spot_img
spot_img

ಜೇನು ಹುಳು ಮನುಷ್ಯರಿಗೆಲ್ಲ ಮಾದರಿ ಆಗಬೇಕಾಗಿದೆ – ಡಾ. ನೆಲ್ಲಿಕಟ್ಟೆ ಸಿದ್ದೇಶ್, ಪ್ರಾಧ್ಯಾಪಕರು

Must Read

spot_img
- Advertisement -

ಸವದತ್ತಿ: ಜೇನುಹುಳು ಸಿಹಿಯನ್ನು ಸಂಗ್ರಹಿಸುತ್ತದೆ, ಸಿಹಿಯನ್ನು ತಿನ್ನುತ್ತದೆ ಮತ್ತು ನಮಗೆಲ್ಲ ಸಿಹಿಯನ್ನು ಹಂಚುತ್ತದೆ. ಒಂದು ಸಣ್ಣ ಜೇನುಹುಳು ಇಂತಹ ಮಹತ್ಕಾರ್ಯವನ್ನು ಮಾಡುವಾಗ ಆ ಜೇನು ಹುಳು ನಮಗೆಲ್ಲ ಮಾದರಿ ಆಗಬೇಕಾಗಿದೆ ಎಂದು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ನೆಲ್ಲಿಕಟ್ಟೆ ಸಿದ್ದೇಶ್ ನುಡಿದರು.

ಅವರು ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಇವುಗಳ ಸಹಯೋಗದಲ್ಲಿ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ “ಬುದ್ಧ ಕಟ್ಟ ಬಯಸಿದ ಸಮಾಜ” ಎನ್ನುವ ವಿಷಯದ ಕುರಿತು ಮಾತನಾಡಿದರು.

ಭವಿಷ್ಯದ ಬದುಕಿಗೆ ಉತ್ತಮ ತಳಪಾಯ ಹಾಕಿಕೊಳ್ಳಬೇಕಾದರೆ ನಮ್ಮ ಇತಿಹಾಸ, ಪರಂಪರೆಗಳ ಅಧ್ಯಯನ ಬಹಳ ಮುಖ್ಯ. ಬುದ್ದ, ಬಸವಣ್ಣ, ವಚನಕಾರರು, ಕನಕದಾಸ, ನಿಜಗುಣರು, ತತ್ವ ಪದಕಾರರು ಮತ್ತು ಅಂಬೇಡ್ಕರ್‌ವರ ವಿಚಾರಗಳು ನಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳಲು ದಾರಿ ದೀಪಗಳಾಗಿವೆ ಎಂದರು.

- Advertisement -

ಇವತ್ತು ನಾವು ತಲ್ಲಣ, ಆತಂಕ, ಭಯದಲ್ಲಿ ಬದುಕುತ್ತಿದ್ದೇವೆ. ಇಂತಹ ಕವಿಯುತ್ತಿರುವ ಕಾರ್ಮೋಡದಲ್ಲಿ ವಿಕಾರಿಗಳ ಆರ್ಭಟದಲ್ಲಿ ಮನಸ್ಸುಗಳು ಮಲಿನಗೊಳ್ಳುತ್ತಿವೆ. ಬುದ್ದ, ಬಸವಣ್ಣ, ವಚನಕಾರರು, ಕನಕದಾಸ, ನಿಜಗುಣರು, ತತ್ವ ಪದಕಾರರು ಮತ್ತು ಅಂಬೇಡ್ಕರ್‌ವರಂತಹ ಮಹನೀಯರುಗಳ ವಿಚಾರಗಳು ಸಮ ಸಮಾಜ ಕಟ್ಟುವಲ್ಲಿ ನಮಗೆ ದಾರಿ ದೀಪಗಳಾಗಿವೆ ಎಂದರು.

ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ಅಗತ್ಯ ಜೀವನಕ್ರಮವನ್ನು ರೂಪಿಸಿಕೊಟ್ಟಂತಹ ಮಹಾತ್ಮನೆಂದರೆ ಗೌತಮ ಬುದ್ಧ. ಲೋಕದ ಮೊಟ್ಟ ಮೊದಲ ಪ್ರಜಾಪ್ರೇಮಿ. ಸರ್ವ ಸಮಾನತೆಯ ಹರಿಕಾರ, ಸತ್ಯ ಅಹಿಂಸೆಯ ಪ್ರಚಾರಕ. ಇಂತಹ ಬುದ್ಧನ ವಿಚಾರಧಾರೆಗಳು ಇಂದಿಗೂ ಪ್ರಸ್ತುತವೆನಿಸುತ್ತವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಮಾರುತಿ ದೊಂಬರ ವಹಿಸಿದ್ದರು, ಶಾಂಭವಿ ಬಡಿಗೇರ ಪ್ರಾರ್ಥಿಸಿದರು, ಶ್ರೀ ಕೆ.ರಾಮರೆಡ್ಡಿ ಸ್ವಾಗತಿಸಿದರು, ಡಾ. ಪಿ.ನಾಗರಾಜ ಪ್ರಾಸ್ತಾವಿಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಸಾರಾಂಗದ ನಿರ್ದೇಶಕರಾದ ಡಾ.ಎಸ್.ಬಿ.ಆಕಾಶ್ ಉದ್ಘಾಟಿಸಿದರು, ಡಾ.ಅರುಂಧತಿ ಬದಾಮಿ ವಂದಿಸಿದರು, ಶ್ರೀ ಮೋಹನ್ ಬೆಣಚಮರ್ಡಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಪಾಲಕರು, ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group