ಹೊಸ ದೆಹಲಿ – ಸ್ವಾತಂತ್ರ್ಯ ಬಂದು ೭೦ ವರ್ಷಗಳೇ ಕಳೆದಿವೆ, ಸರ್ಕಾರಗಳು ಜನರಿಗಾಗಿ ಹಲವಾರು ಯೋಜನೆಗಳನ್ನು ಘೋಷಿಸುತ್ತಿವೆ ಆದರೂ ಮೀಸಲಾತಿ ಇನ್ನೂ ಮುಂದುವರೆದಿದೆ ಎಂದರೆ ಏನರ್ಥ. ಇನ್ನೂ ಎಷ್ಟು ತಲೆಮಾರು ಈ ಮೀಸಲಾತಿ ಮುಂದುವರೆಸುತ್ತೀರಿ ಎಂದು ಸುಪ್ರೀಂ ಕೋರ್ಟು ಪ್ರಶ್ನೆ ಮಾಡಿದೆ.
ಮಹಾರಾಷ್ಟ್ರದಲ್ಲಿ ಶೇ.೫೦ ಕ್ಕಿಂತಲೂ ಹೆಚ್ಚು ಮೀಸಲಾತಿ ಪ್ರಮಾಣ ಹೆಚ್ಚಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಕಾಲಕ್ಕೆ ಸರ್ವೋಚ್ಚ ನ್ಯಾಯಾಲಯ ಸರ್ಕಾರಗಳಿಗೆ ಈ ಪ್ರಶ್ನೆ ಹಾಕಿದ್ದು ಇಷ್ಟು ವರ್ಷಗಳ ನಂತರವೂ ಮೀಸಲಾತಿ ಇದೆಯೆಂದರೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಆಗಲ್ಲ ಎಂದರ್ಥವೇ ಎಂದು ಕೇಳಿದೆ.