spot_img
spot_img

How To Increase Hemoglobin In Kannada- ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಿ

Must Read

- Advertisement -

How To Increase Hemoglobin In Kannada:

ಈಗ ಯಾರಿಗೆ ನೋಡಿದರೂ ಹಿಮೋಗ್ಲೋಬಿನ್ ಅಂಶ ಕಡಿಮೆ ಇದೆ ಎಂದು ವೈದ್ಯರು ಎಲ್ಲರಿಗೂ ಹೇಳುತ್ತಲೇ ಇರುತ್ತಾರೆ. ಇದಕ್ಕೆ ಕಾರಣಗಳು ಸುಮಾರು ಇವೆ ಎಂದು ಹೇಳಬಹುದು. ಅದರಲ್ಲೂ ಪುರುಷರಿಗಿಂತ ಮಹಿಳೆಯರಿಗೆ ಹಿಮೋಗ್ಲೋಬಿನ್ ಕಡಿಮೆಯಾಗಿರುತ್ತದೆ. ಏಕೇಂದರೆ ಗರ್ಭಾವಸ್ಥೆಯಲ್ಲಿ  ಋತುಸ್ರಾವ ಆಗಿದ್ದಾಗ ಮಹಿಳೆಯರಿಗೆ ರಕ್ತದ ಕೊರತೆ ತುಂಬ ಜಾಸ್ತಿಯಾಗುತ್ತದೆ. ಹಾಗಾಗಿ ಮಹಿಳೆಯರು ಪ್ರತಿನಿತ್ಯ ಹಿಮೋಗ್ಲೋಬಿನ್ ಹೆಚ್ಚಿಸುವ ಆಹಾರಗಳನ್ನು ತಪ್ಪದೇ ಸೇವಿಸಬೇಕು. ಕೇವಲ ಮಹಿಳೆಯರಿಗೆ ಮಾತ್ರವಲ್ಲ ಪುರುಷರಲ್ಲೂ ಈ ರೀತಿಯ ತೊಂದರೆ ಆಗುತ್ತಿರುತ್ತದೆ. ಹಾಗಾಗಿ ಎಲ್ಲರೂ ಕೂಡ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುವ ಆಹಾರಗಳನ್ನು ಪ್ರತಿನಿತ್ಯವೂ ಸೇವಿಸಬೇಕು. ಹಿಮೋಗ್ಲೋಬಿನ್ ರಕ್ತದಲ್ಲಿ ಕಡಿಮೆಯಾದರೆ ವೈದ್ಯರು ಮಾತ್ರೆಗಳನ್ನು ಕೊಡುತ್ತಾರೆ. ನೀವು ಮಾತ್ರೆಗಳನ್ನು ಹೆಚ್ಚಾಗಿ ತೆಗೆದುಕೊಳ್ಳುವ ಬದಲು ಮನೆಯಲ್ಲೇ ಸಿಗುವ ಪದಾರ್ಥಗಳನ್ನು ಹೆಚ್ಚಾಗಿ ತೆಗೆದುಕೊಂಡರೆ ಯಾವ ಅಡ್ಡ ಪರಿಣಾಮಗಳು ಇಲ್ಲದೆ ರಕ್ತದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಿಕೊಳ್ಳಬಹುದು. ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುವ ಆಹಾರಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ.

ಪ್ರತಿನಿತ್ಯವೂ ಹಸಿರು ಸೊಪ್ಪನ್ನು ಸೇವಿಸಬೇಕು. ಹಾಗೆಯೇ ಇದರ ಜೊತೆಗೆ ತರಕಾರಿಗಳನ್ನು ಕೂಡ ಹೆಚ್ಚಾಗಿ ಸೇವಿಸಬೇಕು. ಪ್ರತಿನಿತ್ಯವೂ ನಾನಾ ವಿಧವಾದ ಸೊಪ್ಪಿನ ಪಲ್ಯವನ್ನು ಮಾಡಿ ತಿನ್ನುತ್ತಿರಬೇಕು. ಅಂದರೆ ಪಾಲಾಕ್ ಸೊಪ್ಪು, ಮೆಂತ್ಯ ಸೊಪ್ಪು, ಸಬ್ಬಾಕ್ಸಿ ಸೊಪ್ಪು, ಬಸಳೆ ಸೊಪ್ಪು ಹೀಗೆ ಮುಂತಾದವುಗಳು. ದೇಹದಲ್ಲಿ ಕಬ್ಬಿಣಾಂಶ ತುಂಬಾ ಹೆಚ್ಚಾಗಿದ್ದರೆ ಹಿಮೋಗ್ಲೋಬಿನ್ ಕೊರತೆ ಉಂಟಾಗುವುದಿಲ್ಲ. ಹಾಗಾಗಿ ಕಬ್ಬಿಣ ಹೆಚ್ಚಾಗಿರುವ ಆಹಾರಗಳನ್ನು ಪ್ರತಿನಿತ್ಯವೂ ಸೇವಿಸಬೇಕು. ತರಕಾರಿಗಳಲ್ಲಿ ಬೀಟ್ ರೂಟ್ ಮತ್ತು ಟೊಮೆಟೊ ಗಳನ್ನು ಹೆಚ್ಚಾಗಿ ಸೇವಿಸಬೇಕು. ಇವುಗಳನ್ನು ಪ್ರತಿನಿತ್ಯವೂ ಕಡ್ಡಾಯವಾಗಿ ಸೇವಿಸಿದರೆ ರಕ್ತದ ಪ್ರಮಾಣ ಹೆಚ್ಚಾಗುತ್ತದೆ.

- Advertisement -

ಇನ್ನು ಹಣ್ಣುಗಳಲ್ಲಿ ಕಿವಿ ಹಣ್ಣು, ದ್ರಾಕ್ಷಿ, ಕಿತ್ತಳೆ ಹಣ್ಣು, ಚಿಕ್ಕು ಹಣ್ಣುಗಳನ್ನು ಪ್ರತಿನಿತ್ಯವೂ ಸೇವಿಸಿದರೆ ಹಿಮೋಗ್ಲೋಬಿನ್ ಅಂಶ ಹೆಚ್ಚಾಗುತ್ತದೆ. ಇನ್ನು ರಾತ್ರಿ ಹೊತ್ತು ನೀರಿನಲ್ಲಿ ದ್ರಾಕ್ಷಿಯನ್ನು ನೆನೆಸಿ ಬೆಳಿಗ್ಗೆ ಎದ್ದು ತಿನ್ನಬಹುದು ಅಥವಾ ನೇರವಾಗಿ ಸಹ ತಿನ್ನಬಹುದು. ಕಾಫಿ ಟೀ ಹಾಲನ್ನು ತಯಾರಿ ಮಾಡಿಕೊಳ್ಳುವಾಗ ಸಕ್ಕರೆಯ ಬದಲು ಬೆಲ್ಲವನ್ನು ಉಪಯೋಗಿಸಿ. ಬೆಲ್ಲದಲ್ಲಿ ಸಾಕಷ್ಟು ಪ್ರಮಾಣದ ಕಬ್ಬಿಣಾಂಶ ಇರುವುದರಿಂದ ಬೆಲ್ಲವನ್ನು ಪ್ರತಿನಿತ್ಯ ಉಪಯೋಗಿಸಿದರೆ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗುತ್ತದೆ. ಇನ್ನು ಪ್ರತಿನಿತ್ಯವೂ ಹಸಿರು ಧಾನ್ಯಗಳನ್ನು ಸೇವಿಸಬೇಕು. ಅದರಲ್ಲೂ ಬಟಾಣಿ, ಜೋಳ, ಕಡಲೆ ಬೀಜಗಳನ್ನು ಸೇವಿಸಿದರೆ ಹಿಮೋಗ್ಲೋಬಿನ್ ಅಂಶ ಹೆಚ್ಚಾಗುತ್ತದೆ.

What Not To Eat To Increase Hemoglobin In Kannada?- ಹಿಮೋಗ್ಲೋಬಿನ್ ಹೆಚ್ಚಿಸಲು ಏನು ತಿನ್ನಬಾರದು

  • ದೇಹದಲ್ಲಿ ರಕ್ತ ರಚನೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವಂತಹ ಜೀವನಶೈಲಿಗೆ ಸಂಬಂಧಿಸಿದ ಇನ್ನೂ ಕೆಲವು ವಿಷಯಗಳಿವೆ.
  • ಚಹಾ, ಕಾಫಿ, ಕಾರ್ಬೊನೇಟೆಡ್ ಪಾನೀಯಗಳು, ಎನರ್ಜಿ ಡ್ರಿಂಕ್ಸ್ ಮುಂತಾದ ಕೆಫೀನ್ ಮಾಡಿದ ಪಾನೀಯಗಳನ್ನು ತಪ್ಪಿಸಿ. ಇವುಗಳ ಬಳಕೆಯು ಪೋಷಕಾಂಶಗಳ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತದೆ.
  • ಧೂಮಪಾನದಿಂದ ದೂರವಿರಿ, ಪಾಲಕ, ಕಾಫಿ, ಚಾಕೊಲೇಟ್, ಕಾರ್ಬೊನೇಟೆಡ್ ಪಾನೀಯಗಳಂತಹ ಆಹಾರದಲ್ಲಿ ಆಕ್ಸಲೇಟ್ ಇರುವ ಆಹಾರವನ್ನು ಸೇವಿಸಬೇಡಿ.
  • ಆಹಾರದಲ್ಲಿ ಕಬ್ಬಿಣದ ಪ್ರಮಾಣವನ್ನು ಹೆಚ್ಚಿಸಲು ನಿಂಬೆ ರಸ. ಕಬ್ಬಿಣದ ಮಡಕೆ ಬಳಸಿ. ನಿಮಗೆ ಹೊಟ್ಟೆಯ ಅನಿಲ ಸಮಸ್ಯೆ ಇದ್ದರೆ, ಅದನ್ನು ನಿಯಮಿತವಾಗಿ ಸರಿಪಡಿಸಲು ಗ್ಯಾಸ್ಟ್ರೋಎಂಟರಾಲಜಿಸ್ಟ್ ಅನ್ನು ಸಂಪರ್ಕಿಸಿ.
  • ನಿಮ್ಮ ಪೂರ್ಣ ದೇಹದ ತಪಾಸಣೆಗೆ ಹೋಗಿ ಮತ್ತು ಯಾವುದೇ ರೀತಿಯ ಚಿಕಿತ್ಸೆಯನ್ನು ಪಡೆಯಿರಿ ಪೌಷ್ಠಿಕಾಂಶದ ಸಮಸ್ಯೆಯ ಲಕ್ಷಣಗಳು ಕಂಡುಬಂದರೆ ಕಾಣಿಸಿಕೊಳ್ಳುತ್ತದೆ.
- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group