spot_img
spot_img

ಹಿಂದಿನ ಮಹಾತ್ಮರನ್ನು ಅನುಸರಿಸುವವರೇ ಹಿಂದೂಗಳು

Must Read

spot_img
- Advertisement -

ಹಿಂದೂ ಧರ್ಮದ ರಕ್ಷಣೆಗೆ ನಾನೇನು ಮಾಡಬಹುದು? ಧರ್ಮದ ರಕ್ಷಣೆ ಮಾಡಿದರೆ ಧರ್ಮವೆ ನಮ್ಮನ್ನು ರಕ್ಷಣೆ ಮಾಡುತ್ತದೆನ್ನುವುದು ಎಲ್ಲಾ ಧರ್ಮಗಳೂ ತಿಳಿದರೂ ಕೆಲವು ಧರ್ಮದವರು ಒಂದು ಧರ್ಮ ತುಳಿದು ತಮ್ಮ ಧರ್ಮ ಉಳಿಸಲು ಹೋಗಿ ಇನ್ನಷ್ಟು ಕ್ರಾಂತಿಗೆ ದಾರಿಮಾಡಿಕೊಟ್ಟಿರುತ್ತಾರೆ.

ಹಿಂದೂ ಧರ್ಮವೆನ್ನುವುದು ಹಿಂದಿನ ಯುಗದಲ್ಲಿತ್ತೆ? ಇರಲಿಲ್ಲ ಎಂದರೆ ಅಂದಿನ ಧರ್ಮ ಯಾವ ರೀತಿ, ಹೆಸರಿನಲ್ಲಿತ್ತು? ಇರುವ ನಾಲ್ಕು ವರ್ಣದ ಪ್ರಕಾರ ಬ್ರಾಹ್ಮಣ ಧರ್ಮ, ಕ್ಷತ್ರಿಯ ಧರ್ಮ, ವೈಶ್ಯ ಧರ್ಮ, ಮತ್ತು ಶೂದ್ರ ಧರ್ಮ. ಮೇಲಿರುವ ಆ ಪರಮಾತ್ಮನ ಅಂಗಾಂಗಗಳಿಗೆ ಹೋಲಿಸಿ ತಲೆ, ಭುಜ, ಹೊಟ್ಟೆ, ಕಾಲುಗಳು ಸದ್ಬಾವನೆಯಿಂದ ಪರಮಾತ್ಮನ ಕೆಲಸವೆಂದರಿತು ಕರ್ಮವನ್ನು ಧರ್ಮದ ಪ್ರಕಾರ ನಡೆಸಿದ್ದರು.

ಈಗ ಪರಮಾತ್ಮನಿಗೊಂದು ಸ್ಥಾನ ಕೊಡುವಷ್ಟು ಮನಸ್ಸಿಲ್ಲದವರು ಹಣದ ಹಿಂದಿನ ಋಣ ಅಥವಾ ಸಾಲ ತೀರಿಸಲು ಭ್ರಷ್ಟಾಚಾರಕ್ಕೆ ಸಹಕಾರ ನೀಡಿ ಧರ್ಮ ರಕ್ಷಣೆ ಮಾಡಲು ಹೋದರೆ ಅದು ಅಸುರಿ ಶಕ್ತಿಗೆ ನಮ್ಮ ಸಹಕಾರ ನೀಡಿದಂತಾಗುತ್ತದೆ. ಇಲ್ಲಿ ಸುರ ಅಸುರರ ಶಕ್ತಿ ಮಾನವನೊಳಗಿರುವಾಗ ಧರ್ಮದ ಉದ್ದೇಶ ಸಾತ್ವಿಕವಾಗಿದ್ದರೆ ಉತ್ತಮ. ರಾಜಸ ಹಾಗು ತಾಮಸಿಕತೆ ಬೆಳೆದರೆ ಅಧಮ. ಒಟ್ಟಿನಲ್ಲಿ ನಮ್ಮನಮ್ಮ ಹಿಂದಿನ ಗುರು ಹಿರಿಯರು ನಡೆದ ಸಾತ್ವಿಕ, ಸ್ವಾವಲಂಬನೆ ಸತ್ಯ, ನೀತಿ, ರೀತಿ, ಸಂಸ್ಕೃತಿ ನಮಗೆ ಅಡಿಪಾಯವಾಗಿತ್ತು.

- Advertisement -

ಅದನ್ನು ಬಿಟ್ಟು ಹೊರಗಿನ ಶಾಸ್ತ್ರ, ಪುರಾಣ, ಇತಿಹಾಸ ದೊಳಗಿರುವ ರಾಜಕೀಯಕ್ಕೆ ಜೋತುಬಿದ್ದು ಮೂಲದ ಧರ್ಮ ಕರ್ಮ ಕಸುಬು ಮರೆತರೆ ಅಡಿಪಾಯ ಸರಿಯಿಲ್ಲದೆ ಆತ್ಮಶಕ್ತಿ ಕುಗ್ಗುತ್ತದೆ.ಹಣವೇನೂ ಸಿಕ್ಕರೂ ಅದರ ಮೂಲವೆ ಭ್ರಷ್ಟಾಚಾರ, ಅಧರ್ಮ,ಅನ್ಯಾಯ ಅಸತ್ಯದಲ್ಲಿದ್ದರೆ ಧರ್ಮ ವಾಗೋದಿಲ್ಲ. ಇಷ್ಟು ಆಳವಾಗಿ ಯೋಚಿಸಲಾಗದ ಸ್ಥಿತಿಯಲ್ಲಿದ್ದೇವೆ.

ಪ್ರಜಾಪ್ರಭುತ್ವದ ಪ್ರಜೆಗಳಾಗಿದ್ದು ನಮ್ಮ ರಾಷ್ಟ್ರೀಯ ಧರ್ಮವನ್ನು ನಮ್ಮ ಜ್ಞಾನದಿಂದ ತಿಳಿದು ರಕ್ಷಣೆ ಮಾಡೋದು ಮುಖ್ಯ. ಹಿಂದಿನ ಕಾಲದಲ್ಲಿದ್ದ ಹಿಂದೂಗಳ ಸಂಖ್ಯೆ ಇಂದಿಲ್ಲ. ಕಾರಣವಿಷ್ಟೆ ನಾವು ಹಿಂದುಳಿದವರನ್ನು ಬೆಳೆಸಲು ಮುಂದುವರಿದವರಿಗೆ ಸಹಾಯ ಮಾಡಿರೋದು. ಅದೂ ಕೂಡ ಹಣ, ಅಧಿಕಾರ, ಸ್ಥಾನದ ಆಸೆ ನಮ್ಮನ್ನು ನಮ್ಮ ಮೂಲ ಧರ್ಮದ, ಶಿಕ್ಷಣದ ಬಗ್ಗೆ ತಿಳಿದುಕೊಳ್ಳಲಾಗದೆ ನಮ್ಮವರನ್ನೇ ದ್ವೇಷ, ಅಸೂಯೆ ಸ್ವಾರ್ಥ ದಿಂದ ಹಿಂದುಳಿಸಿರೋದೆಂದರೆ ಸರಿಯಲ್ಲವೆ? ಎಲ್ಲಿದೆ ಸತ್ಯ? ಎಲ್ಲಿದೆ ಧರ್ಮ? ನ್ಯಾಯ, ನೀತಿ, ಶಿಕ್ಷಣವೆ ಹಣದಿಂದ ಮಾರಾಟವಾಗಿ ಜ್ಞಾನ ಹಿಂದುಳಿದಿದೆ.

ಜ್ಞಾನಕ್ಕೆ ಹಿಂದುಳಿದವರು ಮುನ್ನೆಡೆದವರೆನ್ನುವ ಹಣೆಪಟ್ಟಿ ಹುಟ್ಟುವಾಗಲೆ ಕಟ್ಟಿಕೊಂಡಿರುವ ನಮ್ಮೊಳಗೇ ಅಡಗಿದ್ದ ಕೆಲವು ರಾಜಕೀಯಕ್ಕೆ ನಾವೇ ಬಲಿಪಶುವಾಗಿ ಈಗಲೂ ರಾಜಕೀಯದಿಂದ ನನಗೇನು ಸಿಗುವುದೆನ್ನುವ ಬಗ್ಗೆ ಚರ್ಚೆ/ ನಡೆಸಿದರೆ ಚರ್ಚೆ ಗೆ ಅಂತ್ಯವಿಲ್ಲ. ಆದರೆ ಜೀವಕ್ಕೆ ಅಂತ್ಯವಿದೆ. ಆಧ್ಯಾತ್ಮ ಎಂದರೆ ನಿನ್ನ ನೀ ತಿಳಿದು ನಡೆ ಎಂದಾಗಿತ್ತು. ನಾವೀಗ ಪರರನ್ನು ತಿಳಿದು ನಮ್ಮನ್ನು ನಾವೇ ಮರೆತಿದ್ದೇವೆ. ಇದು ಶಿಕ್ಷಣದಿಂದ ನಡೆದಿರುವಾಗ ಬದಲಾವಣೆಯಾಗಬೇಕಾಗಿರೋದು ಶಿಕ್ಷಣವಷ್ಟೆ.

- Advertisement -

ಇದನ್ನು ಸರ್ಕಾರ ಮಾಡುತ್ತದೆ ಎಂದು ನಮ್ಮ ಮಕ್ಕಳಿಗೆ ನಮ್ಮ ಮೂಲ ಧರ್ಮ ಸಂಸ್ಕೃತಿ ತಿಳಿಸದೆ ಹೊರಗಿನ ವಿಷಯದ ಪುಸ್ತಕವನ್ನು ತಲೆಗೆ ತುಂಬುತ್ತಿದ್ದರೆ ಹಿಂದೂ ಹಿಂದುಳಿಯುವುದು ತಡೆಯಲಾಗದು.ಈಗಾಗಲೇ ಎಷ್ಟೋ ಧಾರ್ಮಿಕ, ಖಾಸಗಿ ಕ್ಷೇತ್ರ ನಡೆಸುತ್ತಿರುವ ಶಾಲೆ ಕಾಲೇಜುಗಳಲ್ಲಿ ಭಾರತೀಯ ಶಿಕ್ಷಣ ನೀಡುತ್ತಿದ್ದಾರೆ. ಅಲ್ಲಿ ಜಾತಿ ಬಿಟ್ಟು ಜ್ಞಾನವನ್ನು ಎತ್ತಿಹಿಡಿಯುವ‌ ಕೆಲಸವಾದರೆ ದೇಶದ ಪ್ರಜೆಗಳ ಜ್ಞಾನ ಹೆಚ್ಚುತ್ತದೆ.

ಸತ್ಯಜ್ಞಾನಕ್ಕೆ ಬದಲಾಗಿ ಮೊದಲೇ‌ಮಿಥ್ಯಜ್ಞಾನ ಮಕ್ಕಳ ತಲೆಗೆ ತುಂಬಿ ಪೋಷಕರೆ ಅಜ್ಞಾನಿಗಳಂತಿದ್ದರೆ ಇದಕ್ಕೆ ಪರಿಹಾರವಿಲ್ಲ. ನಮ್ಮೊಳಗೆ ಇರುವ ಧರ್ಮದ ಅರಿವಿಗೆ ಹೊರಗಿನ ಶಿಕ್ಷಣ ಸಹಕರಿಸಿದಾಗಲೆ ಉತ್ತಮ ಜ್ಞಾನಾಭಿವೃದ್ದಿ. ಇದಕ್ಕೆ ವಿರುದ್ದ ನಿಂತು ದೇಶದ ನೆಲ, ಜಲ ಬೇಕು ಧರ್ಮ ಬೇಡ ಎಂದರೆ ದೇಶದ್ರೋಹಕ್ಕೆ ತಕ್ಕಂತೆ ಪ್ರತಿಫಲವಿದೆ. ಹಿಂದೂ ಎಂದರೆ ಹಿಂದುಳಿದವರಲ್ಲ. ಹಿಂದಿನ ಮಹಾತ್ಮರನ್ನು ಅನುಸರಿಸುವವರೆ ಹಿಂದೂಗಳು.

ಯುಗಯುಗದ ಪ್ರಭಾವದಲ್ಲಿ ಅಜ್ಞಾನದ ರಾಜಕೀಯಕ್ಕೆ ಕೊಡುವ ಮಾನ, ಮರ್ಯಾದೆ ಇಂದಿಗೂ ರಾಜಯೋಗದ ಅರ್ಥ ತಿಳಿಯದಿರೋದಕ್ಕೆ ಕಾರಣವೆನ್ನಬಹುದು. ವಿವೇಕಾನಂದರ ರಾಜಯೋಗ ರಾಜಕೀಯವಾಗಿರಲಿಲ್ಲ ಅವರು ಯಾರನ್ನೋ ಆಳೋದಕ್ಕೆ ಹೋಗದೆ ಅವರಲ್ಲಿದ್ದ ಅದ್ಬುತ ಜ್ಞಾನವನ್ನು ಹಂಚಿದ್ದರು. ಹೀಗಾಗಿ ಅವರಿನ್ನೂ ಅಮರರಾಗಿದ್ದಾರೆ. ಭೂಮಿಗೆ ಬೇಕಿರುವುದು ಜ್ಞಾನಿಗಳು ಅಜ್ಞಾನಿಗಳಿಂದ ಭೂ ಭಾರ ಹೆಚ್ಚುತ್ತದೆ.

ದೇಶಕ್ಕೂ ಇವರು ದೊಡ್ಡ ಹೊರೆಯಾಗಿರುತ್ತಾರೆ. ಇದಕ್ಕಾಗಿ ಹಿಂದೂ ದೇಶದ ಪರವಾಗಿ ನಿಲ್ಲುವವರು ದೇಶದೊಳಗಿದ್ದು ತಮ್ಮ ಧರ್ಮ ರಕ್ಷಣೆಗೆ ಮುಂದಾಗಬೇಕಿದೆ. ಇದಕ್ಕೆ ಮನೆಯಿಂದ ಹೊರ ಬಂದು ಹೋರಾಟಮಾಡೋ ಮೊದಲು ನಮ್ಮಲ್ಲಿರುವ ಹಿಂದೂ ಧರ್ಮದ ಬಗ್ಗೆ ನಾವು ಅರ್ಥ ಮಾಡಿಕೊಂಡು ಮಕ್ಕಳು ಮಹಿಳೆಯರನ್ನು ಅದೇ ಮಾರ್ಗದಲ್ಲಿ ನಡೆಯಲು ಸಹಕರಿಸುವುದು ಅಗತ್ಯವಿದೆ. ನಾನು ಬದಲಾಗದೆ ಪರರನ್ನು ಬದಲಾಯಿಸುವ ಭಾಷಣ ನೀಡಿ ನಾನೇ ಹಿಂದು ಎನ್ನುವ ಅಹಂಕಾರದ ಮಾತನಾಡಿದರೆ ನಮ್ಮಲ್ಲಿ ಸತ್ಯವಿರೋದಿಲ್ಲ.

ಸತ್ಯದ ಜೊತೆಗೆ ಧರ್ಮವೂ ಇರುತ್ತದೆ. ಇದನ್ನು ಅದ್ವೈತ ಎನ್ನಬಹುದು. ಒಂಟಿ ಕಾಲಲ್ಲಿ ಎಷ್ಟು ದಿನ ನಡೆಯಬಹುದು? ಒಂಟಿ ಕಣ್ಣಿನಿಂದ ಎಷ್ಟು ಸತ್ಯ ನೋಡಬಹುದು? ಒಂಟಿಯಾಗಿ ಸಮಾಜ ಸುಧಾರಣೆ, ಧರ್ಮ ರಕ್ಷಣೆ ಯಾರಾದರೂ ಮಾಡಿದ್ದಾರೆಯೆ? ಒಗ್ಗಟ್ಟು ಎಲ್ಲಿರುವುದೋ ಅಲ್ಲಿ ಜಯ ಇರುತ್ತದೆ.

ಇದನ್ನು ಪರಕೀಯರು ಚೆನ್ನಾಗಿ ಅರ್ಥ ಮಾಡಿಕೊಂಡು ನಮ್ಮಲ್ಲಿ ಬಿಕ್ಕಟ್ಟು ತಂದಿಟ್ಟು ಆಳಿದ್ದಾರೆ ಈಗಲೂ ಅದೇ ಪರಿಸ್ಥಿತಿಗೆ ಭಾರತ ಬರುತ್ತಿದೆ. ಅಂದು ಬ್ರಿಟಿಷ್‌ ಸರ್ಕಾರ ವನ್ನು ರಾಜರುಗಳೆ ಆಹ್ವಾನ ನೀಡಿ ವ್ಯವಹಾರಕ್ಕೆ ಕೈ ಜೋಡಿಸಿದ ಹಾಗೆಯೇ ಇಂದು ರಾಜಕಾರಣಿಗಳೆ ವಿದೇಶಿಗಳಿಗೆ ಅತಿಥಿ ಸತ್ಕಾರ ಮಾಡಿ ಜನರಿಗೆ ವಿದೇಶಿ ಕಂಪನಿಗಳಲ್ಲಿ ದುಡಿದು ಬದುಕಲು ಉದ್ಯೋಗ ಸೃಷ್ಟಿ ಮಾಡಿದರೆ, ನಮ್ಮ ನೆಲ ಜಲದ ಶುದ್ದತೆಗೆ ಬೇಕಾದ ಜ್ಞಾನವೆಲ್ಲಿರುತ್ತದೆ? ಜ್ಞಾನವಿಜ್ಞಾನದ ಅಂತರದಲ್ಲಿ ರಾಜಕೀಯತೆಯ ಅಜ್ಞಾನವಿದೆ.

ಗಮನಿಸಿ ನಾವೆಲ್ಲರೂ ಎಲ್ಲಿಗೆ ಹೋಗುತ್ತಿದ್ದೇವೆ? ಯಾರ ಹಿಂದೆ ನಿಂತು ಬೇಡುತ್ತಿದ್ದೇವೆ? ಯಾರ ಸಾಲದಲ್ಲಿ ದೇಶವಿದೆ? ನಾಟಕವಾಡಿ ಜನರನ್ನು ಮೋಸಗೊಳಿಸುವ ತಂತ್ರದಲ್ಲಿ ಗೆದ್ದವರು ಯಾರು? ಸೋತವರು ಯಾರು? ಇವರ ಮಧ್ಯೆ ನಿಂತು ತಮ್ಮ ಸ್ವಾರ್ಥ ದ ಬೇಳೆ ಬೇಯಿಸಿಕೊಂಡವರೆಷ್ಟು ಮಂದಿ? ಪರಮಾತ್ಮನ ಕಾಣೋ ದಾರಿ ತೋರಿಸಿದ ಹಿಂದೂಧರ್ಮ ಇಂದು ಪರಕೀಯರ ಹಿಂದೆ ನಡೆಯುವಂತೆ ಮಾಡಿರೋದಕ್ಕೆ ಕಾರಣವೆ ವಿದೇಶಿ ಜ್ಞಾನದ, ವೈಜ್ಞಾನಿಕ ಚಿಂತನೆಯ, ಅರ್ಧಸತ್ಯದ, ರಾಜಕೀಯ ಪ್ರೇರಿತ ವಿಚಾರಗಳುಳ್ಳ ಮೂಲ ಶಿಕ್ಷಣ.

ಒಳಗೆಳೆದುಕೊಂಡ ಹೊರಗಿನ ವಿಚಾರದಿಂದ ಒಳಗಿದ್ದ ವಿಚಾರವೇ ಹಿಂದುಳಿದಾಗಲೆ ಹಿಂದೂ ಹಿಂದುಳಿದವರಾಗಿ ಕಾಣುವುದು. ಗುರು ಹಿರಿಯರು, ಶಿಕ್ಷಕರು ದೇಶದ ತಲೆಗಳಾಗಿದ್ದರೂ ಕಾಲುಗಳಿಗೆ ಸರಿಯಾದ ದಾರಿ ತೋರಿಸುವ ಶಿಕ್ಷಣ ನೀಡದಿದ್ದರೆ ಅಡ್ಡದಾರಿಯಲ್ಲಿ ನುಸುಳುಕೋರರು ಸೇರಿ ದಾರಿತಪ್ಪಿಸಿ ಆಳುತ್ತಾರಲ್ಲವೆ? ಪ್ರಜಾಪ್ರಭುತ್ವದ ಪ್ರಜೆಗೆ ಸಿಗಬೇಕಾಗಿದ್ದ ಮೂಲದ ಜ್ಞಾನ ಸಿಗದೆ ಮೇಲಿನ ವಿಜ್ಞಾನ ಕೊಟ್ಟರೆ ಮೇಲೆ ನೋಡುತ್ತಾ ಎಡವಿ ಬೀಳೋರು ಹೆಚ್ಚು. ಇದು ಕೇವಲ ಹಿಂದೂ ಧರ್ಮದ ಕಥೆಯಲ್ಲ. ಎಲ್ಲರ ಕಥೆ.

ನಮ್ಮ ನಮ್ಮ ಧರ್ಮದ ಪ್ರಕಾರ ಯಾರಿಗೂ ತೊಂದರೆ ಕೊಡದೆ ಒಗ್ಗಟ್ಟಿನಿಂದ ಬಾಳಿ ಬದುಕುವುದಕ್ಕೆ ಭೂಮಿ ಇದೆ. ಅದನ್ನು ಆಳೋ ರಾಜಕೀಯದಲ್ಲಿ ಅಜ್ಞಾನ ಬೆಳೆದು ತಾನೂ ಹಾಳಾಗಿ ಪರರನ್ನು ದಾರಿತಪ್ಪಿಸುವುದು ತಮಗೆ ತಾವೇ ಮಾಡಿಕೊಳ್ಳುವ ಮೋಸವೆನ್ನುವುದು ಸತ್ಯ. ಮೋಸಕ್ಕೆ ತಕ್ಕಂತೆ ದೋಷವಿದೆ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group