ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

Must Read

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...

ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ಮುಖಂಡರ ಮತಯಾಚನೆ

ಸಿಂದಗಿ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ನಾಯಕರು ಯರಗಲ್, ಗಬಸಾವಳಗಿ, ಮೋರಟಗಿ, ಬಗಲೂರ ಗ್ರಾಮ...

ರಾಜಕೀಯ ದ್ವೇಷ; ಮಾಜಿ ಪಟ್ಟಣ ಪಂಚಾಯಿತಿಯ ಸದಸ್ಯನ ಭೀಕರ ಹತ್ಯೆ

ಸಿಂದಗಿ: ನೂತನ ತಾಲೂಕು ಆಲಮೇಲ ಪಟ್ಟಣದ ಗಣೇಶ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಾತ್ರಿ 1.30 ಗಂಟೆಯ ಸುಮಾರಿಗೆ ಮಾಜಿ ಪಟ್ಟಣ ಪಂಚಾಯತಿ...

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ ಶ್ರೀ ಮ.ನಿ.ಪ್ರ ಮಹಾಂತ ಮಹಾಸ್ವಾಮಿಗಳು ಅವರು ಎರಡನೆಯ ದಿನದ ಪುರಾಣ ಪ್ರವಚನದಲ್ಲಿ ಅವರು ಮಾತನಾಡಿ, ಸತ್ಯವಂತರ ಕಥೆಗಳನ್ನು ಆಲಿಸಬೇಕು.ಸತ್ಯದ ನೆಲೆಗಟ್ಟಿನ ಮೇಲೆ ಸುಂದರ ಬದುಕು ಕಟ್ಟಿ ಕೊಂಡು ಸಮಾಜದಲ್ಲಿ ಸತ್ಯವಂತರಾಗಿ ಬಾಳಬೇಕು.

ಮಾತನಾಡುವಾಗ ಸತ್ಯವಂತರಾಗಿ ನುಡಿಯಬೇಕು. ಸುಳ್ಳು ಹೇಳುವವರನ್ನು ಎಂದಿಗೂ ನಂಬಬಾರದು. ಗುರು ತೋರಿರುವ ಸನ್ಮಾರ್ಗದಲ್ಲಿ ಮನಸ್ಸು ತೊಡಗಿಸಬೇಕು. ಸದಾ ಗುರು ಸ್ಮರಣೆ ಮಾಡುವ ಮೂಲಕ ಅವರ ಚಿಂತನೆಯಲ್ಲಿ ತೊಡಗಬೇಕು. ಭಕ್ತಿಯಲ್ಲಿ ನಿತ್ಯ ನಿರಂತರವಾಗಿ ಧಾನ ಧರ್ಮ ಪರೋಪಕಾರದಲ್ಲಿ ತೊಡಗಿದಾಗ ನಮ್ಮ ಜೀವನ ಪಾವನವಾಗುತ್ತದೆ. ದೇವರ ಮುಂದೆ ಪ್ರಾರ್ಥನೆ ಮಾಡುವಾಗ ನಮ್ಮ ಮನಸ್ಸು ಆತ್ಮವಿಶ್ವಾಸದಿಂದ ಕೂಡಿರಬೇಕು.

ಕುಟುಂಬದಲ್ಲಿ ಅಂಜಿಕೆಯಿಂದ ಬದುಕಿದರೆ ಅದು ಯಾವಗಲು ಮನಸ್ಸು ಸುಂದರವಾಗಿರುವುದಿಲ್ಲ. ನಾವು ಸಾತ್ವಿಕ ಜೀವನ ನಡೆಸಬೇಕು. ಮನಸ್ಸು ಸುಂದರವಾಗಿರಬೇಕು ಅದು ಒಳ್ಳೆಯ ಜೀವನಕ್ಕೆ ಉತ್ತಮ ದಾರಿ ದೀಪವಾಗುತ್ತದೆ. ವಿದ್ಯಾರ್ಥಿಗಳ ಕೈಯಲ್ಲಿ ಮೊಬೈಲ್ ಕೊಡುವದರಿಂದ ಉತ್ತಮ ಶಿಕ್ಷಣ ದೂರವಾಗುತ್ತದೆ.

ಅವರಿಗೆ ಒಳ್ಳೆಯ ಶಿಕ್ಷಣ ಕೊಡಬೇಕು. ಸತತ ಅಧ್ಯಯನದಲ್ಲಿ ತೊಡುಗುವಂತೆ ಗುರುವಿನ ಮೂಲಕ ಉತ್ತಮ ಪ್ರೇರಣೆ ನೀಡಬೇಕು . ಮನಸ್ಸು ಶುದ್ದವಾಗಿರಬೇಕು.ಗುರು ಪರಂಪರೆ ಮುಂದುವರಿಸಿ ಕೊಂಡು ಅವರ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕೇರೂಟಗಿ ಹಿರೇಮಠದ ಸಂಗೀತ ಶಿಕ್ಷಕ ವೇ.ರೇಣುಕಾಚಾರ್ಯರು ಹಿರೇಮಠ ಸಂಗೀತ ಸೇವೆ ನೆರವೇರಿಸಿದರು.ಜೇರಟಗಿಯ ವೇ .ಶಾಂತು ಮುದಗಲ್ಲಮಠ ಸುಂದರವಾಗಿ ತಬಲಾ ನುಡಿಸಿದರು. ಪಂಚಯ್ಯ ಹಿರೇಮಠ.ಬಸಯ್ಯ ಮಠಪತಿ ವೇದಿಕೆ ಮೇಲೆ ಇದ್ದರು.

- Advertisement -
- Advertisement -

Latest News

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...
- Advertisement -

More Articles Like This

- Advertisement -
close
error: Content is protected !!