ಹುನಗುಂದ: ಇಲ್ಲಿನ ಹುನಗುಂದ ಪಟ್ಟಣ ಪತ್ತಿನ ಸಹಕಾರಿ ಸಂಘವು ಶೇರು ಸದಸ್ಯರ ಮತ್ತು ಗ್ರಾಹಕರ ಸಹಕಾರದಿಂದ ಸನ್ ೨೦೨೪-೨೫ ನೇ ಸಾಲಿನಲ್ಲಿ ೬.೧೦ ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಹುನಗುಂದ ಪಟ್ಟಣ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಜಶೇಖರ ಪಿ. ಚಿತ್ತರಗಿ ಹೇಳಿದರು.
ಸಂಘದ ಕಾರ್ಯಾಲಯದಲ್ಲಿ ನಡೆದ ೧೩ ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ಪ್ರಸಕ್ತ ಸಾಲಿನಲ್ಲಿ ೮೭೮ ಸದಸ್ಯರನ್ನು ಹೊಂದಿದ್ದು. ೨೧.೮೨ ಲಕ್ಷ ಶೇರು ಬಂಡವಾಳವನ್ನು ಹೊಂದಿದೆ, ೧೧.೪೦ ಲಕ್ಷ ನಿಧಿಗಳನ್ನು ಹೊಂದಿ,೫.೫ ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದ್ದು, ೪.೫೦ ಕೋಟಿ ಠೇವು ಸಂಗ್ರಹವಾಗಿದೆ, ೪.೩೩ ಕೋಟಿ ಸಾಲವನ್ನು ವಿತರಿಸಲಾಗಿದೆ, ಸಂಘವು ಸಂಪೂರ್ಣ ಗಣಕೀಕೃತಗೊಂಡಿವೆ ಎಂದರು.
ಸಂಘದ ನಿರ್ದೇಶಕ ವೀರಭದ್ರಯ್ಯ ಬಿ ಸರಗಣಾಚಾರಿ ಮಾತನಾಡಿ, ಮಾರ್ಚ ೩೧ ಅಂತ್ಯಕ್ಕೆ ೧೯.೭೦ ಲಕ್ಷ ಲಾಭವಾಗಿದ್ದು ಅದರಲ್ಲಿ ಕ್ಯಾಶ್ ಸರ್ಟಿಪಿಕೇಟ್ ಠೇವು ಬಡ್ಡಿ, ಮಕ್ಕಳ ಭವಿಷ್ಯನಿಧಿಗಳ ಬಡ್ಡಿ ಮುಂಗಡ ೧೩.೬೦ ಲಕ್ಷ ಕೊಡಲಾಗಿ ಉಳಿದದ್ದು ೬.೧೦ ಲಕ್ಷ ನಿವ್ವಳ ಲಾಭವಾಗಿದ್ದು ಪ್ರಸಕ್ತ ವರ್ಷದಲ್ಲಿ ಶೇಕಡಾ ೬ ಡಿವಿಡೆಂಡ ನೀಡಲಾಗುವುದು ಎಂದರು.
ಸoಘದ ನಿರ್ದೇಶಕ ಸಾಂತಪ್ಪ ಎಸ್ ಹೊಸಮನಿ ಮಾತನಾಡಿ ಮುಂದಿನ ೨೦೨೬ ಅಂತ್ಯಕ್ಕೆ ಸಂಘವು ಇನ್ನಷ್ಟು ಪ್ರಗತಿಹೊಂದಲು ಸಂಘದ ಗ್ರಾಹಕರು ಸಹಕರಿಸಬೇಕು ಹಾಗೂ ಸಿಬ್ಬಂದಿಗಳು ಶ್ರಮಿಸಬೇಕು ಎಂದು ಹೇಳುತ್ತಾ, ಸಾಲ ವಿತರಣೆ ಹಾಗೂ ವಸೂಲಾತಿ ಬಗ್ಗೆ ಸಲಹೆ ಸೂಚನೆಗಳನ್ನು ಸಂಘದ ಸಿಬ್ಬಂದಿಗಳಿಗೆ ಸಲಹೆಗಳನ್ನು ನೀಡಿದರು.
ಮುಖ್ಯ ಕಾರ್ಯನಿರ್ವಾಹಕ ರಮೇಶ ಕೆ ತಾರಿವಾಳ ಮಾತನಾಡಿ ಸಂಘವು ೨೦೧೨ ರಲ್ಲಿ ೪ ಲಕ್ಷ ಬಂಡವಾಳದೊಂದಿಗೆ ಪ್ರಾರಂಭವಾಗಿ ಮಾರ್ಚ ೨೦೨೫ ಅಂತ್ಯಕ್ಕೆ ೫.೫ ಕೋಟಿ ದುಡಿಯುವ ಬಂಡವಾಳದೊಂದಿಗೆ ಪ್ರಗತಿ ಹೊಂದಿದೆ ಇದಕ್ಕೆ ನಮ್ಮ ಸಂಘದ ಗ್ರಾಹಕರು ಹಾಗೂ ಸಂಘದ ಆಡಳಿತ ಮಂಡಳಿ, ಸಂಘದ ಸಿಬ್ಬಂದಿಗಳ ಶ್ರಮವೇ ಕಾರಣ ಎಂದು ಹೇಳಿದರು.
ಸಂಘದ ಸಿಬ್ಬಂದಿ ಲಕ್ಷ್ಮವ್ವ ಎ ಪತ್ತಾರ ಮಾತನಾಡಿ ಪ್ರಸಕ್ತ ವರ್ಷದಲ್ಲಿ ೧೨.೩ ಕೋಟಿ ವಹಿವಾಟು ನಡೆಸಿದ್ದು,ಸಂಘವು ಸಂಪೂರ್ಣ ಭದ್ರತೆಯಲ್ಲಿದ್ದು, ಸಂಘದ ಹೆಸರಿನಲ್ಲಿ ೩೯.೪೫ ಬ್ಯಾಂಕಿನ ಹಲವಾರು ಬ್ಯಾಂಕುಗಳಲ್ಲಿ ಶಿಲ್ಕು ಇದ್ದು, ೧೭.೦೮ ಲಕ್ಷ ಠೇವಣಿ ಇಟ್ಟಿದ್ದು, ಸಂಘದ ಭದ್ರತೆಗಾಗಿ ಇನ್ಸೂರನ್ಸ್ ಮಾಡಲಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಆಡಳಿತ ಅಧ್ಯಕ್ಷ ರಾಜಶೇಖರ ಪಿ ಚಿತ್ತರಗಿ, ನಿರ್ದೇಶಕರಾದ ಸಾಂತಪ್ಪ ಎಸ್ ಹೊಸಮನಿ, ಮಂಜುನಾಥ ಆರ್.ರೇವಣಕರ,ಈರಣ್ಣ ಸಿ ಮ್ಯಾಗೇರಿ, ಅಶೋಕ ಮಲ್ಲಪ್ಪ ಕಲಾದಗಿ, ವೀರಭದ್ರಯ್ಯ ಬಿ ಸರಗಣಾಚಾರಿ, ಬಸವರಾಜ ಎಸ್ ಕಂಬಾಳಿಮಠ, ಶಿವಕುಮಾರ ಕೆ ತಾರಿವಾಳ, ಅನಂತರಾವ್ ವ್ಹಿ ಪತ್ತಾರ, ಹನಮಂತಪ್ಪ ಎಚ್ ಕುಷ್ಟಗಿ, ಫರಿಜಾನ್ ಎಲ್ ನಾಯಕ ಸೇರಿದಂತೆ ಅನೇಕರು ಇದ್ದರು.ಸಂಘದ ಸಿಬ್ಬಂದಿಗಳಾದ ಶಾಂತಾ ಗಣಾಚಾರಿ ಸ್ವಾಗತಿಸಿ, ಸಂಗಮೇಶ ಎಸ್ ಹಳಪೇಟಿ ವಂದಿಸಿದರು.

