spot_img
spot_img

ಹಳಿಯಾಳ ಅಕ್ಷರ ದಾಸೋಹ ಅಧಿಕಾರಿ ನೂಲಿನ ರವರಿಗೆ ಸನ್ಮಾನ

Must Read

ಬೆಳಗಾವಿ – ಕಾರವಾರ ಜಿಲ್ಲೆಯ ಹಳಿಯಾಳ ತಾಲೂಕಿನ ತಾಲೂಕಾ ಪಂಚಾಯತ ಕಾರ್ಯಾಲಯದಲ್ಲಿ ತಾಲೂಕಾ ಅಕ್ಷರ ದಾಸೋಹ ವಿಭಾಗದ ಸಹಾಯಕ ನಿರ್ದೇಶಕರಾದ ಎಸ್ ಎಸ್ ನೂಲಿನ ಅವರನ್ನು ಬೆಳಗಾವಿ ತಾಲೂಕಿನ ಹಾಗೂ ಬೆಳಗಾವಿ ನಗರದ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಪರವಾಗಿ ಮಂಗಳವಾರ ದಿ. 11ರಂದು ಹಳಿಯಾಳ ತಾಲೂಕು ಪಂಚಾಯತ ಕಾರ್ಯಾಲಯದಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪರಶುರಾಮ ಘಸ್ತೆ ಯವರ ಮುಂದಾಳತ್ವದಲ್ಲಿ ಸನ್ಮಾನ ಮಾಡಿ ಅವರ ಅಧಿಕಾರದ ಅವಧಿಯಲ್ಲಿ ಜನಪರ ಉತ್ತಮ ಮಾಡಿ ಯಶಸ್ಸು ಗಳಿಸಲೆಂದು ಆಶಿಸಲಾಯಿತು.

ಜೊತೆಗೆ ಬೆಳಗಾವಿಯಲ್ಲಿ ಶಿಕ್ಷಣಾಧಿಕಾರಿಯಾಗಿ ಉತ್ತಮ ಕಾರ್ಯ ಮಾಡಿರುವುದನ್ನು ಸ್ಮರಿಸಿ ಅವರನ್ನು ಅಭಿನಂದಿಸಲಾಯಿತು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಬೆಳಗಾವಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಬಸವರಾಜ ಸುಣಗಾರ, ಬೆಳಗಾವಿ ನಗರ ಘಟಕದ ಅಧ್ಯಕ್ಷರಾದ ಎ ಡಿ ಸಾಗರ, ಪ್ರಧಾನ ಕಾರ್ಯದರ್ಶಿ ಬಿ ಬಿ ಹಟ್ಟಿಹೋಳಿ, ರುಕ್ಮಿಣಿ ನಗರ ಶಾಲಾ ಮುಖ್ಯ ಶಿಕ್ಷಕರಾದ ರಾಜೇಂದ್ರ ಗೋಶ್ಯಾನಟ್ಟಿ, ವಿಜಯನಗರ ಮರಾಠಿ ಶಾಲಾ ಕನ್ನಡ ಶಿಕ್ಷಕರಾದ ರುದ್ರಯ್ಯ ಮೆಟ್ಯಾಳಮಠ ಉಪಸ್ಥಿತರಿದ್ದು ಅಭಿನಂದಿಸಿ ಸನ್ಮಾನಿಸಿದರು

ಈ ಮೊದಲು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಘಸ್ತೆ ಯವರು ಬೆಳಗಾವಿ ಜಿಲ್ಲಾ ಪಂಚಾಯತ ಕಾರ್ಯಾಲಯದಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು ಅದನ್ನು ಸ್ಮರಿಸಿದರು ಎಸ್ ಎಸ್ ನೂಲಿನ ರವರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಬೆಳಗಾವಿ ಯಿಂದ ಆಗಮಿಸಿ ಸನ್ಮಾನ ಮಾಡಿದ್ದು ಸಂತೋಷ ತಂದಿದೆ ಎಂದರು

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!