ಸಿಂದಗಿ: ಪಟ್ಟಣದ ಶ್ರೀ ಬಸವ ಮಂಟಪದಲ್ಲಿ ನೇಪಾಳ ದೇಶದ ಬಿರಗಂಜ್ ಎಂಬ ಪಟ್ಟಣದಲ್ಲಿ ಅಂತಾರಾಷ್ಟ್ರೀಯ ಬಸವ ಸಮ್ಮೇಳನ ಕಾರ್ಯಕ್ರಮ ಮುಗಿಸಿಕೊಂಡು ಸಿಂದಗಿ ನಗರಕ್ಕೆ ಆಗಮಿಸಿದ ಶ್ರೀ ಚನ್ನಬಸವಾನಂದ ಮಹಾಸ್ವಾಮಿಗಳಿಗೆ ಹಾಗೂ ಶ್ರೀಮತಿ ಸತ್ಯವತಿ ಮಾತಾಜಿಯವರಿಗೂ ಹಾಗೂ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳಿಗೂ ರಾಷ್ಟ್ರೀಯ ಬಸವದಳದ ಅಧ್ಯಕ್ಷ ಶಿವಾನಂದ ಕಲಬುರ್ಗಿ ಅವರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಆರ್.ಆರ್.ಪಾಟೀಲ, ಆರ್.ಪಿ.ಬಿರಾದಾರ, ಶಿವಕುಮಾರ ಶಿವಶಿಂಪಿ, ರಮೇಶ್ ಕಕ್ಕಳಮೇಲಿ. ಶಾಂತಪ್ಪ ರಾಣಗೋಳ. ದಾನಪ್ಪ ಜೋಗುರ್.. ಗುರುಪಾದ ತಾರಾಪುರ. ಶರಣು ತಳವಾರ್, ಸಂಗಣ್ಣ ಯಲಗೋಡ. ಜಗದೀಶ್ ಕಲಬುರ್ಗಿ ಸೇರಿದಂತೆ ರಾಷ್ಟ್ರೀಯ ಬಸವದಳದ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.