ಯಾದವಾಡ ಗ್ರಾಮಕ್ಕೆ ಹೋಬಳಿ ಕೇಂದ್ರ ಮಂಜೂರಾತಿಗೆ ಒತ್ತಾಯ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಮೂಡಲಗಿ– ಅರಭಾಂವಿಯಲ್ಲಿಯ ಹೋಬಳಿ ಕೇಂದ್ರಕ್ಕೆ ಹೋಗಿ ಬರಲು ಯಾದವಾಡದಿಂದ 55 ಕಿ ಮೀ ಕ್ರಮಿಸಬೇಕು ಹೋಬಳಿ ಕೇಂದ್ರದಿಂದ ತಾಲೂಕಾ ಕೇಂದ್ರವಾದ ಮೂಡಲಗಿಗೆ ಹೋಗಿ ಬರಲು ಮತ್ತೆ 25 ಕಿ.ಮಿ ರಸ್ತೆಯಲ್ಲಿ ಸಾಗಬೇಕು ಇದರಿಂದ ಯಾದವಾಡದ ಜನತೆ ಒಂದು ಕಾಗದ ಪತ್ರದ ಸಲುವಾಗಿ ಇಡಿ ದಿನವನ್ನು ರಸ್ತೆಯಲ್ಲಿಯೇ ಕಳೆಯುವಂತಾಗುತ್ತದೆ ಆದರಿಂದ ಯಾದವಾಡದಲ್ಲಿಯೇ ಹೋಬಳಿ ಕೇಂದ್ರ ಸ್ಥಾಪಿಸಿ ಯಾದವಾಡದ ಸುತ್ತ ಮುತ್ತಲಿನ ಗ್ರಾಮದ ಜನತೆಯ ಕಷ್ಟವನ್ನು ಕಡಿಮೆ ಮಾಡಬೇಕು ಎಂದು ಯಾದವಾಡ ಗ್ರಾ.ಪಂ ಸದಸ್ಯ ಕಲ್ಮೇಶ ಗಾಣಗೇರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಅ. 1ರ ಶುಕ್ರವಾರ ನಡೆದ ಗ್ರಾಮದ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, 2014 – 15 ನೇ ಸಾಲಿನಲ್ಲಿ 31 ಗ್ರಾಮ ಪಂಚಾಯತ ಸದಸ್ಯರನ್ನು ಹೊಂದಿದ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೆ ಏರಿಸಿ ಪಟ್ಟಣ ಪಂಚಾಯತ ಮಾಡಬೇಕಾಗಿತ್ತು ಪಂಚಾಯತಿಯನ್ನು ವಿಂಗಡಣೆ ಮಾಡಿದ್ದರಿಂದ ನಮ್ಮ ಗ್ರಾಮಕ್ಕೆ ಅನ್ಯಾಯವಾಗಿದೆ. ಹೋಬಳಿ ಸ್ಥಾಪನೆಗೆ ಹಲವಾರು ಬಾರಿ ಮನವಿ ಮಾಡಲಾಗಿದೆ, ಸರ್ಕಾರ ಕೂಡಲೆ ಗ್ರಾಮಕ್ಕೆ ಹೋಬಳಿ ಕೇಂದ್ರವನ್ನು ಸ್ಥಾಪಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದ ಅವರು,ಗ್ರಾ.ಪಂ.ಸದಸ್ಯ ವಾಯ್.ಎಲ್.ನ್ಯಾಮಗೌಡರ ಮಾತನಾಡಿ ಈಗಾಗಲೆ ಇದರ ಬಗ್ಗೆ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ ಮತ್ತು ಮುಂದಿನ ದಿನಮಾನಗಳಲ್ಲಿ ಈ ಹೋರಾಟದ ಬಗ್ಗೆ ಗ್ರಾಮದ ಚುನಾಯಿತ ಪ್ರತಿನಿಧಿಗಳನ್ನು ಮತ್ತು ಮುಖಂಡರನ್ನು ಗ್ರ್ರಾಮದ ಎಲ್ಲ ಹಿರಿಯರನ್ನು ಕರೆದುಕೊಂಡು ಒಂದು ದಿನ ಸಭೆ ಕರೆದು ತೀರ್ಮಾನಿಸಲು ಹೇಳಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಜಯಶ್ರೀ ಕು.ದಾಸರ, ಉಪಾಧ್ಯಕ್ಷೆ ಪುಷ್ಪಾ ರಾ.ಪಾಟೀಲ ಸದಸ್ಯರಾದ ಮೌನೇಶ ಪತ್ತಾರ , ಸದಾಶಿವ ಮಾಕಾಳಿ, ಸಾಬಣ್ಣಾ ಪೂಜೇರಿ, ಸುರೇಶ ಸಾವಳಗಿ,ಮೀನಾಕ್ಷಿ ತೋಟಗಿ, ಬಾಗವ್ವಾ ಮಾಳೇದ ಹನಮಂತ ಚಕ್ಕೆನ್ನವರ, ಸತೀಶ ತೊಂಡಿಕಟ್ಟಿ ಸರ್ವ ಸದಸ್ಯರು ಈ ವಿಷಯಕ್ಕೆ ಸಹಮತಿ ನೀಡಲು ಉಪಸ್ಥಿತರಿದ್ದರು ಮತ್ತು ಗ್ರಾಮ ಪಂಚಾಯತ ಆಡಳಿತ ಮಂಡಳಿ ಅವರು ಕೂಡ ಉಪಸ್ಥಿತರಿದ್ದರು.


- Advertisement -

21 ಸಾವಿರ ಎಕರೆ ಹೊಂದಿದ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕಂದಾಯದ ಗ್ರಾಮ ಯಾದವಾಡ,ಒಂದು ಕಾಲದಲ್ಲಿ ಈ ಗ್ರಾಮವು ಮೂರು ತಲಾಟಿಗಳನ್ನು ಹೊಂದಿತ್ತು, ಕೈಗಾರಿಕಾ ಪ್ರದೇಶವಾಗಿದೆ, ಹಲವಾರು ಉದ್ಯಮಗಳು ಈ ಗ್ರಾಮದಲ್ಲಿವೆ, ಮೂಡಲಗಿ ತಾಲೂಕಿನಲ್ಲಿಯೇ ಅತಿ ಹೆಚ್ಚು ವಿಸ್ತೀರ್ಣದ ಗ್ರಾಮವಾಗಿದೆ ಸುಮಾರು 5 ಕಿಮೀ ವಿಸ್ತಾರ ವ್ಯಾಪಾರ ಕೇಂದ್ರವಾಗಿದೆ ಮತ್ತು ಗ್ರಾಮದಿಂದ ಹೋಬಳಿ ಕೇಂದ್ರಕ್ಕೆ ಹೋಗಿ ಬರಲು ಮುಖ್ಯವಾಗಿ ರಸ್ತೆಯ ತೊಂದರೆ ಬಹಳ ಇದೆ ಪಕ್ಕದ ತಾಲೂಕಾ ಕೇಂದ್ರವಾದ ಮುಧೋಳಕ್ಕೂ ಮೂಡಲಗಿಗೂ ಹೋಗಿ ಬರಲು ಸಹ ರಸ್ತೆ ಸಂಚಾರದ ಮೂಲ ಕೊರತೆ ಈ ಗ್ರಾಮದ ಜನತೆಗೆ ಇದೆ, ಈ ಗ್ರಾಮದ ಜನತೆಯ ಆಶಯದಂತೆ ಹೊಬಳಿ ಕೇಂದ್ರದ ಸ್ಥಾಪನೆ ಅವಶ್ಯವಾಗಿದೆ ಎಂದರು.

-ಈಶ್ವರ ಕತ್ತಿ


ಮೂಡಲಗಿಯಿಂದ ಯಾದವಾಡಗೆ ನಿತ್ಯ ಸಂಚರಿಸುವ ಸಾರಿಗೆಯ ಬಸ್ಸು ಕೋವಿಡ ಸಮಯದಲ್ಲಿ ಬಂದ ಆಗಿದ್ದು ಪುನಃ ಪ್ರಾರಂಬಿಸಬೇಕು ಎಂದು ಸಾರಿಗೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ,ಶೀಘ್ರವಾಗಿ ಹೊಬಳಿ ಕೇಂದ್ರ ಸರ್ಕಾರ ಸ್ಥಾಪಿಸಿ ಗ್ರಾಮಸ್ಥರ ಮುಂದಿನ ದಿನಗಳಲ್ಲಿ ನಡೆಯುವ ಹೋರಾಟವನ್ನು ತಪ್ಪಿಸಬೇಕು

-ಕಲ್ಮೇಶ ಗಾಣಿಗೇರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!