ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರೆಯ ನಿಮಿತ್ತವಾಗಿ ಮಂಗಳವಾರದಂದು ಜರುಗಿದ ಒಂದು ಎತ್ತಿನ ಕಲ್ಲು ಸ್ಫರ್ಧೆ, ಜೋಡು ಕುದುರೆಬಂಡಿ ಸ್ಪರ್ಧೆ ಮತ್ತು ಎತ್ತುಗಳ ಕೂಡು ಗಾಡಿ ಸ್ಫರ್ಧೆಯುವ ಜನಮನ ಸೆಳೆದವು.
ಒಂದು ಎತ್ತಿನ ಕಲ್ಲು ಜಗ್ಗುವ ಸ್ಪರ್ಧೆಯಲ್ಲಿ ದಾಸನಾಳದ ವೀರಭದ್ರೇಶ್ವರ ಪ್ರಸನ್ನ ಎತ್ತು ಪ್ರಥಮ, ವರ್ಚಗಲದ ಸುನೀಲಗೌಡ ಪಾಟೀಲ ಎತ್ತು ದ್ವಿತೀಯ, ನಂದಗಾವದ ವೀರಭದ್ರೇಶ್ವರ ಪ್ರಸನ್ನ ಎತ್ತು ತೃತೀಯ, ವರ್ಷಗಲದ ಗಿರೆಪ್ಪಗೌಡ ಪಾಟೀಲ ಎತ್ತು ನಾಲ್ಕನೇ ಸ್ಥಾನ ಪಡೆದುಕೊಂಡವು.
ಜೋಡು ಜುದುರೆ ಬಂಡಿ ಸ್ಪರ್ಧೆಯಲ್ಲಿ ಗೋಕಾಕದ ಟಿಕ್ಕಾ ಗೋಕಾಕ ಕುದುರೆ ಬಂಡಿ ಪ್ರಥಮ, ಬೆಳಗಲಿಯ ಪರಮಾನಂದ ಬೆಳಗಲಿ ಕುದುರೆ ಬಂಡಿ ದ್ವಿತೀಯ, ಸಾಂಗಲಿಯ ಸುಮಿತ ಸಾಂಗಲವಾಡಿ ಕುದುರೆ ಬಂಡಿ ತೃತೀಯ, ಬನಹಟ್ಟಿಯ ರೇಣುಕಾದೇವಿ ಪ್ರಸನ್ನ ಕುದುರೆ ಬಂಡಿ ನಾಲ್ಕನೇ ಮತ್ತು ಕಡಕೊಳದ ಮಂಜು ಅಬ್ಬಿಕ್ಕನವರ ಕುದುರೆ ಬಂಡಿ ಐದನೇ ಸ್ಥಾನ ಪಡೆದುಕೊಂಡವು.
ಕೂಡು ಗಾಡಿ ಸ್ಪರ್ಧೆಯಲ್ಲಿ ದನ್ಯಾಳದ ರಮೇಶ ಬಿರಾದಾರ ಎತ್ತುಗಳು ಪ್ರಥಮ, ತಾತವಾಡಿಯ ನಾಮದೇವ ಖೋತ ಎತ್ತುಗಳು ದ್ವಿತೀಯ, ಅರಕೇರಿಯ ಗುರುಲಿಂಗೇಶ್ವರ ಎತ್ತುಗಳು ತೃತೀಯ, ಸಲಗರದ ಕಿಸಾನ ಹಕ್ಕೆ ನಾಲ್ಕನೇಯ, ಸೂಳೆಭಾವಿಯ ಪ್ರಕಾಶ ಕುರಿ ಎತ್ತುಗಳು ಐದನೇ ಸ್ಥಾನ ಪಡೆದುಕೊಂಡರು.
ಬಾರಿ ಬಿಸಿಲಿನಲ್ಲಿ ಒಂದು ಎತ್ತಿನ ಕಲ್ಲು ಸ್ಫರ್ಧೆ, ಜೋಡು ಕುದುರೆಬಂಡಿ ಸ್ಪರ್ಧೆ ಮತ್ತು ಎತ್ತುಗಳ ಕೂಡು ಗಾಡಿ ಸ್ಪರ್ಧೆಯನ್ನು ವೀಕ್ಷಿಸಲು ಆಗಮಿಸಿ ಜನರಿಗೆ ಯಾದವಾಡ ಗ್ರಾಮದ ಶ್ರೀ ಶ್ರೀಶೈಲ್ ಮಲ್ಲಿಕಾರ್ಜುನ ಪಾದಾಯಾತ್ರಾ ಸೇವಾ ಸಮಿತಿಯವರು ಸಾವಿರಾರು ಜನರಿಗೆ ತಂಪು(ಶರಬತ್ತು)ಪಾನೀಯ ವಿತರಿಸಿದರು.