spot_img
spot_img

ಮನೆ ಮನೆಗೆ ಧ್ವಜಾರೋಹಣ: ಗೊಂದಲಗೊಳಿಸಿದ ಮೂಡಲಗಿ ಪುರಸಭಾ ಪ್ರಕಟಣೆ

Must Read

spot_img

ಮೂಡಲಗಿ – ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಗೆ ಧ್ವಜಾರೋಹಣ ( ಹರ್ ಘರ್ ತಿರಂಗಾ ) ಯೋಜನೆಯನ್ನು ದಿ. ೧೩ ರಿಂದ ೧೫ ರ ವರೆಗೆ ಜಾರಿಗೆ ತರಬೇಕು ಎಂಬುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಪ್ರಕಟಣೆ ಇದ್ದರೂ ಮೂಡಲಗಿ ಪುರಸಭೆಯು ಧ್ವಜಾರೋಹಣವನ್ನು ದಿ. ೧೧ ರಿಂದ ೧೭ ರವರೆಗೆ ಮಾಡಬೇಕು ಎಂಬ ಪ್ರಕಟಣೆ ಮಾಡಿ ಎಲ್ಲರನ್ನೂ ಗೊಂದಲಕ್ಕೀಡು ಮಾಡಿದೆ.

ಈ ಬಗ್ಗೆ ಜಾಹೀರಾತು ಪ್ರಕಟಿಸಿರುವ ಮೂಡಲಗಿ ಪುರಸಭೆಯು, ಸ್ವಾತಂತ್ರ್ಯದ ೭೫ ನೇ ವರ್ಷದ ಸಂಭ್ರಮವನ್ನು ವೈವಿಧ್ಯಮಯವಾಗಿ ಆಚರಿಸಲಾಗುತ್ತಿದೆ. ಈ ಸಂಭ್ರಮದ ಒಂದು ಭಾಗವಾಗಿ ‘ಹರ್ ಘರ್ ತಿರಂಗಾ’ ಘೋಷ ವಾಕ್ಯದೊಂದಿಗೆ ಮನೆ ಮನೆಯಲ್ಲೂ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಿ, ಅರೆ ಸರ್ಕಾರಿ, ನಿಗಮ ಮಂಡಳಿಗಳು, ಸಾರ್ವಜನಿಕ ಉದ್ಯಮಗಳು, ನಾಗರಿಕ ಸಂಸ್ಥೆಗಳು ಹಾಗೂ ಸ್ವಸಹಾಯ ಸಂಘಗಳು ಸೇರಿದಂತೆ ಎಲ್ಲಾ ನಾಗರಿಕರು ದಿ.೧೧ ರಿಂದ ೧೭ ರವರೆಗೆ ಮನೆ ಮನೆಯ ಮೇಲೆ ಧ್ವಜಾರೋಹಣ ಮಾಡಬೇಕು ಎಂದು ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಮುಖ್ಯಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದರಿ ಪ್ರಕಟಣೆಯನ್ನು ಮೂಡಲಗಿ ನಗರದಲ್ಲಿ ಸಂಚರಿಸುವ ಸ್ವಚ್ಛತಾ ವಾಹನದೊಡನೆ ಇವರು ಹಂಚಿದ್ದು ದಿ. ೧೧ ರಂದು ! ಆದರೆ ಇಂದೇ ಬೆಳಿಗ್ಗೆ ೮ ಕ್ಕೆ ಧ್ವಜಾರೋಹಣ ಮಾಡಬೇಕಿತ್ತು ! ಹೇಗೆ ಮಾಡುವುದು ಎಂಬ ಗೊಂದಲದಲ್ಲಿ ನಾಗರಿಕರು ಇದ್ದಾರೆ.

ಈ ಬಗ್ಗೆ ಮೂಡಲಗಿಯ ಪಿಕೆಪಿಎಸ್ ಸೇರಿದಂತೆ ಕೆಲವು ಸಂಘ ಸಂಸ್ಥೆಗಳವರನ್ನು ಕೇಳಿದಾಗ ತಮಗೆ ದಿ.೧೩ ರಿಂದ ೧೫ ರವರೆಗೆ ಧ್ವಜಾರೋಹಣ ಮಾಡಲು ಸುತ್ತೋಲೆ ಬಂದಿದ್ದಾಗಿ ಹೇಳಿದರು.

ಧ್ವಜಾರೋಹಣ ದಿನಾಂಕದ ಗೊಂದಲ ಪರಿಹರಿಸಿಕೊಳ್ಳಲು ಪುರಸಭೆ ಆರೋಗ್ಯಾಧಿಕಾರಿಯವರಿಗೆ ಫೋನಾಯಿಸಿ ಕೇಳಿದಾಗ, ಮೊದಲು ತಮಗೆ ದಿ. ೧೧ ರಿಂದ ೧೭ ವರೆಗೆ ಧ್ವಜಾರೋಹಣ ಎಂಬ ಮಾಹಿತಿ ಬಂದಿತ್ತು ಈಗ ಬದಲಾಗಿದೆ ಎಂದರು !

ಇಡೀ ದೇಶಕ್ಕೆ ಸಂಬಂಧಪಟ್ಟ ಒಂದು ಸ್ವಾತಂತ್ರ್ಯ ಹಬ್ಬದ ನಿಗದಿತ ದಿನಾಂಕದ ಬಗ್ಗೆ ಮೂಡಲಗಿ ಪುರಸಭೆಯವರಿಗೆ ಸ್ಪಷ್ಟತೆ ಇಲ್ಲದ್ದು ತೀರಾ ವಿಪರ್ಯಾಸಕರ ಸಂಗತಿ. ಈ ಬಗ್ಗೆ ಮೇಲಧಿಕಾರಿಗಳಾದ ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಇದೆಯೋ ಇಲ್ಲವೊ ಗೊತ್ತಿಲ್ಲ. ಒಂದು ವೇಳೆ ಮಾಹಿತಿ ಇದ್ದರೂ ಇಂಥ ಒಂದು ಅಧ್ವಾನ ಮಾಡಿದ ಮೂಡಲಗಿ ಪುರಸಭೆಯ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕು.


ವರದಿ: ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!