spot_img
spot_img

ಮನೆ ಮನೆಗೆ ಧ್ವಜಾರೋಹಣ ಮಾಡಿ; ಅದಕ್ಕೂ ಮುಂಚೆ ಈ ನಿಯಮಗಳನ್ನು ತಿಳಿಯಿರಿ

Must Read

spot_img

ರಾಷ್ಟ್ರಧ್ವಜ ದ ಗೌರವ ಕಾಪಾಡಿ

ಮೂಡಲಗಿ – ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿಯೊಬ್ಬರೂ ತಂತಮ್ಮ ಮನೆಗಳ ಮೇಲೆ ತಿರಂಗಾ ಹಾರಿಸಬೇಕು. ಇದು ಪ್ರತಿಯೊಬ್ಬ ದೇಶಭಕ್ತರ ಕರ್ತವ್ಯ.

ಧ್ವಜವನ್ನು ದಿ. ೧೩ ರಂದು ಬೆಳಿಗ್ಗೆ ಎಂಟು ಗಂಟೆಗೆ ಮನೆಯ ಮೇಲೆ, ಸಂಘ ಸಂಸ್ಥೆಗಳ ಮೇಲೆ, ವಾಣಿಜ್ಯಿಕ ಕಟ್ಟಡದ ಮೇಲೆ ಎಲ್ಲೆಂದರಲ್ಲಿ ಎತ್ತರದ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ ನಮ್ಮ ದೇಶಾಭಿಮಾನವನ್ನು ಪ್ರದರ್ಶಿಸೋಣ. ಅದಕ್ಕಿಂತ ಮೊದಲು ಧ್ವಜ ಹಾರಿಸುವ ನಾವು ಕೆಲವು ನಿಯಮಗಳನ್ನು ತಿಳಿಯಬೇಕು.

ಸರ್ಕಾರದ ಪ್ರಧಾನ ಕಾರ್ಯದರ್ಶಿ,ಕಂದಾಯ ಇಲಾಖೆ ಹಾಗೂ ಸರ್ಕಾರದ ಕಾರ್ಯದರ್ಶಿ, ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇವರುಗಳ ಸುತ್ತೋಲೆಗಳ ಅನುಸಾರ ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಪ್ರಕಟಣೆಯೊಂದನ್ನು ಹೊರಡಿಸಿದ್ದು ಅದರಲ್ಲಿ ಧ್ವಜಾರೋಹಣ ಹೇಗೆ ಮಾಡಬೇಕು, ನಂತರ ಹೇಗೆ ಕಾಪಾಡಬೇಕು ಎಂಬ ಬಗ್ಗೆ ನಿದರ್ಶನಗಳನ್ನು ನೀಡಿದ್ದಾರೆ.

ಅವು ಈ ಕೆಳಗಿನಂತಿವೆ:

  1. ಆ.೧೩ ರಿಂದ ೧೫ ರವರೆಗೆ ಎಲ್ಲರೂ ತಂತಮ್ಮ ಮನೆಗಳ ಮೇಲೆ ಕುಟುಂಬ ಸಹಿತ ಪ್ರಾರ್ಥನೆಯೊಂದಿಗೆ ಧ್ವಜ ಹಾರಿಸಬೇಕು
  2. ರಾಷ್ಟ್ರಧ್ವಜವೇ ಶ್ರೇಷ್ಠ ಅದಕ್ಕಿಂತ ಎತ್ತರದಲ್ಲಿ ಯಾವುದೇ ಧ್ವಜ ಇರಬಾರದು.
  3. ಸರ್ಕಾರಿ ಕಚೇರಿಗಳಲ್ಲಿ ದಿ.೧೩ ರಿಂದ ೧೫ ರವರೆಗೆ ಧ್ವಜಾರೋಹಣ ಹಾಗೂ ಅವರೋಹಣ ನಿಯಮಾನುಸಾರ ನೆರವೇರಿಸಬೇಕು
  4. ರಾಷ್ಟ್ರಧ್ವಜ ನೆಲ ಮುಟ್ಟುವಂತೆ ಇರಬಾರದು ಹಾಗೂ ಅದಕ್ಕೆ ನೀರು ತಗುಲಬಾರದು
  5. ರಾಷ್ಟ್ರಧ್ವಜ ವನ್ನು ಮೇಜು ಮಚ್ಚಲು ಅಥವಾ ಯಾವುದೇ ಅಲಂಕಾರಕ್ಕೆ ಬಳಸಬಾರದು
  6. ದಿ.೧೩ ರಂದು ಧ್ವಜ ಹಾರಿಸಿದರೆ ದಿ. ೧೫ ರ ಸಾಯಂಕಾಲದವರೆಗೂ ಯಾವುದೇ ಮಳೆ, ಗಾಳಿ ಬಿಸಿಲಿದ್ದರೂ ತೆಗೆಯಬಾರದು.
  7. ಧ್ವಜ ಯಾವುದೇ ಕಾರಣಕ್ಕೂ ಕೆಳಕ್ಕೆ ಬೀಳದಂತೆ ನೋಡಿಕೊಳ್ಳಬೇಕು.
  8. ಹರಿದು ಹೋಗಿರುವ, ಸರಿಯಾದ ಅಳತೆಯಿಲ್ಲದ ಧ್ವಜಗಳನ್ನು ಹಾರಿಸಬಾರದು
  9. ಯಾವುದೇ ವಾಹನಗಳ ಮೇಲೆ ಧ್ವಜ ಪ್ರದರ್ಶಿಸಬಾರದು
  10. ಅಭಿಯಾನದ ಅವಧಿ ಮುಗಿದ ನಂತರ ರಾಷ್ಟ್ರಧ್ವಜ ಕ್ಕೆ ಅಗೌರವವಾಗದಂತೆ ಸಂರಕ್ಷಿಸಿ ಇಡಬೇಕು.

ಸಕಲರೂ ಈ ನಿಯಮಗಳನ್ನು ಪಾಲಿಸಿ ಅಮೃತ ಮಹೋತ್ಸವದ ಮಹತ್ವದ ಘಟ್ಟದಲ್ಲಿ ಇರುವ ನಮ್ಮ ಸ್ವಾತಂತ್ರ್ಯದ ಮಹತ್ವವನ್ನು ಕಾಪಾಡಬೇಕಾಗಿದೆ.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!