spot_img
spot_img

ನಾನು ಹಿಂದೂ ವಿರೋಧಿಯಲ್ಲ – ಶಾಸಕ ಶರಣು ಸಲಗರ

Must Read

ಬೀದರ – ಬೀದರಿನ ಪೀರ ಪಾಶಾ ದರ್ಗಾ ಪರಿಶೀಲಿಸಿದಾಗ ಅದು ಪೂರ್ವದಲ್ಲಿ ಅನುಭವ ಮಂಟಪ ಇರಬಹುದೇನೋ ಎಂಬ ಭಾವನೆ ನನಗೂ ಬಂದಿದೆ ಆದರೆ ಒಮ್ಮೆಲೆ ಯಾವುದೇ ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ ನಾನು ಹಿಂದೂ ವಿರೋಧಿಯಲ್ಲ. ಪ್ರತಿಷ್ಠಿತ ಚುನಾವಣೆಯಲ್ಲಿ ಎಪ್ಪತ್ತು ಸಾವಿರ ಮತಗಳಿಂದ ಎಲ್ಲಾ ಜನರು ನನ್ನನ್ನು ಆರಿಸಿ ತಂದಿದ್ದಾರೆ ನಾನು ಯಾರ ಪರವಾಗಿಯೂ ಮಾತನಾಡೋದಿಲ್ಲ ಎಂದು ಬಸವಕಲ್ಯಾಣ ಶಾಸಕ ಶರಣು ಸಲಗರ ಹೇಳಿದರು.

ನಾನು ಹಿಂದೂ ವಿರೋಧಿ ಎಂಬ ನನ್ನ ಮೇಲೆ ಮಾಡಿರುವ ಆರೋಪ ತಳ್ಳಿ ಹಾಕ್ತಿನಿ. ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕ ಹಾಗೂ ಆಂದೋಲಾ ಶ್ರೀಗಳನ್ನು ತಡೆದಿರುವುದು ಜಿಲ್ಲಾಡಳಿತದ ಕ್ರಮ ಎಂದು ಬಸವಕಲ್ಯಾಣ ಶಾಸಕ ಶರಣು ಸಲಗರ ಸ್ಪಷ್ಟಪಡಿಸಿದ್ದಾರೆ.

ಪೀರಪಾಷಾ ದರ್ಗಾ ದಲ್ಲಿ ಮೂಲ ಅನುಭವ ಮಂಟಪ ಕುರುಹು ಪತ್ತೆಯಾದ ಹಿನ್ನೆಲೆಯಲ್ಲಿ ಬಸವಕಲ್ಯಾಣಕ್ಕೆ ಆಗಮಿಸುತ್ತಿದ್ದ ಹಿಂದೂ ನಾಯಕರನ್ನು ತಡೆಯಲು ಸ್ಥಳೀಯ ಶಾಸಕ ಶರಣು ಸಲಗರ ಕುಮ್ಮಕ್ಕು ಇದೆ ಎಂದು ಆಕ್ರೋಶ ವ್ಯಕ್ತವಾಗಿತ್ತು ಈ ಹಿನ್ನಲೆಯಲ್ಲಿಂದು ಶಾಸಕರು ಸ್ಪಷ್ಟನೆ ನೀಡಿದ್ದಾರೆ.

ಪೀರ ಪಾಷಾ ದರ್ಗಾ ಮೇಲ್ನೊಟಕ್ಕೆ ಅನುಭವ ಮಂಟಪ ಅಥವಾ ಹಿಂದೂ ದೇವಾಲಯಗ ಇರಬಹುದೇನೋ ಅಂತ ಅನಿಸ್ತಿದೆ. ನಾನೂ ಕೂಡ ಹಲವಾರು ಸ್ವಾಮೀಜಿಗಳ ಜೊತೆ ಅದನ್ನು ಪರಿಶೀಲಿಸಿದ್ದೇನೆ. ಮುಖ್ಯಮಂತ್ರಿಗಳೂ ನಮ್ಮ ಜೊತೆ ಮಾತನಾಡಿದ್ದಾರೆ. ಹೀಗಾಗಿ ಸರ್ಕಾರ ಈಗ ವರದಿ ತರಿಸಿಕೊಂಡು ಸಿಎಂ ಬೊಮ್ಮಾಯಿ ಅವರು ಕ್ರಮ ಕೈಗೊಂಡ್ರೆ ನಮ್ಮ ಬೆಂಬಲವಿದೆ ಎಂದು ಸಲಗರ ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮಣ್ಣು ಉಳಿಸಿ ಹೋರಾಟಕ್ಕೆ ಬೆಂಬಲ ನೀಡೋಣ – ಅಶೋಕ ಅಲ್ಲಾಪೂರ

ಸಿಂದಗಿ - ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್...
- Advertisement -

More Articles Like This

- Advertisement -
close
error: Content is protected !!