spot_img
spot_img

ಜಿಲ್ಲಾ ಕಸಾಪ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಧ್ವಜಾರೋಹಣ

Must Read

ಬೆಳಗಾವಿ – ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ನಿಮಿತ್ತ ‘ಹರ್ ಘರ್ ತಿರಂಗ ‘ಅಭಿಯಾನ ಅಂಗವಾಗಿ ದಿ.13/08/2022 ರಂದು ನೆಹರು ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಗಲಾ ಮೆಟಗುಡ್ ರವರು ಧ್ವಜಾರೋಹಣ ಮಾಡಿ ಕೆ ಎಲ್. ಈ.ಮಾರ್ಗವಾಗಿ ಕೃಷ್ಣದೇವರಾಯ ವೃತ್ತದಿಂದ ಮರಾಠಾ ಮಂಡಳ ಪಾಲಿಟೆಕ್ನಿಕ್ ಮಾರ್ಗವಾಗಿ ಎಲ್ಲ ಸದಸ್ಯರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಬೃಹತ್ ಮೆರವಣಿಗೆಯೊಂದಿಗೆ ಕನ್ನಡ ಭವನಕ್ಕೆಬಂದರು.

ನಂತರ ಮಾತನಾಡಿದ ಮಂಗಲಾ ಮೆಟಗುಡ್ ರವರು, 75ನೇ ವರ್ಷದ ಅಮೃತಗಳಿಗೆಯನ್ನು ವಿಶೇಷವಾಗಿ ಆಚರಿಸುವುದರ ಮೂಲಕ ರಾಷ್ಟ್ರಭಕ್ತಿಯನ್ನು ತೋರಿಸುವುದರೊಂದಿಗೆ ದೇಶದ ಐಕ್ಯತೆ ಸಮಗ್ರತೆ ಯನ್ನು ಇಡಿ ವಿಶ್ವಕ್ಕೆ ಸಾರಿ ಹೇಳಬೇಕಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲಾ ಭಾರತೀಯರು ನಮ್ಮ ಹೆಮ್ಮೆಯ ರಾಷ್ಟ್ರಧ್ವಜವನ್ನು ಮನೆಮನೆಯಲ್ಲಿ ಹಾರಿಸುವುದರ ಮೂಲಕ ಈ ಅಭಿಯಾನವನ್ನು ಸಾಕಾರಗೊಳಿಸುವ ಕಾರ್ಯ ಮಾಡೋಣ ಎಂದರು.

ಕಾರ್ಯಕ್ರಮದಲ್ಲಿ ಪ್ರತಿಭಾ ಕಳ್ಳಿಮಠ, ಭಾರತಿ ಮಠದ,ಜ್ಯೋತಿ ಬದಾಮಿ,ಮೋಹನ ಗೌಡ ಪಾಟೀಲ ಸುರೇಶ ಹಂಜಿ,ಸುಧಾ ಪಾಟೀಲ, ನರಸಿಂಗ ಕಮತಿ,ಕೆಂಪಣ್ಣ ಕಮತಿ ಸೇರಿದಂತೆ ಕನ್ನಡ ಭವನದ ಸದಸ್ಯರು, ನಾಗರಿಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಎಂ. ವೈ.ಮೆಣಸಿನಕಾಯಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು ಕೊನೆಯಲ್ಲಿ ಜಯಶ್ರೀ ನಿರಾಕಾರಿ ವಂದಿಸಿದರು.

- Advertisement -
- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!