spot_img
spot_img

ಭಾವೈಕ್ಯತೆಯ ಕಂಪು ಪಸರಿಸಿದ ಇಬ್ರಾಹಿಂ ಸುತಾರ್ ನಿಧನ-ಸಂಸದ ಕಡಾಡಿ ಸಂತಾಪ

Must Read

- Advertisement -

ಮೂಡಲಗಿ: ಬಸವಾದಿ ಶರಣರ ವಚನಗಳನ್ನು ಗ್ರಾಮೀಣ ಪ್ರದೇಶ ಜನರ ಆಡು ಭಾಷೆಯಲ್ಲಿಯೇ ಹೇಳುವ ಮೂಲಕ ಕನ್ನಡಿಗರ ಮನಗೆದ್ದಿದ್ದ, ಸರ್ವಧರ್ಮಗಳ ಭಾವೈಕ್ಯತೆಗೆ ಶ್ರಮಿಸಿದ್ದ ಶ್ರೇಷ್ಠ ಸಂತ, ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಅವರು ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಅವರ ಕುಟುಂಬಕ್ಕೆ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುವುದಾಗಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸಂತಾಪ ವ್ಯಕ್ತಪಡಿಸಿದರು.

ಶನಿವಾರ ಫೆ-05 ರಂದು ಪತ್ರಿಕಾ ಹೇಳಿಕೆ ನೀಡಿರುವ ಸಂಸದ ಈರಣ್ಣ ಕಡಾಡಿ ಅವರು ಇಬ್ರಾಹಿಂ ಸುತಾರ್ ಸಂತರ ವಚನ ಹಾಗೂ ಸೂಫಿ ಸಂತರ ಪರಂಪರೆಯ ಆಶಯಗಳ ಹದಪಾಕವನ್ನು ಭಜನೆ, ಪ್ರವಚನ, ಸಂವಾದಗಳ ಮೂಲಕ ಉಣಬಡಿಸಿ, ಹಿಂದು-ಮುಸ್ಲಿಂ ಸಮುದಾಯಗಳ ನಡುವೆ ಭಾವೈಕ್ಯತೆಯ ಕೊಂಡಿಯಾಗಿದ್ದರು. ನಮ್ಮ ಪಕ್ಕದ ಮಹಾಲಿಂಗಪೂರದಲ್ಲಿ ಜನಿಸಿದ ಇಬ್ರಾಹಿಂ ಸುತಾರ್ ಅವರ ಪ್ರವಚನಗಳನ್ನು ನಾನು ಕೂಡಾ ಬಾಲ್ಯದಿಂದಲೇ ಕೇಳುವ ಹಾಗೂ ಹಲವಾರು ಕಾರ್ಯಕ್ರಮಗಳಲ್ಲಿ ಅವರೊಂದಿಗೆ ಭಾಗವಹಿಸಿದ ಸಂದರ್ಭಗಳನ್ನು ಸ್ಮರಿಸಿದರು. ಅವರ ನಿಧನದಿಂದ ನಾಡು ಒಬ್ಬ ಶ್ರೇಷ್ಠ ಸಂತನನ್ನು ಕಳೆದುಕೊಂಡಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group