ಸಿಂದಗಿ – ಸಿಂದಗಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಲೊಯೋಲ ಶಿಕ್ಷಣ ಸಂಸ್ಥೆಯಲ್ಲಿ ನೂತನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಕಾರ್ಯಕ್ರಮ ಹಾಗೂ ಅಂತರ್ಧರ್ಮೀಯ ಪ್ರಾರ್ಥನಾ ಸಭೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ನೂತನ ಪ್ರಾಂಶುಪಾಲರಾದ ಫಾದರ್ ಲ್ಯಾನ್ಸಿ ಫರ್ನಾಂಡಿಸ್ ಅವರು ಹೊಸ ಶೈಕ್ಷಣಿಕ ವರ್ಷವು ನಮ್ಮೆಲ್ಲರಿಗೂ ಹೊಸತನ್ನು ಕಲಿಯುವ ಅವಕಾಶ ಮಾಡಿಕೊಡಲಿ,ಎಲ್ಲರಿಗೂ ಯಶಸ್ಸು ದೊರೆಯುವಂತೆ ಆ ದೇವರು ಕರುಣಿಸಲಿ. ಜಗತ್ತಿನಲ್ಲಿ ಮಾನವೀಯತೆಯೇ ಶ್ರೇಷ್ಠ ಧರ್ಮ ನಾವೆಲ್ಲರೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜಕ್ಕಾಗಿ ಪ್ರಯತ್ನಿಸೋಣ ಎಂದು ಹೇಳಿದರು.
ಸಮಾರಂಭದಲ್ಲಿ ಶಾಲೆಯ ಶಿಕ್ಷಕರಾದ ಶ್ರೀ ಆರ್ ವಾಯ್ ಶಿಂಧೆ, ವಿಜಯ್ ನಾಯ್ಕ, ಸಿದ್ದಪ್ಪ ಎಂ,ನಿಂಗರಾಜ್, ಬಸವಲಿಂಗ, ಸುನಿಲ್,ಬ್ರದರ್ ನೋಯಲ್, ಬ್ರದರ್ ಸಂತೋಷ್ ಶಿಕ್ಷಕಿಯರಾದ ಶ್ರೀಮತಿ ಪದ್ಮಿನಿ,ಲಕ್ಷ್ಮಿ, ಮಂಜುಳಾ,ಅನಿತಾ,ವಿದ್ಯಾ ಸೀಮಾ ಹಾಗೂ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದ್ದರು.