ಜ್ಞಾನಪ್ರಕಾಶ ಸ್ವಾಮಿ ವಿವಾದಾತ್ಮಕ ಹೇಳಿಕೆ
ಬೀದರ: ದೊಡ್ಡ ದೊಡ್ಡ ಪೀಠಾಧ್ಯಕ್ಷರು ನೀವು ಎಲ್ಲಾ ಸ್ವಾಮಿಗಳು ವಿಧಾನಸೌಧ ಮುಂದೆ ಬನ್ನಿ, ಬಂದು *ನಮ್ಮಲ್ಲಿ ದಲಿತರ ರಕ್ತ ಹರಿಯುತ್ತಿದೆ* ಎಂದು ಬಹಿರಂಗವಾಗಿ ಸುದ್ದಿ ಗೋಷ್ಠಿ ಮಾಡಿ ಹೇಳಿ, ಮೀಸಲಾತಿ ಪಡೆದುಕೊಳ್ಳಿ ಎಂದು ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಅತ್ಯಂತ ಕಟುವಾದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಾವು ಹೊಲೆಯ, ಮಾದಿಗರಿಗೆ ಹುಟ್ಟಿದ್ದೇವೆ, ನಾವೆಲ್ಲಾ ಸಮಾನರು ಎಂದು ಹೇಳಿ ಲಿಂಗಾಯತರು, ಬೇಡ ಜಂಗಮರು ಸುದ್ದಿಗೋಷ್ಠಿಯಲ್ಲಿ ಹೇಳಿ, ನಮ್ಮದೆಲ್ಲಾ ಒಂದೇ ರಕ್ತ ಎಂದು ಹೇಳಿ ಮೀಸಲಾತಿ ಪಡೆಯಿರಿ ಎಂದು ಜ್ಞಾನ ಪ್ರಕಾಶ ಸ್ವಾಮೀಜಿ ವೀರಶೈವ, ಲಿಂಗಾಯತ ಜಂಗಮರಿಗೆ ಸವಾಲು ಹಾಕಿದ್ದಾರೆ.
ಬಳಿಕ ನಂತರ ನೀವು ಸರ್ಟಿಫಿಕೇಟ್ ತೆಗೆದುಕೊಳ್ಳಿ ಬೇಡ ಅಂತ ಹೇಳಲ್ಲ ಅಂತಾ ಪರೋಕ್ಷವಾಗಿ ಪಂಚ ಪೀಠದ ಜಗದ್ಗುರುಗಳಿಗೆ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಮಠಾಧೀಶರಾದ ಜ್ಞಾನ ಪ್ರಕಾಶ ಸ್ವಾಮೀಜಿ ವೀರಶೈವ ಜಂಗಮರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ