spot_img
spot_img

ಸಿಂದಗಿ ಶಿಕ್ಷಣ ಕಾಶಿಯಾಗುವಂತೆ ಪ್ತಯತ್ನಿಸಿದ್ದೇನೆ – ಶಾಸಕ ಭೂಸನೂರ

Must Read

spot_img

ಸಿಂದಗಿ: ಕ್ಷೇತ್ರದ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ದೃಷ್ಠಿಕೋನದಲ್ಲಿ ಸರಕಾರಿ ಪ್ರೌಢಶಾಲೆ, ಆದರ್ಶ ಶಾಲೆ, ಪದವಿ ಹಾಗೂ ಪಿಯು ಕಾಲೇಜುಗಳನ್ನು ತಂದು ಶಿಕ್ಷಣದ ಕ್ರಾಂತಿ ಹಬ್ಬಿಸಿದ್ದೇನೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಸಕ ರಮೇಶ ಭೂಸನೂರ ಹೇಳಿದರು.

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ,  ಸಹಯೋಗದಲ್ಲಿ 2021-22ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಮತ್ತು ಎನ್.ಎಸ್.ಎಸ್. ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಿಂದಗಿ ಶಿಕ್ಷಣದ ಕಾಶಿಯಾಗುವಂತೆ ಮಾಡಲು ನನ್ನ ಅವಧಿಯಲ್ಲಿ ಸರಕಾರಿ ಕಾಲೇಜು, ಪ್ರೌಢಶಾಲೆಗಳನ್ನು ಮಂಜೂರು ಮಾಡಿಸಿದ್ದೇನೆ ಅದಕ್ಕೆ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ಈ ತಾಲೂಕಿನ ಕೀರ್ತಿ ಹೆಚ್ಚಿಸಿ ತಂದೆ-ತಾಯಿಯ ಮುದ್ದಿನ ಮಕ್ಕಳಾಗಿ ಎಂದರು.

ಸಿ.ಎಮ್. ಮನಗೂಳಿ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ.ಎ.ಬಿ. ಸಿಂದಗಿ, ಪೊಲಿಸ್ ಉಪನೀರಿಕ್ಷಕ ನಿಂಗಣ್ಣ ಪೂಜಾರಿ, ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಸತೀಶಕುಮಾರ ಜಿ. ಮಾತನಾಡಿದರು.

ಈ ಸಂದರ್ಭದಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣಾ ರಾವೂರ, ಕ್ರೀಡಾ ವಿಭಾಗ ಮತ್ತು ಎನ್.ಎಸ್.ಎಸ್. ಘಟಕ -1 ಸಂಚಾಲಕ ಯಮನಪ್ಪ ಕೆಳಗೇರಿ, ಸೌಟ್ಸ್ ಗೈಡ್ ರೆಂಜರ್ ವಿಭಾಗದ ಸಂಚಾಲಕಿ ಶ್ರೀಮತಿ ನೀಲಮ್ಮ ಹತ್ತ, ಅರ್ಥಶಾಸ್ತ್ರವಿಭಾಗದ ಮುಖ್ಯಸ್ಥ ಕೃಷ್ಣಾರೆಡ್ಡಿ ಎಮ್, ಇತಿಹಾಸ ವಿಭಾಗದ ಮುಖ್ಯಸ್ಥೆ ಶ್ರೀಮತಿ ಆಯಿಶ ಸಿದ್ದಿಖ, ನಿರ್ವಹಣಾ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಅಮೀತ ಮಿರ್ಜಿ, ಸಾಂಸ್ಕತಿಕ, ರೋವರ್, ಎನ್.ಎಸ್.ಎಸ್. ಘಟಕ -2 ವಿಭಾಗದ ಸಂಚಾಲಕ ಡಾ. ಸೈಯದ್ ಮುಜೀಬ್ ಅಹ್ಮದ್, ಐ.ಕ್ಯೂ.ಎ.ಸಿ ಮತ್ತು ರೆಡ್ ಕ್ರಾಸ್ ಬಿಭಾಗದ ಸಂಚಾಲಕ ಸೈಯದ್ ಸಿರಾಜುದ್ದಿನ್ ಖಾದ್ರಿ, ವಾಣಿಜ್ಯ ಶಾಸ್ತ್ರವಿಭಾಗದ ಮುಖ್ಯಸ್ಥ ರಿಯಾಜ ಅಹದ ಜಾಗೀರದಾರ, ಉದ್ಯೋಗ ಕೋಶ ವಿಭಾಗದ ಸಂಚಾಲಕ ಮಿರಾಜಪಾಶಾ ಹಸನಲ್ಲಿ ಸೇರಿದಂತೆ ಬೋಧಕ — ಬೋಧಕೇತರ ಸಿಬ್ಬಂದಿ ವರ್ಗ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವೇದಿಕೆ ಮೇಲಿದ್ದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!