡೆದಿದೆ ಅದನ್ನು ಮೀರಿ ಸಮಾಜವನ್ನು ಮುಂದ್ಯೊಯ್ಯಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಗ್ರಾಮ ಪಂಚಾಯತ ಸದಸ್ಯರಾದ ಬಸಗೌಡ ಕೋಟಗಿ, ಸಿದ್ದಲಿಂಗ ಭರಮನ್ನವರ, ಸುನೀಲ ಈರೇಶನವರ, ಪ್ರಮುಖರಾದ ದುಂಡಪ್ಪ ತೆಳಗಡೆ, ಕಲ್ಲಪ್ಪ ಪಾಗಾದ, ಬಸವಣ್ಣಿ ತೆಳಗಡೆ, ರಮೇಶ ಸಂಪಗಾಂವ, ಬಸವಣ್ಣಿ ಸಂಪಗಾಂವ, ಬಸಲಿಂಗಯ್ಯ ಪೂಜೇರಿ, ಸತ್ತೆಪ್ಪ ಕಳಜ್ಜಕನ್ನವರ, ಬಸಪ್ಪ ಪಾಗಾದ, ಗೂಳಪ್ಪ ದೊಡ್ಡಕೆಂಚನವರ, ಯಲ್ಲಪ್ಪ ಕೊಟಗಿ, ಬಸವರಾಜ ಕಾಪಸಿ, ನಾಗೇಂದ್ರ ಕುದರಿ, ಬಸು ಭರಮಣ್ಣವರ, ಅಲ್ಲಯ್ಯ ಪೂಜೇರಿ, ಈರಪ್ಪ ಸಂಪಗಾಂವ, ಶಂಕರ ಮುದೇಪ್ಪಗೋಳ, ಶರಣೆ ಅಕ್ಕಮಹಾದೇವಿತಾಯಿ, ಮಹಾಂತೇಶ ಶಾಸ್ತ್ರಿಗಳು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.