spot_img
spot_img

ಧ್ವಜಾರೋಹಣ ಮಾಡದ ಹುಲಸೂರ ಎಸ್.ಬಿ.ಐ ಬ್ಯಾಂಕ್ ಸಾರ್ವಜನಿಕರ ಆಕ್ರೋಶ

Must Read

ಬೀದರ – ದೇಶದ ತುಂಬೆಲ್ಲ ಹರ್ ಘರ್ ತಿರಂಗಾ ಅಡಿಯಲ್ಲಿ ಮನೆಗಳು, ಸಂಘ ಸಂಸ್ಥೆಗಳು, ಸಾರ್ವಜನಿಕ ಬ್ಯಾಂಕುಗಳು ಸೇರಿದಂತೆ ಎಲ್ಲಾ ಕಡೆಯೂ ಧ್ವಜಾರೋಹಣ ಮಾಡಬೇಕೆಂಬುದನ್ನು ಹುಲಸೂರ ಪಟ್ಟಣದ ಎಸ್ ಬಿ ಐ ಬ್ಯಾಂಕು ಉಲ್ಲಂಘಿಸಿದೆ.

ಬೀದರ ಜಿಲ್ಲೆಯ ನೂತನ ತಾಲ್ಲುಕಾಗಿರುವ ಹುಲಸೂರ ಪಟ್ಟಣದಲ್ಲಿ ಶನಿವಾರ ಮಧ್ಯಾನ ಹನ್ನೆರಡು ಗಂಟೆಯಾದರೂ ಕಚೇರಿ ಮೇಲೆ ಧ್ವಜ ಹಾರಿಸದೇ ಇರುವುದಕ್ಕೆ ಪಟ್ಟಣದ ಎಸ್.ಬಿ.ಐ ಬ್ಯಾಂಕ್ ಎದುರು ಸಾರ್ವಜನಿಕರು ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ,ರಾಜ್ಯ ಸರಕಾರ ಹಾಗು ಜಿಲ್ಲಾಆಡಳಿತ ಎಲ್ಲಾ ಸರಕಾರಿ ಕಚೇರಿಗಳ ಮೇಲೆ ಆಗಷ್ಟ 13ರಿಂದ 15ರ ವರೆಗೆ ತ್ರಿವರ್ಣ ಧ್ವಜ ಹಾರಿಸಬೇಕೆಂದು ಆದೇಶ ಮಾಡಿವೆ ಆದರೆ ಸರಕಾರದ ಆದೇಶಕ್ಕೆ ಕ್ಯಾರೆ ಎನ್ನದ ಎಸ್ ಬಿ ಐ ಬ್ಯಾಂಕು ಶಾಖೆಯ ಮೇಲೆ ತ್ರಿವರ್ಣ ಧ್ವಜ ಹಾರಿಸದೆ ಇರುವುದಕ್ಕೆ ಸಾರ್ವಜನಿಕರು ಆಕ್ರೋಶ ಭರಿತರಾಗಿದ್ದರು.

ಈ ಸುದ್ದಿ ತಿಳಿದ ಕೂಡಲೆ ಸ್ಥಳಕ್ಕೆ ಹುಲಸೂರ ತಹಸಿಲ್ದಾರ ಶಿವಾನಂದ ಮೇತ್ರೆ ರವರು ಸ್ಥಳಕ್ಕೆ ಭೇಟಿ ನೀಡಿ ಬ್ಯಾಂಕ್ ಮ್ಯಾನೇಜರ್ ಗೆ ಕರೆ ಮಾಡಿದರೆ ಸ್ವಿಚ್ ಆಫ್ ಆಗಿರುವ ಹಿನ್ನೆಲೆ ಬೀದರನ ಲೀಡ್ ಬ್ಯಾಂಕ್ ನ ಅಧಿಕಾರಿಗಳಿಗೆ ಕರೆ ಮಾಡಿ ತ್ರಿವರ್ಣ ಧ್ವಜ ಹಾರಿಸದೇ ಇರುವುದಕ್ಕೆ ಅವರ ಮೇಲೆ ಕ್ರಮಕೈಗೋಳ್ಳಬೇಕು ಹಾಗು ಕೂಡಲೆ ಧ್ವಜ ಹಾರಿಸಲು ತಿಳಿಸಬೇಕೆಂದು ಎಂದು ತಿಳಿಸಿದರು.

ಬ್ಯಾಂಕ್ ಅಧಿಕಾರಿಗಳ ಜೊತೆ ಮಾತನಾಡಿರುವುದನ್ನು ತಹಶೀಲ್ದಾರರು.

ತಿಳಿಸಿದಾಗ ಸಾರ್ವಜನಿಕರು ಶಾಂತಗೊಂಡರು.

ಈ ಸಂದರ್ಭದಲ್ಲಿ ಯುವ ಮುಖಂಡರಾದ ಸಂಗಮೇಶ ಭೋಪಳೆ,ಗುಲಾಮ ಬಡಾಯಿ,ರಮೇಶ ಭೋಪಳೆ,ವಿರೇಶ ಪಂಚಾಳ, ದಿನೇಶ ಮಂಗಾ, ಮಲ್ಲು ಬಡದಾಳೆ, ರಾಜೇಂದ್ರ ಜಾಧವ,ಹಾಗು ಹಲವಾರು ಸಾರ್ವಜನಿಕರು ಹಾಜರಿದ್ದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!