ಬೀದರ – ನಾನು ಕಾಡಿನ ಹುಲಿ- ಬಿಜೆಪಿ ಸರ್ಕಸ್ ಸಿಂಹ… ಹೀಗೆಂದು ಹುಮನಬಾದ ಶಾಸಕ ರಾಜಶೇಖರ ಪಾಟೀಲ ಗುಡುಗಿದ್ದಾರೆ.
ಗಡಿ ಜಿಲ್ಲೆಯ ಬೀದರ ನಲ್ಲಿ ನಾನು ಕಾಡಿನಲ್ಲಿ ನಿರ್ಭೀತಿಯಿಂದ ಇರುವ ರಾಜಾ ಹುಲಿ ಈ ಹುಲಿಯ ಎದುರಿಗೆ ಸಚಿವ ಭಗವಂತ ಖೂಬಾ ಅವರು ಪರಿಚಯಿಸಿದ ಸರ್ಕಸ್ ಸಿಂಹದ ಆಟ ನಡೆಯೋದಿಲ್ಲ ಎಂದು ಶಾಸಕ ರಾಜಶೇಖರ ಬಿ.ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು
ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಮಹಿಳಾ ಘಟಕ ಜಿಲ್ಲೆಯ ಹುಮನಾಬಾದನಲ್ಲಿ ಶನಿವಾರ ನಡೆಸಿದ ಪ್ರತಿಭಟನೆ ವೇಳೆ ಅವರು ಮಾತನಾಡಿದರು.
ದೇಶದ ಜನಸಾಮಾನ್ಯರ ಹೊಟ್ಟೆ ತುಂಬೊದು ಮೋದಿಯವರ ಮನ್ ಕು ಬಾತ್ ನಿಂದಲ್ಲ. ಕೊಟ್ಟ ಮಾತಿನಿಂದ ಅವರು ಧನ್ ಕಿ ಬಾತ್ ಆರಂಭಿಸಬೇಕು ಎಂದು ಪಾಟೀಲರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.ಕಾಗ್ರೆಸ್ ಅವಧಿಯಲ್ಲಿನ ಗ್ಯಾಸ್ ರಿಫಿಲಿಂಗ್, ಪೆಟ್ರೋಲ, ಡಿಸೇಲ, ಅಡುಗೆ ಎಣ್ಣೆ ಬೆಲೆ ಈಗ ದ್ವಿಗುಣಗೊಂಡಿದೆ. ಬಿಪಿಎಲ್ ಜನರಿಗೆ ಕೇವಲ ಉಚಿತ ಖಾಲಿ ಸಿಲೆಂಡರ್ ನೀಡಿದರೆ ಸಾಲದು ರಿಫಿಲಿಂಗ್ ಕೂಡಾ ಉಚಿತವಾಗಿಸಬೇಕು ಎಂದರು. ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಸಂದರ್ಭದಲ್ಲಿ ಹುಮನಬಾದ ಶಾಸಕ ರಾಜಶೇಖರ ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರಾಜಶೇಖರ ಪಾಟೀಲ ಪುತ್ರ ಅಭಿಷೇಕ ಆರ್.ಪಾಟೀಲ, ಅಪ್ಸರಮಿಯ್ಯ, ಮಲ್ಲಪ್ಪ ಮಾಶೆಟ್ಟಿ, ಲಕ್ಷ್ಮಣರಾವ ಬುಳ್ಳಾ, ಅಪ್ಸರಮಿಯ್ಯ, ರಾಜಪ್ಪ ಇಟಗಿ, ಡಿ.ಆರ್.ಚಿದ್ರಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.