spot_img
spot_img

ನಮ್ಮ ದಸರಾ – ಅದೆಷ್ಟು ಸುಂದರಾ !

Must Read

- Advertisement -

ವಿಜಯದಶಮಿ ಅಥವಾ ದಸರಾ ಹಬ್ಬವನ್ನು ಅಶ್ವಿನಿ ಮಾಸದ ಶುಕ್ಲಪಕ್ಷದ ಹತ್ತನೇ ದಿನದಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ಅಧರ್ಮದ ಮೇಲೆ ಧರ್ಮದ ವಿಜಯವೆಂದು ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ, ಈ ದಿನ “ಶ್ರೀರಾಮನು ಲಂಕಾಧಿಪತಿ ರಾವಣನನ್ನು ಕೊಂದನು ಮತ್ತು ದುರ್ಗಾದೇವಿಯು ರಾಕ್ಷಸ ಮಹಿಷಾಸುರನನ್ನು ಕೊಂದಳು” ಎನ್ನುವ ನಂಬಿಕೆಯಿದೆ. ಹಾಗಾಗಿ ಈ ಹಬ್ಬವನ್ನು ವಿಜಯದಶಮಿ ಎಂದೂ ಕರೆಯುತ್ತಾರೆ. ರಾಮಲೀಲಾ ದಸರಾ ದಿನದಂದು ರಾವಣನ ಜೊತೆಗೆ ಮೇಘನಾಥ ಮತ್ತು ಕುಂಭಕರ್ಣನ ಪ್ರತಿಕೃತಿಗಳನ್ನು ಸುಡಲಾಗುತ್ತದೆ. ಈ ದಿನದೊಂದಿಗೆ ದುರ್ಗಾಪೂಜೆ ಮುಕ್ತಾಯವಾಗುತ್ತದೆ.

ಜ್ಯೋತಿಷಿಗಳ ಪ್ರಕಾರ, ದಸರಾ ದಿನಾಂಕವನ್ನು ಅಬೂಜ ಮುಹೂರ್ತ ಎಂದು ಪರಿಗಣಿಸಲಾಗುತ್ತದೆ. ಅಂದರೆ, ಅದರಲ್ಲಿ ಯಾವುದೇ ಮುಹೂರ್ತವನ್ನು ನೋಡದೆ, ಎಲ್ಲಾ ಶುಭ ಕಾರ್ಯಗಳನ್ನು ಮಾಡಬಹುದು. ನೀವು ಹೊಸ ವ್ಯಾಪಾರವನ್ನು ಪ್ರಾರಂಭಿಸುತ್ತಿದ್ದರೆ ಅಥವಾ ಏನನ್ನಾದರೂ ಖರೀದಿಸುತ್ತಿದ್ದರೆ, ಈ ಮುಹೂರ್ತದಲ್ಲಿ ಶುಭ ಕಾರ್ಯವನ್ನು ಮಾಡುವುದು ಯಾವಾಗಲೂ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ದಸರಾ ಹಬ್ಬವು ಅಸತ್ಯದ ವಿರುದ್ಧ ಸತ್ಯದ ವಿಜಯ ಮತ್ತು ಅಧರ್ಮದ ವಿರುದ್ಧ ಧರ್ಮದ ವಿಜಯವನ್ನು ಸೂಚಿಸುತ್ತದೆ. ಈ ದಿನ ಮಹಿಷಾಸುರನನ್ನು 10 ದಿನಗಳ ಯುದ್ಧದ ನಂತರ ದುರ್ಗಾದೇವಿಯು ಸಂಹಾರ ಮಾಡಿದಳು ಮತ್ತು ಭಗವಾನ್ ರಾಮನು ರಾವಣನನ್ನು ಕೊಂದು ಲಂಕೆಯನ್ನು ವಶಪಡಿಸಿಕೊಂಡನು ಎನ್ನಲಾಗುತ್ತದೆ. ಈ ಕಾರಣದಿಂದಾಗಿ ಈ ದಿನದಂದು ಶಸ್ತ್ರಪೂಜೆ, ದುರ್ಗಾಪೂಜೆ, ರಾಮಪೂಜೆ ಮತ್ತು ಶಮಿ ಪೂಜೆಯನ್ನು ಮಾಡುವ ಪದ್ಧತಿಯಿದೆ. ಈ ಎರಡೂ ಘಟನೆಗಳಿಂದಾಗಿ ಈ ಹಬ್ಬವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಈ ದಿನ ದುರ್ಗೆಯ ವಿಗ್ರಹವನ್ನು ಗೌರವಪೂರ್ವಕವಾಗಿ ಹಾಗೂ ವಿಧಿ – ವಿಧಾನಗಳ ಪ್ರಕಾರ ಪೂಜಿಸಲಾಗುತ್ತದೆ. ಇದರೊಂದಿಗೆ ಚಂಡಿಪಾಠ ಅಥವಾ ದುರ್ಗಾಸಪ್ತಶತಿಯನ್ನು ಪಠಿಸುವುದು ಮತ್ತು ಹವನ ಮಾಡುವುದು ಈ ದಿನದಂದು ವಿಶೇಷ ಮಹತ್ವವನ್ನು ಹೊಂದಿದೆ.

- Advertisement -

ದಸರಾ / ವಿಜಯದಶಮಿ ಹಬ್ಬದ ಬಗ್ಗೆ ಪುರಾಣದಲ್ಲಿ ಇರುವ ಕಥೆಗಳು.

🌹 ಹಿಂದೂ ಪುರಾಣಗಳ ಪ್ರಕಾರ,
ರಾವಣನು ಲಂಕಾದ ರಾಕ್ಷಸ ರಾಜನಾಗಿದ್ದನು. ಇದು ಭಾರತದ ದಕ್ಷಿಣದ ಪ್ರದೇಶವಾಗಿದ್ದು, ರಾವಣನು ಭಗವಾನ್ ರಾಮನ ಪತ್ನಿ ಸೀತೆಯನ್ನು ಹೇಗಾದರೂ ತನ್ನವಳನ್ನಾಗಿಸಿಕೊಳ್ಳಬೇಕೆಂದು ಬಯಸಿದ್ದನು. ರಾವಣನು ಸೀತೆಯನ್ನು ಅಪಹರಿಸಿ ತನ್ನ ರಾಜ್ಯವಾದ ಲಂಕಾಕ್ಕೆ ಕರೆದೊಯ್ದು ಅಲ್ಲಿ ಅವಳನ್ನು ಸೆರೆಯಲ್ಲಿಟ್ಟನು. ಭಗವಾನ್ ರಾಮನು ವಾನರ ಸೈನ್ಯದೊಂದಿಗೆ ಲಂಕಾದತ್ತ ಪ್ರಯಾಣಿಸಿ ಅವನ ಸಹೋದರ ಲಕ್ಷ್ಮಣ ಮತ್ತು ಭಗವಾನ್ ಹನುಮಂತನ ಬೆಂಬಲದೊಂದಿಗೆ ಅವನು ಯುದ್ಧದ ಹತ್ತನೇ ದಿನದಂದು ರಾವಣನನ್ನು ಹತ್ಯೆಗೈಯ್ಯುತ್ತಾನೆ. ಮೊದಲ ಒಂಬತ್ತು ದಿನಗಳನ್ನು ನವರಾತ್ರಿ ಎಂದು ಆಚರಿಸಲಾಗುತ್ತದೆ ಮತ್ತು ರಾವಣನನ್ನು ಕೊಂದ ಹತ್ತನೇ ದಿನವನ್ನು ದಸರಾ ಎಂದು ಆಚರಿಸಲಾಗುತ್ತದೆ. ರಾವಣನ ಬೃಹತ್ ಮತ್ತು ದೈತ್ಯಾಕಾರದ ಪ್ರತಿಕೃತಿಗಳನ್ನು ದಹಿಸುವ ಮೂಲಕ ನವರಾತ್ರಿ ಉತ್ಸವವನ್ನು ಮುಕ್ತಾಯಗೊಳಿಸಲಾಗುತ್ತದೆ. ರಾವಣನ ವಧೆಯು ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಸೂಚಿಸುತ್ತದೆ.

🌹 ಭಾರತದ ಪೂರ್ವ ಮತ್ತು ಉತ್ತರ ರಾಜ್ಯಗಳಲ್ಲಿ ಪ್ರಚಲಿತದಲ್ಲಿರುವ ಮತ್ತೊಂದು ಪುರಾಣದ ಪ್ರಕಾರ,
ದುರ್ಗಾದೇವಿಯು ಭೂಮಿಗೆ ಶಾಂತಿಯನ್ನು ತರಲು ರಾಕ್ಷಸ ಮಹಿಷಾಸುರನನ್ನು ಸಂಹಾರ ಮಾಡುತ್ತಾಳೆ ಎಂದು ಹೇಳಲಾಗಿದೆ. ನವರಾತ್ರಿ ಹಬ್ಬವನ್ನು 9 ದಿನಗಳವರೆಗೆ ಆಚರಿಸಲಾಗುತ್ತದೆ. ಏಕೆಂದರೆ ಇಲ್ಲಿ ದೇವಿ ಮತ್ತು ರಾಕ್ಷಸನ ನಡುವಿನ ಯುದ್ಧವು ಹತ್ತು ದಿನಗಳವರೆಗೆ ಇರುತ್ತದೆ. ಹತ್ತನೇ ದಿನದಂದು ದುರ್ಗಾದೇವಿಯು ಮಹಿಷಾಸುರನನ್ನು ಕೊಂದಳು ಮತ್ತು ಆ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಅಂದರೆ ‘ಹತ್ತನೇ ದಿನದಲ್ಲಿ ಸಾಧಿಸಿದ ವಿಜಯ’.

- Advertisement -

🌹 ವಿಜಯದಶಮಿಯ ಹಿಂದಿನ ಒಂಬತ್ತು ದಿನಗಳಲ್ಲಿ ಪ್ರತಿಯೊಂದೂ ದುರ್ಗಾದೇವಿಯ ನಿರ್ದಿಷ್ಟ ಶಕ್ತಿಯುತ ಅಭಿವ್ಯಕ್ತಿಗೆ ಸಮರ್ಪಿತವಾಗಿದೆ. ಭಾರತದ ಪೂರ್ವ ಮತ್ತು ಈಶಾನ್ಯ ಭಾಗಗಳು ದುರ್ಗಾ ಪೂಜೆಯ ಸಮಯದಲ್ಲಿ ಉಪವಾಸ ಮಾಡುವುದಿಲ್ಲ. ಏಕೆಂದರೆ ಇದು ಅವರಿಗೆ ಸಂಭ್ರಮದ ಸಮಯವಾಗಿದೆ ಮತ್ತು ಅವರು ಹಬ್ಬವನ್ನು ಬಹಳ ವೈಭವದಿಂದ ಮತ್ತು ಉತ್ಸಾಹದಿಂದ ಆನಂದಿಸುತ್ತಾರೆ. ದುರ್ಗಾದೇವಿಯನ್ನು ದೇಶದ ಪೂರ್ವ ಮತ್ತು ಈಶಾನ್ಯ ಭಾಗಗಳಲ್ಲಿ ಐದು ದಿನಗಳ ಕಾಲ ಪೂಜಿಸಲಾಗುತ್ತದೆ, ಮತ್ತು ಹತ್ತನೇ ದಿನ ಉತ್ಸವಗಳ ಅಂತ್ಯವನ್ನು ಸೂಚಿಸುವ ಮೂಲಕ ಮೂರ್ತಿಯನ್ನು ಜಲಮೂಲಗಳಲ್ಲಿ ಮುಳುಗಿಸಲಾಗುತ್ತದೆ.

ದಸರಾ ಹಬ್ಬ ಕರ್ನಾಟಕದ ನಾಡಹಬ್ಬವಾದ ರೀತಿ

ಮೈಸೂರು ದಸರಾ,
ಎಷ್ಟೊಂದು ಸುಂದರಾ,
ಚೆಲ್ಲಿರಿ ನಗೆಯಾ ಪನ್ನೀರಾ ……
ಯಾರಿಗೆ ತಾನೇ ತಿಳಿದಿಲ್ಲ ಈ ಹಾಡು…! ಬರೀ ಹಾಡಷ್ಟೇ ಅಲ್ಲ, ನಮ್ಮ ನಾಡಿನ ಹೆಮ್ಮೆಯ ಮೈಸೂರು ದಸರಾವು ಅಷ್ಟೇ ಸುಂದರ. ಕನ್ನಡ ನಾಡಿನ ಕಲೆ – ಸಂಸ್ಕೃತಿಯನ್ನು ಬಿಂಬಿಸುವ, ದೇಶ – ವಿದೇಶದ ಜನರನ್ನು ಆಕರ್ಷಿಸುವ ನವರಾತ್ರಿ, ವಿಜಯ ದಶಮಿ, ದಸರಾ ಹಬ್ಬ, ಜಂಬೂ ಸವಾರಿ ಎಂದೆಲ್ಲ ಕರೆಯಲ್ಪಡುವ “ನಾಡ ಹಬ್ಬ” ದಸರಾದಲ್ಲಿ ನವ ದಿನವೂ ಹೊಸ – ಹೊಸ ಸಂಭ್ರಮ. ಸಾಮಾನ್ಯವಾಗಿ ಸೆಪ್ಟೆಂಬರ್ – ಅಕ್ಟೋಬರ್ ಮಾಸದಲ್ಲಿ ಬರುವ ಈ ಹಬ್ಬವು ನಾಡಿನ ಒಂದು ವಿಶೇಷ.

🌹 ಸುಪ್ರಸಿದ್ಧ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಎಷ್ಟು ಬಣ್ಣಿಸಿದರೂ ಅದು ಕಡಿಮೆಯೇ ಎಂದೆನಿಸುತ್ತದೆ. ಅಂತಹ ವೈಭವಗಳಲ್ಲಿ ಒಂದು ಮಹಾನವಮಿ ದಿಬ್ಬ. ಶ್ರೀಕೃಷ್ಣದೇವರಾಯರು ಮಹಾನವಮಿ ದಿಬ್ಬದ ಮೇಲೆ ಕುಳಿತು ಗಜಪಡೆ, ಅಶ್ವಪಡೆ, ಸೈನ್ಯದ ಕವಾಯತುಗಳು, ಪಿರಂಗಿಗಳು ಮತ್ತು ಆಯುಧಗಳ ಶಕ್ತಿ ಪ್ರದರ್ಶನಗಳನ್ನು ವೀಕ್ಷಿಸುತ್ತಿದ್ದರು. ನಂತರದ ದಿನಗಳಲ್ಲಿ ಮೈಸೂರು ಅರಸರು ಇದೇ ಪದ್ದತಿಯನ್ನು ಮುಂದುವರೆಸಿದರು. ಪ್ರತಿ ವರ್ಷ ಬಹಳ ವಿಜೃಂಭಣೆಯಿಂದ ಆಚರಿಸಲ್ಪಡುವ ಈ ಹಬ್ಬವನ್ನು ಮೈಸೂರು ಅರಸರು “ನಾಡ ಹಬ್ಬ” ಎಂದು ಘೋಷಿಸಿದರು.

ದೇಶದಾದ್ಯಂತ ದಸರಾ ಹಬ್ಬವನ್ನು ಆಚರಿಸಿದರೂ ಸಹ ಕರ್ನಾಟಕದಲ್ಲಿ ಕಾಣಬರುವ ದಸರಾ ಸಂಭ್ರಮವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇಂದಿಗೂ ಸಹ ರಾಜಮನೆತನದವರ ಸಹಯೋಗದೊಂದಿಗೆ ಆಚರಿಸಲ್ಪಡುವ ದಸರಾ ಹಬ್ಬವು ಕರ್ನಾಟಕದ “ನಾಡ ಹಬ್ಬ” ಎಂದೇ ಕರೆಯಲ್ಪಡುತ್ತದೆ. ವಿಜೃಂಭಣೆಯಿಂದ ಆಚರಿಸಲ್ಪಡುವ ನಾಡ ಹಬ್ಬ ದಸರಾವನ್ನು ವೀಕ್ಷಿಸಲು ದೇಶದ ಮೂಲೆ ಮೂಲೆಗಳಿಂದಷ್ಟೇ ಅಲ್ಲದೇ ವಿದೇಶಗಳಿಂದಲೂ ಜನರು ಮೈಸೂರಿಗೆ ಬರುತ್ತಾರೆ.

ಮೈಸೂರಿನ ರಾಜವಂಶಸ್ಥರು ಹಿಂದಿನ ಕಾಲದಿಂದಲೂ ನವರಾತ್ರಿ ಆಚರಣೆಯ ಒಂಬತ್ತು ದಿವಸಗಳಲ್ಲೂ ಅರಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಒಂಬತ್ತನೆಯ ದಿನದಂದು ಚಾಮುಂಡೇಶ್ವರಿ ಪೂಜೆ ಸಲ್ಲಿಸಿ ರಾಜರು ಚಿನ್ನದ ಅಂಬಾರಿಯಲ್ಲಿ ಕುಳಿತು ‘ಬನ್ನಿಮಂಟಪಕ್ಕೆ’ ತೆರಳಿ ಅಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಆದರೆ ಈಗ ಚಿನ್ನದ ಅಂಬಾರಿಯಲ್ಲಿ ರಾಜರ ಬದಲು ನಾಡದೇವತೆ ಚಾಮುಂಡೇಶ್ವರಿಯನ್ನು ಕೂರಿಸಿ ‘ಬನ್ನಿಮಂಟಪಕ್ಕೆ’ ಕರೆತರಲಾಗುತ್ತದೆ. ಇದೇ ಎಲ್ಲರ ನೆಚ್ಚಿನ ‘ಜಂಬೂ ಸವಾರಿ’.

ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ
💐💐💐💐💐💐💐💐

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕನ್ನಡದ ಕುಲುಗುರು ಪ್ರೊ. ಶಿ ಶಿ ಬಸವನಾಳರು

ಕನ್ನಡದ ಕುಲು ಗುರು ಶ್ರೇಷ್ಠ ಸಂಶೋಧಕ ಕನ್ನಡದ ಕಟ್ಟಾಳು ಅಪ್ಪಟ ಬಸವ ಭಕ್ತ ಮತ್ತು ಕೆ ಎಲ್ ಈ ಸಂಸ್ಥೆಯ ಸ್ಥಾಪಕ ಸದಸ್ಯ ಕರ್ನಾಟಕ ವಿಶ್ವ...
- Advertisement -

More Articles Like This

- Advertisement -
close
error: Content is protected !!
Join WhatsApp Group