ಹಾಸನದ ಮಾನವ ಹಕ್ಕುಗಳ ಒಕ್ಕೂಟ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿ ಕಲಾಸಂಘದ ಆಶ್ರಯದಲ್ಲಿ 78ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ಪಕ್ಷದ ಕಚೇರಿಯಲ್ಲಿ ಹಿರಿಯ ಸಾಹಿತಿ ಗೊರೂರು ಅನಂತರಾಜು ಧ್ವಜಾರೋಹಣವನ್ನು ನೆರವೇರಿಸಿದರು.
ನಂತರ ಮಾತನಾಡಿದ ಗೊರೂರು ಅನಂತರಾಜು ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಬ್ರಿಟಿಷ್ ರು ಭಾರತವನ್ನು ಆವರಿಸಿಕೊಂಡು ನಮ್ಮನ್ನು ಗುಲಾಮಗಿರಿಗೆ ತಳ್ಳಿದ ಸಂದರ್ಭದಲ್ಲಿ ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ಮಾಡಿದ ಫಲವಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ. ಅನೇಕ ಮಹನೀಯರು ನಡೆಸಿದ ಸ್ವಾತಂತ್ರ್ಯ ಚಳವಳಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ. ಅಂತಹ ಮಹನೀಯರನ್ನು ನೆನೆಯುವ ಈ ದಿನ ತುಂಬಾ ಮಹತ್ವಪೂರ್ಣವಾದುದು.
ದೇಶದ ಏಕತೆ ಐಕ್ಯತೆಗೆ ನಾವು ಶ್ರಮಿಸಬೇಕಿದೆ. ನಮ್ಮ
ಪರಿಸರವನ್ನು ಪರಿಶುದ್ಧವಾಗಿ ನೋಡಿಕೊಂಡು ಹೋಗುವುದು ಒಂದು ದೇಶ ಸೇವೆ ಎಂಬುದನ್ನು ಮನಗಾಣಬೇಕಿದೆ. ಸ್ವಾತಂತ್ರ್ಯೋತ್ಸವ ಮನೆ ಮನಗಳ ಹಬ್ಬವಾಗಿ ಆಚರಿಸಬೇಕಿರುವುದು ಅವಶ್ಯವಾಗಿದೆ ಎಂದರು.
ಕಾಯ೯ಕ್ರಮದಲ್ಲಿ ಹಾಸನ ಜಿಲ್ಲಾ ಮಾನವ ಹಕ್ಕುಗಳ ಒಕ್ಕೂಟದ ಅಧ್ಯಕ್ಷ ಯಲಗುಂದ ಶಾಂತಕುಮಾರ ಮಾತನಾಡಿ ನಿರಂತರವಾದ ಹೋರಾಟದಲ್ಲಿ ಸಾವಿರಾರು ಜನರು ಮಡಿದಿದ್ದಾರೆ. ನಮಗೆ ಸಿಕ್ಕಿರುವ ಸ್ವಾತಂತ್ರ್ಯ ವನ್ನು ಅಥ೯ಪೂಣ೯ಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಧ್ವಜಾರೋಹಣ ಕಾಯ೯ಕ್ರಮದಲ್ಲಿ ಕಾಯಾ೯ಧ್ಯಕ್ಷ ವಿಜಯಕುಮಾರ, ಮಹಾಂತೇಶ, ಕಾಯ೯ದಶಿ೯ ಕುಮಾರ, ನಿದೇ೯ಶಕರಾದ ಹೇಮಂತ ಕುಮಾರ, ಚಂದ್ರೇಗೌಡ, ಗಿರೀಶ, ರುದ್ರೇಗೌಡ, ಪಂಕಜ, ಸಾವಿತ್ರಿ ಭಾಗವಹಿಸಿದ್ಧರು. ಇದೇ ಸಂದರ್ಭದಲ್ಲಿ ಸಾಹಿತಿ ಗೊರೂರು ಅನಂತರಾಜು, ನಟ ಹೇಮಂತ್ ಕುಮಾರ, ವೀರಶೈವ ಸಮಾಜದ ಮುಖಂಡರು ಹೇಮಂತ್ ಕುಮಾರ, ವಿಶ್ವ ಕಮ೯ ಮುಖಂಡರು ಕುಮಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.