spot_img
spot_img

ರಾಷ್ಟ್ರಧ್ವಜದಲ್ಲಿ ಇರುವ ಬಣ್ಣಗಳೆಷ್ಟು?

Must Read

ಇತ್ತೀಚೆಗೆ ಕನಾ೯ಟಕದ ಓವ೯ ರಾಜಕಾರಣಿಯು ನಮ್ಮ ಭಾರತ ದೇಶದ ತ್ರಿವಣ೯ ಧ್ವಜದಲ್ಲಿ ಇರುವ ಬಣ್ಣಗಳ ಕುರಿತು ಹೇಳುವಾಗ ” ನಮ್ಮ ದೇಶದ ತ್ರಿವಣ೯ ಧ್ವಜದಲ್ಲಿ ಕೆಂಪು, ಬಿಳಿ , ಹಸಿರು ” ( ಕೇಸರಿ ಬದಲು ಕೆಂಪು ) ಹೀಗೆ ಮೂರು ಬಣ್ಣ ಇರುತ್ತವೆ ಎಂದು ಹೇಳಿದರು.

ಆದರೆ ಮೊನ್ನೆ ಓಡಿಸಾ ರಾಜ್ಯದ ಒಂದು ಶಾಲೆಯಲ್ಲಿ ಓವ೯ ಶಿಕ್ಷಕರು ತಮ್ಮ ವಗ೯ದಲ್ಲಿ ಧ್ವಜದ ಕುರಿತು ಹೇಳುತ್ತಾ ” ನಮ್ಮ ದೇಶದ ತ್ರಿವಣ೯ ಧ್ವಜದಲ್ಲಿ ಮೂರು ಬಣ್ಣ ಇರುತ್ತವೆ. ಅವೆಂದರೆ ಕೇಸರಿ, ಬಿಳಿ ಮತ್ತು ಹಸಿರು ಇರುವವು ” ಅನ್ನುತ್ತಾರೆ.

ಆಗ ಒಬ್ಬ ವಿದ್ಯಾರ್ಥಿ ಮಾತ್ರ ” ಇಲ್ಲ ಸರ್ ನಮ್ಮ ತ್ರಿವಣ೯ ಧ್ವಜದಲ್ಲಿ ಐದು ಬಣ್ಣಗಳಿವೆ ” ಅಂತ ಹೇಳಿದ.

ಶಿಕ್ಷಕರು ಕೋಪದಿಂದ “ಐದು ಬಣ್ಣ ನೀನು ಎಲ್ಲಿಂದ ತಂದೆ ” ಅಂತ ಪ್ರಶ್ನಿಸುತ್ತಾರೆ.

ಆಗ ಆ ಪುಟ್ಟ ಬಾಲಕ ಹೇಳುತ್ತಾನೆ.

” ಕೇಸರಿ ಬಿಳಿ ಹಸಿರು ಜೊತೆಗೆ ನಡುವೆ ಇರುವ ‘ಚಕ್ರ’ ವು ‘ ನೀಲಿ ‘ ಬಣ್ಣದ್ದಾಗಿದೆ.

ಐದನೆಯ ಬಣ್ಣ ” ಕೆಂಪು ” !
ಏಕೆಂದರೆ ನನ್ನ ತಂದೆ ಜಮ್ಮು ಕಾಶ್ಮೀರದಲ್ಲಿ ಹುತಾತ್ಮನಾದಾಗ ಆತನ ಶರೀರವನ್ನು ತ್ರಿವಣ೯ ಧ್ವಜದಲ್ಲಿ ಸುತ್ತಿ ತಂದಾಗ ಅದು ನನ್ನ ತಂದೆಯ ರಕ್ತದಿಂದ ಕೆಂಪು ಬಣ್ಣಕ್ಕೆ ತಿರುಗಿತ್ತು ಎಂದು ಹೇಳಿದಾಗ ಶಿಕ್ಷಕನ ಕಣ್ಣುಗಳಿಂದ ಧಾರಾಕಾರವಾಗಿ ನೀರು ಸುರಿಯುತ್ತಿತ್ತು.


– ನೀಲಕಂಠ ದಾತಾರ.

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!